ತಿರುಪತಿ:ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ತಮ್ಮ ಪುತ್ರ ಅನಂತ್​ ಹಾಗೂ ಭಾವಿ ಸೊಸೆ ರಾಧಿಕಾ ಜತೆಗೂಡಿ ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಇಂದು ಬೆಳಗ್ಗೆ ನಡೆದ ಅಭಿಷೇಕ ಹಾಗೂ ನಿಜಪಾದ ದರ್ಶನ ಸೇವೆಯಲ್ಲಿ ಅಂಬಾನಿ ಕುಟುಂಬ ಸಮೇತ ಪಾಲ್ಗೊಂಡಿದ್ದರು. ತಿರುಮಲ ತಿರುಪತಿ ದೇವಸ್ಥಾನ ಕಾರ್ಯ ನಿರ್ವಹಣಾಧಿಕಾರಿ ಧರ್ಮಾ ರೆಡ್ಡಿ ಅವರು ಅಂಬಾನಿ ಅವರನ್ನು ಸ್ವಾಗತಿಸಿ,ದರ್ಶನದ ವ್ಯವಸ್ಥೆ ಮಾಡಿದರು.
ಈ ಸಂದರ್ಭದಲ್ಲಿ ಮುಕೇಶ್​ ಅವರು ಒಂದೂವರೆ ಕೋಟಿ ರೂಪಾಯಿಗಳ ಡಿ.ಡಿಯನ್ನು ತಿರುಮಲನಿಗೆ ಅರ್ಪಿಸಿದರು. ಟಿಟಿಡಿ ಇಒ ಎ.ವಿ. ಧರ್ಮ ರೆಡ್ಡಿ ಅವರಿಗೆ ಈ ಡಿ.ಡಿ. ಹಸ್ತಾಂತರಿಸಿದರು. ನಂತರ ಟಿಟಿಡಿ ಗೋಶಾಲೆಗೆ ಭೇಟಿ ನೀಡಿದ ಮುಕೇಶ್​ ಅಂಬಾನಿ, ಗೋ ಪೂಜೆಯನ್ನು ದೊಡ್ಡ ಪ್ರಮಾಣದಲ್ಲಿ ಪ್ರಚಾರ ಮಾಡುತ್ತಿರುವ ಟಿಟಿಡಿಯ ಪ್ರಯತ್ನಗಳನ್ನು ಶ್ಲಾಘಿಸಿದರು.
ಮುಕೇಶ್​ ಅಂಬಾನಿ ಕುಟುಂಬದ ಭೇಟಿಯ ಸಂದರ್ಭದಲ್ಲಿ ರಂಗನಾಯಕುಲ ಮಂಟಪದಲ್ಲಿ ವಿದ್ವಾಂಸರಿಂದ ವೇದಾಶೀರ್ವಾದ ನಡೆಯಿತು. ‘ಎಲ್ಲರಿಗೂ ದೇವರು ಅನಗ್ರಹ ನೀಡಲು ಎಂದು ವೆಂಕಟೇಶ್ವರ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ’ ಎಂದೂ ಮುಕೇಶ್‌ ಅಂಬಾನಿ ಇದೇ ಸಂದರ್ಭದಲ್ಲಿ ತಿಳಿಸಿದರು.(ಏಜೆನ್ಸೀಸ್​)
VIDEO: ಶೃಂಗಸಭೆಯಲ್ಲಿ ಪಾಕ್​ ಪ್ರಧಾನಿಯ ಮರ್ಯಾದೆ ತೆಗೆದ ಇಯರ್​ ಫೋನ್​: ವಿಡಿಯೋ ವೈರಲ್
ಆ ನಿರ್ದೇಶಕ ಕೊಟ್ಟ ಕಿರುಕುಳ ಅಷ್ಟಿಷ್ಟಲ್ಲ: ಸ್ಯಾಂಡಲ್​ವುಡ್​ನಲ್ಲಿ ಮತ್ತೆ ME TOO- ನಟಿ ಆಶಿತಾ ಕಣ್ಣೀರು
Sign in to your account
Please enter an answer in digits:1 + fifteen =
Remember me
