ಸೌದಿ ಅರೇಬಿಯಾ/ಮುಂಬೈ:ಕರೊನಾ ವೈರಸ್ ಸೋಂಕಿನ ವಿರುದ್ಧ ಅಭಿವೃದ್ಧಿಪಡಿಸುತ್ತಿರುವ ಹಲವು ಲಸಿಕೆಗಳಲ್ಲಿ ಹಂದಿ ಮಾಂಸದ ಜಿಲಾಟಿನ್ ಅಂಶ ಇದೆ ಎನ್ನಲಾಗುತ್ತಿದ್ದು, ಇದೀಗ ಮುಸ್ಲಿಂ ಧರ್ಮದವರಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತಾಗಿ ಹಿಂದೆ ಇಂಡೋನೇಷ್ಯಾದಲ್ಲಿಯೂ ವಿವಾದ ಉಂಟಾಗಿತ್ತು. ಲಸಿಕೆ ತಿರಸ್ಕರಿಸುವಂತೆ ಇಸ್ಲಾಂನ ಕೆಲವು ಧಾರ್ಮಿಕ ಗುರುಗಳು ಕರೆ ನೀಡಿದ್ದರು. ಈ ಲಸಿಕೆ ತೆಗೆದುಕೊಳ್ಳುವುದೇ ಬೇಡ ಎಂದಿದ್ದರು.
ಆದರೆ ನಿನ್ನೆಯಷ್ಟೇ, ತಮ್ಮ ಈ ನಿಲುವನ್ನು ಬದಲಿಸಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್​ನ (ಯುಎಇ) ಇಸ್ಲಾಂ ಪ್ರಾಧಿಕಾರವು ಇದು ಸಾವುನೋವಿನ ಪ್ರಶ್ನೆಯಾಗಿರುವ ಕಾರಣ, ಹಂದಿ ಮಾಂಸದ ಜಿಲಾಟಿನ್ ಅಂಶವಿದ್ದರೂ ತೆಗೆದುಕೊಳ್ಳಲು ಒಪ್ಪಿಗೆ ಸೂಚಿಸಿದೆ.
ಇಸ್ಲಾಂ ಧರ್ಮದಲ್ಲಿ ಹಂದಿ ಮಾಂಸದ ಉತ್ಪನ್ನ ಬಳಸುವುದು ನಿಷಿದ್ಧ. ಆದರೆ ಕರೊನಾ ವಿಷಯದಲ್ಲಿ ನಾವು ಹಾಗೆ ಮಾಡಲು ಆಗುವುದಿಲ್ಲ. ಇದೊಂದೇ ಕಾರಣಕ್ಕೆ ಲಸಿಕೆಯಿಂದ ದೂರ ಉಳಿಯುವುದು ಸರಿಯಲ್ಲ ಎಂದು ಫತ್ವಾ ಹೊರಡಿಸಲಾಗಿದೆ. ಕರೊನಾ ವೈರಸ್ ಪ್ರಕರಣದಲ್ಲಿ ಹಂದಿ ಮಾಂಸವನ್ನು ಔಷಧಿಯಂತೆ ಪರಿಗಣಿಸಲಾಗುತ್ತಿದೆ, ಆಹಾರದಂತೆ ಅಲ್ಲ. ಹೀಗಾಗಿ ವಿಶ್ವಕ್ಕೆ ಮಾರಕವಾಗಿರುವ ಸೋಂಕಿಗೆ ಲಸಿಕೆ ತೆಗೆದುಕೊಳ್ಳುವುದು ತಪ್ಪಲ್ಲ ಎಂದು  ಸಮಿತಿಯ ಅಧ್ಯಕ್ಷ ಶೇಕ್ ಅಬ್ದುಲ್ಲಾ ತಿಳಿಸಿದ್ದಾರೆ.
ಮುಂಬೈ ಸಂಘಟನೆಯಲ್ಲಿ ಭಾರಿ ವಿರೋಧ:ಆದರೆ ಇಂದು ಮುಂಬೈನಲ್ಲಿ ನಡೆದಿರುವ ಸುನ್ನಿ ಮುಸ್ಲಿಂ ಉಲೆಮಾಗಳ ಚರ್ಚೆಯಲ್ಲಿ ಈ ಲಸಿಕೆಯನ್ನು ಯಾವುದೇ ಕಾರಣಕ್ಕೂ ತೆಗೆದುಕೊಳ್ಳಬಾರದು ಎಂದು ತೀರ್ಮಾನಿಸಲಾಗಿದೆ. ಮುಸ್ಲಿಂ ವಿದ್ವಾಂಸರು ಇಂದು ಮುಂಬೈನಲ್ಲಿ ಭೇಟಿಯಾಗಿದ್ದು, ಹಂದಿಗೂ ಇಸ್ಲಾಂ ಧರ್ಮಕ್ಕೂ ಆಗಿಬರದ ಹಿನ್ನೆಲೆಯಲ್ಲಿ, ಹಂದಿ ಜೆಲಾಟಿನ್ ಹೊಂದಿರುವ ಲಸಿಕೆಯನ್ನು ಮುಸ್ಲಿಮರಿಗೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
