ಮುಂಬೈ:ತಮ್ಮ ನೆಚ್ಚಿನ ನಟ-ನಟಿಯರ ಗಮನ ಸೆಳೆಯಲು ಕೆಲವು ಅಭಿಮಾನಿಗಳು ಏನೆಲ್ಲಾ ಸರ್ಕಸ್​ ಮಾಡುವುದನ್ನು ಕಂಡಿದ್ದೇವೆ. ಕೆಲವರು ರಕ್ತದಿಂದ ನೆಚ್ಚಿನ ತಾರೆಯರ ಹೆಸರನ್ನು ಬರೆದು ಕಳುಹಿಸುವವರೂ ಇದ್ದಾರೆ.ಆದರೆ ಇಲ್ಲೊಬ್ಬ ಅಭಿಮಾನಿ 407 ಸಿನಿಮಾಗಳ ಹೆಸರನ್ನು ಬರೆಯುವ ಮೂಲಕ ತಮ್ಮ ನೆಚ್ಚಿನ ನಟನ ಭಾವಚಿತ್ರವನ್ನು ಬಿಡಿಸಿದ್ದಾರೆ. ಕೇರಳದ ಈ ಅಭಿಮಾನಿ ಮಲಯಾಳಂ ಚಿತ್ರದ ಖ್ಯಾತ ನಟ ಮಮ್ಮುಟ್ಟಿ ಅವರ ಫೋಟೋವನ್ನು 407 ಚಿತ್ರದ ಹೆಸರುಗಳಿಂದ ರಚಿಸಿದ್ದಾರೆ. ಇದು ಕೂಡ ಅವರೇ ನಟಿಸಿರುವ ಚಿತ್ರಗಳ ಹೆಸರುಗಳು!
ಕೇರಳದ ಮಲಪ್ಪುರಂನ ಅರ್ಷದ್ ಎಂಬ ಅಭಿಮಾನಿ ಇವರು. 407 ಸಿನಿಮಾದ ಹೆಸರುಗಳನ್ನು ಬಳಸಿಕೊಂಡು, ಅಕ್ಷರಗಳ ಮೂಲಕ ಭಾವಚಿತ್ರವನ್ನು ಬಿಡಿಸಿದ್ದಾರೆ. ಈ ಚಿತ್ರಕಲೆ ಇದೀಗ ಏಷ್ಯಾ ಬುಕ್ ಆಫ್ ರೆಕಾಡ್ರ್ಸ್(ಎಬಿಆರ್) ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ಸ್ಥಾನ ಗಳಿಸಿದೆ. ಎಬಿಆರ್ ಕಡೆಯಿಂದ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿ ಕೂಡ ಇವರಿಗೆ ಲಭಿಸಿದೆ.ಮಲಯಾಳಿ ಜತೆಗೆ ತಮಿಳು, ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿಯೂ ಕೂಡ ಅಕ್ಷರವನ್ನು ಭಾವಚಿತ್ರದಲ್ಲಿ ಮುದ್ರಿಸಲಾಗಿದೆ. ನಾನು ಮುಮ್ಮಟ್ಟಿಯವರ ದೊಡ್ಡ ಅಭಿಮಾನಿ, ಅವರ ಚಲನಚಿತ್ರಗಳ 407 ಹೆಸರನ್ನು ಐದು ಭಾಷೆಯಲ್ಲಿ ಬರೆಯಲು ನಿರ್ಧರಿಸಿ ಭಾವಚಿತ್ರವನ್ನು ಬಿಡಿಸಿರುವುದಾಗಿ ತಿಳಿಸಿದ್ದಾರೆ.
Kerala | Arshad, native of Malappuram enters Asia Book of Records & India Book of Records for making typographic portrait of Indian actor Mammootty"I am big fan of Mammootty, that's why I decided to draw his portrait by using 407 names of his movies in five languages," he sayspic.twitter.com/QGtPiufsDL— ANI (@ANI)July 22, 2021
Kerala | Arshad, native of Malappuram enters Asia Book of Records & India Book of Records for making typographic portrait of Indian actor Mammootty"I am big fan of Mammootty, that's why I decided to draw his portrait by using 407 names of his movies in five languages," he sayspic.twitter.com/QGtPiufsDL
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
