ಮುಂಬೈ:ಡಿಸೆಂಬರ್​ 27 ಬಾಲಿವುಡ್​ ನಟ ಸಲ್ಮಾನ್​ ಖಾನ್​ ಹುಟ್ಟುಹಬ್ಬ. ಪ್ರತಿವರ್ಷವೂ ಅದ್ಧೂರಿಯಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ನಟ, ಈ ಸಲ ಕೋವಿಡ್ ಹಿನ್ನೆಲೆಯಲ್ಲಿ ಅದ್ದೂರಿ ಜನ್ಮದಿನ ಆಚರಣೆಗೆ ಬ್ರೇಕ್​ ಹಾಕಿ ತಮ್ಮ 55ನೇ ಹುಟ್ಟುಹಬ್ಬವನ್ನು ಸರಳವಾಗಿ ಕುಟುಂಬ ಮತ್ತು ಆಪ್ತರೊಂದಿಗೆ ಆಚರಿಸಿಕೊಂಡರು.
ಮುಂಬೈ ಹೊರವಲಯದಲ್ಲಿರುವ ಪಾನ್ವೆಲ್​ ಫಾರ್ಮ್​ಹೌಸ್​ನಲ್ಲಿ ರಾತ್ರಿ ವೇಳೆಗೆ ಜನ್ಮದಿನ ಆಚರಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಅವರ ತಂದೆ ಸಲೀಮ್ ಖಾನ್, ಅಲ್ವಿರಾ ಅಗ್ನಿಹೋತ್ರಿ, ಸುನೀಲ್ ಗ್ರೋವರ್, ಸೂರಜ್ ಪಾಂಚೋಲಿ ಸೇರಿ ಹಲವು ಬಾಲಿವುಡ್​ ಸ್ನೇಹಿತರು ಭಾಗವಹಿಸಿದ್ದರು.
ಈ ಹುಟ್ಟುಹಬ್ಬ ಆಚರಿಸಲು ಸಲ್ಮಾನ್ ಖಾನ್ ಸಹೋದರರಾದ ಸೋಹೈಲ್ ಖಾನ್, ಅರ್ಬಾಜ್ ಖಾನ್ ಕೂಡ ಬಂದಿದ್ದರು. ಸದ್ಯ ದುಬೈನಲ್ಲಿ ನೆಲೆಸಿರುವ ಇವರು, ಮುಂಬೈಗೆ ಬಂದು ಇದೀಗ ಪೊಲೀಸ್​ ಕೇಸ್​ನಲ್ಲಿ ಸಿಲುಕಿಕೊಂಡಿದ್ದಾರೆ.

ಇವರ ವಿರುದ್ಧ ಬೃಹತ್ ಮುಂಬೈ ಮಹಾನಗರ ಪಾಲಿಕೆಯು (ಬಿಎಂಸಿ) ಪ್ರಕರಣ ದಾಖಲಿಸಿದ್ದು, ಎಫ್‌ಐಆರ್ ಸಹ ದಾಖಲಾಗಿದೆ. ಇದಕ್ಕೆ ಕಾರಣ, ಕೋವಿಡ್​ ನಿಯಮವನ್ನು ಈ ಸಹೋದರರು ಉಲ್ಲಂಘಿಸಿರುವುದು.
ಸೋಹೈಲ್ ಖಾನ್, ಅರ್ಬಾಜ್ ಖಾನ್ ಮತ್ತು ನಿರ್ವಾನ್ ಖಾನ್ ಎಲ್ಲರೂ ಡಿಸೆಂಬರ್ 25 ರಂದು ದುಬೈನಿಂದ ಮುಂಬೈಗೆ ಮರಳಿದ್ದರು. ಕೋವಿಡ್ ನಿಯಮದಂತೆ ಎಲ್ಲರೂ ಐಸೋಲೇಶನ್‌ಗೆ ಒಳಗಾಗಬೇಕಿತ್ತು. ಆದರೆ ಅದನ್ನು ಕೇರ್​ ಮಾಡದೇ ಎಲ್ಲರೂ ಮನೆಗೆ ತೆರಳಿದ್ದಾರೆ.
ಕರೊನಾದ ಹಾಟ್​ಸ್ಪಾಟ್​ ಆಗಿರುವ ಮುಂಬೈನಲ್ಲಿ ಕೋವಿಡ್​ ಕುರಿತು ಕಠಿಣ ನಿಯಮ ಜಾರಿಗೆ ತರಲಾಗಿದ್ದು, ಅದನ್ನು ಈ ಸಹೋದರರು ಉಲ್ಲಂಘನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಅಧಿಕಾರಿಗಳ ಮಾತಿಗೆ ಕಿವಿಗೊಡದ ಹಿನ್ನೆಲೆಯಲ್ಲಿ ಎಲ್ಲರ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ.
ಸೋಹೆಲ್ ಖಾನ್, ಅರ್ಬಾಜ್ ಖಾನ್ ಇಬ್ಬರೂ ನಟರ ಮತ್ತು ನಿರ್ಮಾಪಕರಾಗಿದ್ದಾರೆ. ಸಲ್ಮಾನ್​ ನಟಿಸಿರುವ ದಬಾಂಗ್​ನ ಎರಡೂ ಸರಣಿಯನ್ನು ಅರ್ಬಾಜ್ ಖಾನ್ ನಿರ್ಮಿಸಿದ್ದು, ‘ಪ್ಯಾರ್ ಕಿಯಾ ತೋ ಡರ್​ ನಾ ಕ್ಯಾ’ ಸಿನಿಮಾದಿಂದ ಹಿಡಿದು ಈಗಿನ ರಾಧೆ ಸಿನಿಮಾವನ್ನು ಸಹ ಸೋಹೈಲ್ ಖಾನ್ ನಿರ್ಮಿಸಿದ್ದಾರೆ. ಸದ್ಯ ‘ರಾಧೆ’ ಸಿನಿಮಾ ಶೂಟಿಂಗ್​ನಲ್ಲಿ ಬಿಜಿಯಾಗಿರುವ ಸಲ್ಮಾನ್​ ಖಾನ್, ಇದರ ಜತೆಗೆ ಆಯುಷ್ ಶರ್ಮಾ ಅವರ ಅಂತಿಮ್ ಚಿತ್ರದಲ್ಲಿಯೂ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಅವಿವಾಹಿತರೇ… ವಿಚ್ಛೇದಿತರೇ ಎಚ್ಚರ ಎಚ್ಚರ… ಪುಕ್ಕಟೆ ಸಿಕ್ಕಳೆಂದು ಹೋದವರ ಕಥೆ ಏನಾಯ್ತು ನೋಡಿ…

ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಲೇ ನಿಗೂಢ ಕಣ್ಮರೆಯಾದ ಜಗತ್ತಿನ ಸಿರಿವಂತ! ಏನಿದರ ರಹಸ್ಯ?

ಸಮೋಸಾ ಕದ್ದು ಗುದದ್ವಾರದಲ್ಲಿ ಇಟ್ಟುಕೊಂಡ ಕೈದಿ- ಕಾರಣ ಕೇಳಿ ‘ಅಯ್ಯೋ ಪಾಪಾ‘ ಎಂದ ಪೊಲೀಸರು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 3 =
Remember me
