ವಾಷಿಂಗ್ಟನ್:ಷಾಟ್‌ಪುಟ್‌ನಲ್ಲಿ ಭಾರತದ ಏಷಿಯನ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಪಡೆದುಕೊಂಡಿರುವ ಇಕ್ಬಾಲ್ ಸಿಂಗ್ ಕೊಲೆಗಾರನಾಗಿರುವ ಘಟನೆ ಇದು.ಅಮೆರಿಕದಲ್ಲಿ ವಾಸಿಸಿರುವ ಈತ, ತನ್ನ ಪತ್ನಿ ಹಾಗೂ ತಾಯಿಯನ್ನು ಕೊಂದಿರುವ ಆರೋಪದ ಮೇಲೆ ಇದೀಗ ಬಂಧನಕ್ಕೆ ಒಳಗಾಗಿದ್ದಾನೆ.
ಪೆನ್ಸಿಲ್ವೇನಿಯಾದ ಡೆಲವೇರ್ ಕೌಂಟಿಯ 62 ವರ್ಷದ ಸಿಂಗ್ ಪತ್ನಿ ಹಾಗೂ ತಾಯಿಯನ್ನು ಕೊಂದು ಮಕ್ಕಳಿಗೆ ಕರೆ ಮಾಡಿ ನಿಮ್ಮ ತಾಯಿ ಮತ್ತು ಅಜ್ಜಿಯ ಗಂಟಲು ಸೀಳಿ ಕೊಲೆ ಮಾಡಿದ್ದೇನೆ. ನೋಡಿ ಬನ್ನಿ. ಹಾಗೆಯೇ ಪೊಲೀಸರಿಗೆ ವಿಷಯ ತಿಳಿಸಿ ಎನ್ನುವ ಮೂಲಕ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
ತಂದೆಯ ಮಾತು ಕೇಳಿ ಭಯಭೀತರಾದ ಮಕ್ಕಳು ಮನೆಗೆ ಬಂದಾಗ ತಾಯಿ ಮತ್ತು ಅಜ್ಜಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ. ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಇದನ್ನೂ ಓದಿ:ಮಾಸ್ಕ್‌ನಿಂದ ವಾಹನ ಸವಾರರಿಗೆ ನಿರಾಳ: ಬಿಬಿಎಂಪಿಯಿಂದ ಹೊಸ ರೂಲ್ಸ್‌
ಸ್ಥಳಕ್ಕೆ ಧಾವಿಸಿದ ಪೊಲೀಸರು ಇಕ್ಬಾಲ್‌ನನ್ನು ಬಂಧಿಸಿದ್ದಾರೆ. ತಾನೇ ಈ ಕೊಲೆ ಮಾಡಿರುವುದಾಗಿಯೂ ಆತ ಒಪ್ಪಿಕೊಂಡಿದ್ದಾನೆ. ಆದರೆ ಕೊಲೆಗೆ ಕಾರಣ ಮಾತ್ರ ಇನ್ನೂ ನಿಗೂಢವಾಗಿದೆ ಎಂದಿದ್ದಾರೆ ಪೊಲೀಸರು. ಮೇಲ್ನೋಟಕ್ಕೆ ಕೂಡ ಈ ಕೊಲೆ ಮಾಡಲು ಯಾವುದೇ ಕಾರಣಗಳು ಕಾಣಿಸುತ್ತಿಲ್ಲ. ಸದ್ಯ ಇಕ್ಬಾಲ್‌ ಕೂಡ ಮೌನವಾಗಿದ್ದು ಏನನ್ನೂ ಬಾಯಿ ಬಿಡುತ್ತಿಲ್ಲ. ಈ ಕೊಲೆ ಮಕ್ಕಳನ್ನೂ ದಿಗಿಲುಗೊಳಿಸಿದೆ. ಅವರಿಗೂ ಕೊಲೆಯ ಕಾರಣ ಏನೆಂದು ತಿಳಿಯದಾಗಿದೆ ಎಂದಿದ್ದಾರೆ. ಪೊಲೀಸರು.
ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಿದಾರೆ.
ಎರಡನೇ ಪತ್ನಿ, ಮಕ್ಕಳಿಗೆ ಆಸ್ತಿ ಸಿಗುತ್ತದೆಯೇ? ಬಾಂಬೆ ಹೈಕೋರ್ಟ್‌ ಹೇಳಿರುವುದೇನು?
ಎರಡನೇ ಪತ್ನಿ, ಮಕ್ಕಳಿಗೆ ಆಸ್ತಿ ಸಿಗುತ್ತದೆಯೇ? ಬಾಂಬೆ ಹೈಕೋರ್ಟ್‌ ಹೇಳಿರುವುದೇನು?

VIDEO|ಕಚೇರಿಯಲ್ಲಿಯೇ ಕುಷ್ಟಗಿ ತಹಶೀಲ್ದಾರ್‌ ರಾಸಲೀಲೆ- ಕಿಸ್ಸಿಂಗ್‌ ವಿಡಿಯೋ ವೈರಲ್​

35 ವರ್ಷಗಳ ಹಿಂದೆ ಬರೆದ ಲವ್‌ಲೆಟರ್‌ ನದಿಯಲ್ಲಿ ತೇಲುತ್ತ ಪ್ರೇಮಿಯ ಕೈಸೇರಿತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
