ಮುಂಬೈ:ತನ್ನ ಗೆಳೆಯನ ಜತೆ ದೈಹಿಕ ಸಂಬಂಧ ಬೆಳೆಸಿ ನಂತರ ಅತ್ಯಾಚಾರದ ಕೇಸ್‌ ಹಾಕಿ ಗೆಳೆಯನನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಯುವತಿಯೊಬ್ಬಳಿಗೆ ಮುಂಬೈ ಹೈಕೋರ್ಟ್‌ 25 ಸಾವಿರ ರೂಪಾಯಿಗಳ ದಂಡ ವಿಧಿಸಿದೆ.
ಮಹಾರಾಷ್ಟ್ರ ಪೊಲೀಸ್ ಕಲ್ಯಾಣನಿಧಿಗೆ ನಾಲ್ಕು ವಾರದೊಳಗೆ 25 ಸಾವಿರ ರೂಪಾಯಿಗಳ ದಂಡದ ಹಣವನ್ನು ಪಾವತಿಸಬೇಕು ಎಂದು ನ್ಯಾಯಮೂರ್ತಿಗಳಾದ ಆರ್‌.ಡಿ. ಧನುಕಾ ಮತ್ತು ವಿ.ಜಿ. ಬಿಶ್ತ್ ಅವರನ್ನೊಳಗೊಂಡ ವಿಭಾಗೀಯ ಪೀಠ ಸೂಚಿಸಿದೆ.
ಪಾಲ್ಗರ್ ಜಿಲ್ಲೆಯ ನಾಲಾಸೊಪರಾ ಪೊಲೀಸ್ ಠಾಣೆಯಲ್ಲಿ ಮಾರ್ಚ್ 16ರಂದು ಮಹಿಳೆಯೊಬ್ಬರು ತನ್ನ ಗೆಳೆಯ ಮಾದಕವಸ್ತು ಸೇವಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಿಸಿದ್ದಳು. ಇದರ ಅನ್ವಯ ಯುವಕನ ವಿರುದ್ಧ ಕೇಸ್‌ ದಾಖಲಾಗಿತ್ತು. ವಿಚಾರಣೆ ನಡೆಯುತ್ತಿತ್ತು.
ನಂತರ ಯುವತಿ ತಾನು ಸಲ್ಲಿಸಿದ್ದ ಎಫ್‌ಐಆರ್‌ ರದ್ದು ಮಾಡುವಂತೆ ಕೋರಿದ್ದಳು. ಆದರೆ ಒಮ್ಮೆ ಸಲ್ಲಿಸಿದ ಎಫ್ಐಆರ್‌ ರದ್ದು ಆಗದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಮೊರೆ ಹೋಗಿದ್ದಳು. ತಾನು ಗೆಳೆಯನ ಜತೆ ಸಂಬಂಧ ಹೊಂದಿದ್ದೆ. ಪಾಲಕರ ಒತ್ತಾಯಕ್ಕೆ ಮಣಿದು ಸುಳ್ಳಾಗಿ ಅತ್ಯಾಚಾರ ಕೇಸ್‌ ಹಾಕಿದ್ದೆ. ದಯವಿಟ್ಟು ಎಫ್‌ಐಆರ್‌ ರದ್ದು ಮಾಡಿ ಎಂದುಕೋರಿದ್ದಳು.
ಇದನ್ನೂ ಓದಿ:ಅರ್ಚಕ ನಾರಾಯಣಾಚಾರ್‌ ಪುತ್ರಿಯರು ಹಿಂದೂಗಳಲ್ಲ: ಪರಿಹಾರದ ಚೆಕ್‌ನಿಂದ ಸತ್ಯ ಬಯಲು…!
ಸುಖಾಸುಮ್ಮನೆ ಯುವಕನ ವಿರುದ್ಧ ಕೇಸ್‌ ಹಾಕಿ ಆತನನ್ನು ವಿನಾಕಾರಣ ಕೋರ್ಟ್‌ ಅಲೆಯುವಂತೆ ಮಾಡಿದ್ದೂ ಅಲ್ಲದೇ ಕೋರ್ಟ್‌ ಸಮಯವನ್ನು ವ್ಯರ್ಥ ಮಾಡಿದ ಕಾರಣ, ಕೋರ್ಟ್‌ ಯುವತಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿದೆ. ಒಂದು ವೇಳೆ ಈ ಹಣವನ್ನು ಪಾವತಿ ಮಾಡದೇ ಹೋದರೆ, ಗೆಳೆಯನ ವಿರುದ್ಧ ಎಫ್‌ಐಆರ್ ರದ್ದುಪಡಿಸಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಲಾಗುವುದು ಎಂದೂ ಕೋರ್ಟ್ ಎಚ್ಚರಿಕೆ ನೀಡಿದೆ.
ಎಫ್‌ಐಆರ್‌ಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ಆರೋಪ ಪಟ್ಟಿ ಕೂಡ ಸಲ್ಲಿಸಲಿದ್ದಾರೆ. ಒಂದು ವೇಳೆ ಕೋರ್ಟ್ ಎಫ್‌ಐಆರ್ ರದ್ದುಪಡಿಸಲು ಒಲವು ತೋರಿದಲ್ಲಿ ಮಹಿಳೆಗೆ ಭಾರಿ ಮೊತ್ತದ ದಂಡ ವಿಧಿಸಬೇಕೆಂದು ಸರ್ಕಾರ ಪರ ವಕೀಲರು ಮನವಿ ಮಾಡಿದ್ದರು. ಇದನ್ನು ಕೋರ್ಟ್‌ ಮಾನ್ಯ ಮಾಡಿದೆ.
ಅರ್ಚಕ ನಾರಾಯಣಾಚಾರ್‌ ಪುತ್ರಿಯರು ಹಿಂದೂಗಳಲ್ಲ: ಪರಿಹಾರದ ಚೆಕ್‌ನಿಂದ ಸತ್ಯ ಬಯಲು…!

ಚೆನ್ನೈ ಯುವತಿ ಲಂಡನ್‌ನಲ್ಲಿ ಅಪಹರಣ- ಲವ್‌ ಜಿಹಾದ್‌ ಪ್ರಕರಣಕ್ಕೆ ಜಾಕೀರ್‌ ನಾಯ್ಕ್‌ ಲಿಂಕ್‌?

ಬೃಹತ್‌ ದಾಳಿಗೆ ಸ್ಕೆಚ್‌ ಹಾಕುತ್ತಿದ್ದನೇ ಈತ? ಬ್ಯಾಗ್‌ನಲ್ಲಿದ್ದ ಕೋಡ್‌ವರ್ಡ್ಸ್‌ ಏನು ಹೇಳುತ್ತಿವೆ?

ಜಪಾನ್‌ನಲ್ಲಿ ನಿರ್ಮಾಣವಾಗಿದೆ ಪಾರದರ್ಶಕ ಟಾಯ್ಲೆಟ್‌: ಥೂ… ಎನ್ನುವ ಮುನ್ನ ಇದನ್ನು ಓದಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 + 7 =
Remember me