ಮುಂಬೈನಲ್ಲಿ ನಡೆದ ಸುನ್ನಿ ಮುಸ್ಲಿಂ ಉಲೆಮಾಗಳ ಸಭೆಯಲ್ಲಿ, ಹಂದಿ ಜೆಲಾಟಿನ್ ಅನ್ನು ಹೊಂದಿರುವ ಚೀನೀ ಲಸಿಕೆ ‘ಹರಾಮ್’ ಆಗಿದ್ದು, ಇದು ಮುಸ್ಲಿಮರಿಗೆ ನಿಷೇಧ. ಆದ್ದರಿಂದ ಇದನ್ನು ತೆಗೆದುಕೊಳ್ಳುವುದು ಉಚಿತವಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ.
ಖಾಜಿ-ಎ-ಮುಂಬೈ ಹಜರತ್ ಮುಫ್ತಿ ಮೆಹಮೂದ್ ಅಖ್ತರ್ ಅವರು ಕೂಡ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. “ಒಂದು ಹಂದಿಯ ಕೂದಲು ಬಾವಿಯಲ್ಲಿ ಬಿದ್ದರೂ, ಆ ಬಾವಿಯಿಂದ ನೀರನ್ನು ಮುಸ್ಲಿಮರಿಗೆ ನಿಷೇಧಿಸಲಾಗಿದೆ. ಆದ್ದರಿಂದ, ಇಸ್ಲಾಮಿಕ್ ಕಾನೂನಿನ ಪ್ರಕಾರ, ಹಂದಿಯ ಜೆಲಾಟಿನ್ ಹೊಂದಿರುವ ಲಸಿಕೆ ಯಾವುದೇ ರೋಗದ ವಿರುದ್ಧ ಚಿಕಿತ್ಸೆಯಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದಿದ್ದಾರೆ.
ಸಭೆಯಲ್ಲಿ ತೆಗೆದುಕೊಂಡಿರುವ ಅಂತಿಮ ನಿರ್ಧಾರವನ್ನು ಓದಿದ ರಾಜಾ,ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಸಯೀದ್ ನೂರಿ, “ಹಂದಿಯ ದೇಹದ ಭಾಗಗಳೊಂದಿಗೆ ಚೀನೀ ಲಸಿಕೆ ಹೊರಬಂದಿದೆ. ಹಂದಿ ಮುಸ್ಲಿಮರಿಗೆ ಹರಾಮ್ ಆಗಿರುವುದರಿಂದ, ಅದರ ದೇಹದ ಭಾಗಗಳನ್ನು ಹೊಂದಿರುವ ಲಸಿಕೆಯನ್ನು ಅನುಮತಿಸಲಾಗುವುದಿಲ್ಲ ಎಂದಿದ್ದಾರೆ.
ಸೌದಿಯಿಂದ ಬಂದ ಭಾವಿಪತಿಗಾಗಿ ಮದುಮಗಳು ರೆಡಿಯಾಗಿ ಕುಳಿತರೆ ವರ ಹೀಗೆ ಮಾಡೋದಾ?

ಕೆಲಸ ಸಿಗುತ್ತಿದ್ದಂತೆಯೇ ಇನ್ನೊಬ್ಬನ ಪ್ರೀತಿಸಿದಳು: ಬೆಂಕಿ ಹಚ್ಚಿ ಸಾಯಿಸಿದ ಮಾಜಿ ಪ್ರೇಮಿ!

ಕೋವಿಡ್​ನ ಹೊಸರೂಪ ತಿಳಿಯುವ ಮೊದಲೇ ಬ್ರಿಟನ್​ನಲ್ಲಿ ಒಕ್ಕರಿಸಿದೆ ಆಫ್ರಿಕಾ ವೈರಸ್​!

ಬಿಜೆಪಿ ಜತೆ ಮೈತ್ರಿ ಮಾಡ್ಕೋಬೇಡಾ ಎಂದು ಬಡ್ಕೊಂಡೆ… ಈಗ ಗೋಳೋ ಎಂದ್ರೆ ಏನ್​ ಬಂತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
