ಬಾಂದ್ರಾ:ಸುಪ್ರಸಿದ್ಧ ಹಿಂದೂಸ್ಥಾನ ಸಂಗೀತ ಕಲಾವಿದ, ಪದ್ಮವಿಭೂಷಣ, ಪದ್ಮಶ್ರೀ, ಪದ್ಮಭೂಷಣ ಸೇರಿದಂತೆ ನೂರಾರು ಮಹಾನ್​ ಪ್ರಶಸ್ತಿಗೆ ಭಾಜನರಾಗಿದ್ದ ಉಸ್ತಾದ್​ ಡಾ.ಗುಲಾಂ ಮುಸ್ತಫಾ ಖಾನ್ ಇಂದು ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಈ ಕುರಿತು ಗಾಯಕಿ ಲತಾ ಮಂಗೇಶ್ಕರ್​ ಅವರು ಟ್ವೀಟ್​ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಖಾನ್ ಅವರ ಸೊಸೆ ನಮ್ರತಾ ಅವರು ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
2019ರಲ್ಲಿ ಬ್ರೈನ್ ಸ್ಟ್ರೋಕ್​ಗೆ ಒಳಗಾಗಿದ್ದ ಖಾನ್, ದೇಹದ ಎಡಭಾಗವು ಪಾರ್ಶ್ವವಾಯುವಿಗೆ ತುತ್ತಾಗಿತ್ತು. ಅಂದಿನಿಂದಲೂ 24 ಗಂಟೆ ನರ್ಸ್ ಒಬ್ಬರು ಮನೆಯಲ್ಲಿಯೇ ಅವರನ್ನು ನೋಡಿಕೊಳ್ಳುತ್ತಿದ್ದರು. ಇಂದು ಮಧ್ಯಾಹ್ನ ಮಸಾಜ್ ಮಾಡುವಾಗ ವಾಂತಿಯಾಯಿತು, ವೈದ್ಯರು ಬಂದು ಅವರ ಆರೋಗ್ಯ ಪರೀಕ್ಷೆಗೆ ಒಳಪಡಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ.
Mujhe abhi abhi ye dukhad khabar mili hai ki mahan shastriya gayak Ustad Ghulam Mustafa Khan Saheb is duniya mein nahi rahe. Ye sunke mujhe bahut dukh hua. Wo gayak to acche the hee par insaaan bhi bahut acche the.pic.twitter.com/l6NImKQ4J9
— Lata Mangeshkar (@mangeshkarlata)January 17, 2021

ತಂದೆಯಿಂದ ಶಾಸ್ತ್ರೀಯ ಸಂಗೀತ ತರಬೇತಿ ಪಡೆದ ಖಾನ್, ನಂತರ ತಮ್ಮ ಸೋದರ ಸಂಬಂಧಿ, ನಿಸಾರ್ ಹುಸೇನ್ ಖಾನ್ ಅವರ ನೇತೃತ್ವದಲ್ಲಿ ಸಂಗೀತ ಕಲಿತಿದ್ದರು. 1991ರಲ್ಲಿ ಪದ್ಮಶ್ರೀ ಪ್ರಶಸ್ತಿ, ನಂತರ 2006ರಲ್ಲಿ ಪದ್ಮಭೂಷಣ, 2018ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 2003ರಲ್ಲಿ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪ್ರಾಕ್ಟಿಕಲ್ ಕಲಾವಿದರಿಗೆ ನೀಡಲಾಗುವ ಅತ್ಯುನ್ನತ ಭಾರತೀಯ ಗೌರವ ಸಂದಿವೆ.
ಹಾರುತ್ತಾ ಹಾರುತ್ತಾ ಟ್ಯಾಕ್ಸಿಯಲ್ಲೇ ಊರು ತಲುಪಬಹುದು: ದೇಶದ ಮೊದಲ ಏರ್ ಟ್ಯಾಕ್ಸಿ ಸೇವೆ ಆರಂಭ

ಜೋ ಬೈಡೆನ್​ ಸಂಪುಟದಲ್ಲಿ ಭಾರತೀಯರ ದಾಖಲೆ- 20 ಮಂದಿ ಸೇರ್ಪಡೆ; 13 ಮಹಿಳೆಯರು

11 ಮಹಿಳೆಯರ ಸಾವಿಗೆ ಕಾರಣ ಅಶೋಕ್​ ಖೇಣಿ: ಅವರನ್ನು ಬಂಧಿಸಿ ಎಂದು ಸರ್ಕಾರಕ್ಕೆ ಆಗ್ರಹ

ಹೃತಿಕ್​​- ಕಂಗನಾ ನಡುವೆ ಲೈಂಗಿಕ ಸಂಬಂಧ: ಗೋಸ್ವಾಮಿ ಚಾಟ್​ ಸೋರಿಕೆ

.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 7 =
Remember me
