ವಾಷಿಂಗ್ಟನ್:ಮುಂಬೈ ಮೇಲೆ 2008ರ ನವೆಂಬರ್ 26ರಂದು ನಡೆದಿದ್ದ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿ ತಹವ್ವರ್ ರಾಣಾ ದಾಳಿಯಲ್ಲಿನ ತನ್ನ ಪಾತ್ರಕ್ಕಾಗಿ ಪಾಕಿಸ್ತಾನದ ಅತ್ಯುನ್ನತ ಪದಕವನ್ನು ನೀಡುವಂತೆ ಪಾಕ್ ಸರ್ಕಾರಕ್ಕೆ ಒತ್ತಾಯ ಮಾಡಿದ್ದನಂತೆ!ಅಷ್ಟೇ ಅಲ್ಲ, ಆ ದಾಳಿಯಲ್ಲಿ ಮೃತಪಟ್ಟ 9 ಮಂದಿ ಲಷ್ಕರ್ ಎ ತೊಯ್ಬ (ಎಲ್‌ಇಟಿ) ಉಗ್ರರಿಗೆ ಪಾಕ್ ಸೇನೆಯ ಅತ್ಯುನ್ನತ ಗೌರವ ನೀಡಬೇಕು ಎಂದೂ ಒತ್ತಾಯಿಸಿದ್ದನಂತೆ!
ಅಮೆರಿಕದ ಸರ್ಕಾರವೇ ಅಲ್ಲಿನ ಫೆಡರಲ್ ನ್ಯಾಯಾಲಯಕ್ಕೆ ಈ ವಿಷಯವನ್ನು ತಿಳಿಸಿದೆ. ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ರಾಣಾನನ್ನು ಭಾರತದ ಮನವಿ ಮೇರೆಗೆ ಕಳೆದ ಜೂನ್ 10ರಂದು ಲಾಸ್ ಏಂಜಲೀಸ್‌ನಲ್ಲಿ ಮತ್ತೆ ಬಂಧಿಸಲಾಗಿದ್ದು, ರಾಣಾನನ್ನು ಭಾರತಕ್ಕೆ ಹಸ್ತಾಂತರ ಮಾಡುವುದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ಲಾಸ್ ಏಂಜಲೀಸ್‌ನ ಜಿಲ್ಲಾ ಕೋರ್ಟ್, ಮುಂದಿನ ವಿಚಾರಣೆಯನ್ನು 2021ರ ಫೆಬ್ರವರಿ 12ಕ್ಕೆ ನಿಗದಿಪಡಿಸಿದೆ.
ಇದನ್ನೂ ಓದಿ:ಮುಂಬೈ ಬ್ಲಾಸ್ಟ್​ ಸಂಚುಕೋರ ಹಫೀಜ್​ ಜೈಲಲ್ಲೇ ಇಲ್ಲ! ಬಯಲಾಯ್ತು ಪಾಕ್​ ಬಣ್ಣ…
ಮತ್ತೊಬ್ಬ ಸಂಚುಕೋರ ಡೇವಿಡ್ ಹೆಡ್ಲಿ 26/11 ದಾಳಿಗೂ ಮುನ್ನ ಅದರ ಬಗ್ಗೆ ರಾಣಾನೊಂದಿಗೆ ಚರ್ಚಿಸಿದ್ದ. ಜತೆಗೆ ದಾಳಿ ನಡೆಸಬೇಕಾದ ಸ್ಥಳಗಳ ವಿಡಿಯೋ ಮತ್ತು ಫೋಟೋಗಳನ್ನು ಅವನೊಂದಿಗೆ ಹಂಚಿಕೊಂಡಿದ್ದ.ದಾಳಿಯಲ್ಲಿನ ತನ್ನ ಪಾತ್ರಕ್ಕಾಗಿ ತನಗೆ ಉನ್ನತ ಪದಕ ಸಿಗಬೇಕು ಎಂಬ ಬೇಡಿಕೆ ಇರಿಸಿದ್ದ ಎಂದು ಭಾರತದ ಪರ ವಕೀಲ ನಿಕೋಲಾ ಟಿ ಹುನ್ನಾ ಹೇಳಿದ್ದಾರೆ. 12 ಭಯೋತ್ಪಾದಕ ಕೃತ್ಯಗಳಿಗೆ ಸಂಬಂಧಿಸಿದಂತೆ ಹೆಡ್ಲಿಯನ್ನು ಅಮೆರಿಕದಲ್ಲಿ 2009ರಲ್ಲಿ ಬಂಧಿಸಲಾಗಿದ್ದು, ಆತನಿಗೆ 35 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಮುಂಬೈ ದಾಳಿಗೆ 12 ವರ್ಷ- ಸಾವಿಗೇ ಸವಾಲೆಸೆದು ಹುತಾತ್ಮರಾದ ಯೋಧರಿವರು…
ವಿಧ್ವಂಸಕ ಕೃತ್ಯಕ್ಕೆ ಯೋಜನೆ ರೂಪಿಸಿದ್ದು ನಿಜ ಎಂದು ಬಾಯ್ಬಿಟ್ಟ ಉಗ್ರ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen + nineteen =
Remember me
