ನವದೆಹಲಿ:ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕರಿಸಿದರು. ಬೆಳಗ್ಗೆ 10.15ಕ್ಕೆ ಸೆಂಟ್ರಲ್‌ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್​.ವಿ ರಮಣ ಪ್ರಮಾಣ ವಚನ ಬೋಧಿಸಿದರು.
ಈ ಮೂಲಕ ದ್ರೌಪದಿ ಮುರ್ಮು ಅವರು, ದೇಶದ ಮೊದಲ ಬುಡಕಟ್ಟು ಸಮುದಾಯದ ರಾಷ್ಟ್ರಪತಿ ಹಾಗೂ ಎರಡನೆಯ ಮಹಿಳಾ ರಾಷ್ಟ್ರಪತಿಯಾಗಿದ್ದಾರೆ.
ದೇಶದ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕೂ ಮುನ್ನ ದ್ರೌಪದಿ ಮುರ್ಮು, ಬೆಳಗ್ಗೆ ರಾಜ್ ಘಾಟ್​​ಗೆ ಭೇಟಿ ನೀಡಿ ಗಾಂಧೀಜಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.
ಪ್ರಮಾಣವಚನದ ಬಳಿಕ ಮಾತನಾಡಿದ ನೂತನ ರಾಷ್ಟ್ರಪತಿ ಮುರ್ಮು, ಸ್ವತಂತ್ರ ಭಾರತವು ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಹೊತ್ತಿನಲ್ಲಿ ನಾನು ರಾಷ್ಟ್ರಪತಿಯಾಗಿರುವುದು ತುಂಬಾ ಸಂತಸ ತಂದಿದೆ. ನನ್ನ ಗ್ರಾಮದಲ್ಲಿ ಕಾಲೇಜಿಗೆ ಹೋದ ಮೊದಲ ಮಹಿಳೆ ನಾನು. ವಾರ್ಡ್​ ಕೌನ್ಸಿಲರ್​ನಿಂದ ರಾಷ್ಟ್ರಪತಿ ಹುದ್ದೆಗೆ ಬಂದಿದ್ದೇನೆ. ಭಾರತದ ಪ್ರಭಾಪ್ರಭುತ್ವದ ಶಕ್ತಿಯಿಂದ ಇದೆಲ್ಲವೂ ಸಾಧ್ಯವಾಯಿತು. ದೇಶದ ಬಡವರು, ಮಹಿಳೆಯರ ಪ್ರತಿನಿಧಿಯಾಗಿ ಇರುತ್ತೇನೆ ಎಂದು ಹೇಳಿದರು.
ಸಂತಾಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ದ್ರೌಪದಿ ಮುರ್ಮು, ಒಡಿಶಾದ ಮಯೂರ್​ಭಂಜ್ ಜಿಲ್ಲೆಯ ಉಪರಬೇಡ ಗ್ರಾಮದ ಕುಸುಮಿ ಪ್ರದೇಶದಲ್ಲಿ 1958ರ ಜೂ.20ರಂದು ಜನಸಿದರು. ಅವರ ತಂದೆ ಮತ್ತು ತಾತ ಗ್ರಾಮ ಪಂಚಾಯಿತಿಯ ಮುಖ್ಯಸ್ಥರಾಗಿದ್ದರು. ಕಲಾ ವಿಷಯದಲ್ಲಿ ಪದವೀಧರೆಯಾದ ಮುರ್ಮು, ಕೆಲವು ಕಾಲ ಶಿಕ್ಷಕಿಯಾಗಿದ್ದರು. 1997ರಲ್ಲಿ ರಾಯರಂಗಾಪುರ ನಗರ ಪಂಚಾಯಿತಿಗೆ ಆಯ್ಕೆ ಆಗುವ ಮೂಲಕ ರಾಜಕೀಯ ಪ್ರವೇಶಿಸಿದರು.
ನಂತರ ಒಡಿಶಾ ವಿಧಾನಸಭೆಗೆ ಎರಡು ಸಾರಿ ಆಯ್ಕೆ ಆಗಿದ್ದರು. 2000ರಿಂದ 2004ರವರೆಗೆ ಬಿಜೆಡಿ-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವೆಯಾಗಿದ್ದರು. 2015ರಿಂದ 2021ರವರೆಗೆ ಜಾರ್ಖಂಡ್​ನ ರಾಜ್ಯಪಾಲೆ ಆಗಿದ್ದರು. ಮುರ್ಮು ಕುಟುಂಬದಲ್ಲಿ ದುರಂತಗಳು ಮೇಲಿಂದ ಮೇಲೆ ಎರಗಿತು. ಅವರ ಓರ್ವ ಪುತ್ರ 2009ರಲ್ಲಿ ನಿಗೂಢವಾಗಿ ಸಾವನ್ನಪ್ಪಿದರೆ, ಇನ್ನೊಬ್ಬ ಮಗ 2012ರಲ್ಲಿ ರಸ್ತೆ ಅಪಘಾತದಲ್ಲಿ ಪ್ರಾಣಬಿಟ್ಟ. ದ್ರೌಪದಿ ಪತಿ ಶ್ಯಾಮಚರಣ ಮುಮು ಹೃದಯಾಘಾತದಿಂದ ಅಸುನೀಗಿದರು. ಏಕಮಾತ್ರ ಪುತ್ರಿ ಇದ್ದು, ಅಕೆ ಪತಿಯೊಂದಿಗೆ ಭುವನೇಶ್ವರದಲ್ಲಿ ನೆಲೆಸಿದ್ದಾರೆ. ಒಡಿಶಾದಿಂದ ದೇಶದ ಅತ್ಯುನ್ನತ ಸ್ಥಾನಕ್ಕೇರಿದ ಮೊದಲಿಗರು ಮುರ್ಮು. ಭಾರತದಲ್ಲಿ 700ಕ್ಕೂ ಹೆಚ್ಚು ಬುಡಕಟ್ಟು ಸಮುದಾಯಗಳಿದ್ದು, 10 ಕೋಟಿಗೂ ಅಧಿಕ ಜನಸಂಖ್ಯೆ ಇದೆ.
Koo App
Congratulations to Smt. Droupadi Murmu Ji on taking oath as the 15th President of India. Your simplicity and vast experiences in public life shall be immensely beneficial for the country. My greetings!
–Ravi Shankar Prasad (@ravishankarprasad)25 July 2022

VIDEO: ಇಂದು ರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮು- ಸಂಘರ್ಷದಿಂದ ಶಿಖರದವರೆಗೆ… ಪುಸ್ತಕ ಬರೆದ 13ರ ಬಾಲಕಿ,

ಮತ ಎಣಿಕೆ ನಡೆದಿದ್ದು ಹೀಗೆ..; ರಾಷ್ಟ್ರಪತಿ ಚುನಾವಣೆ ಅಂದಿನಿಂದ ಇಂದಿನವರೆಗೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 20 =
Remember me
