ಕೊಯಮತ್ತೂರು:ಧರ್ಮ ಯಾವುದೇ ಇರಲಿ, ಹಿಂದಿನಿಂದಲೂ ಅದಕ್ಕೊಂದು ಕಟ್ಟುಪಾಡು, ಸಂಪ್ರದಾಯ ಎಂದು ಹಿರಿಯರು ಮಾಡಿಕೊಂಡು ಬಂದಿದ್ದಾರೆ. ಆದರೆ ತೀರಾ ಅನವಶ್ಯಕ ಅಥವಾ ಇಂದಿನ ಜನಾಂಗಕ್ಕೆ ಸೂಕ್ತ ಅಲ್ಲ ಎಂದೆನಿಸುವ ಕಟ್ಟುಪಾಡುಗಳನ್ನು ಮುರಿದು ಇಂದಿನ ಯುವಕ-ಯುವತಿಯರು ಹೊಸ ಟ್ರೆಂಡ್​ಗೆ ನಾಂದಿ ಹಾಡುತ್ತಿರುವುದು ಹೊಸ ವಿಷಯವೇನಲ್ಲ. ಆದರೆ ಅಂಥದ್ದೇ ಒಂದು ಹೊಸ ಸಂಪ್ರದಾಯವೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಸಾಮಾನ್ಯವಾಗಿ ಮುಸ್ಲಿಂ ಸಂಪ್ರದಾಯದ ಪ್ರಕಾರ, ಮದುಮಗಳು ತನ್ನ ಮದುವೆಗೆ ತಾನು ಹಾಜರು ಆಗುವುದಿಲ್ಲ. ಏಕೆಂದರೆ ಮದುವೆಯೆಂಬುದು ಇಸ್ಲಾಂನಲ್ಲಿ ಮದುಮಗ ಮತ್ತು ಮದುಮಗಳ ಅಪ್ಪನ ನಡುವೆ ನಡೆಯುವ ಒಪ್ಪಂದ. ಆದ್ದರಿಂದ ಮದುಮಗನ ಜತೆಗೆ ಮದುಮಗಳ ಅಪ್ಪ ವಿವಾಹದ ಸಂದರ್ಭದಲ್ಲಿ ಹಾಜರು ಇರುತ್ತಾರೆ. ಅದರಲ್ಲಿಯೂ ಮಸೀದಿಯೊಳಕ್ಕೆ ಹೆಣ್ಣುಮಕ್ಕಳು ಹೋಗುವುದೇ ಇಲ್ಲ.
ಇದೀಗ ಆ ಪದ್ಧತಿಯನ್ನು ಮೀರಿ ಹೊಸ ದಾಖಲೆ ಬರೆದಿದ್ದಾರೆ ಕೇರಳದ ಮದುಮಗಳು ಹಾಗೂ ಆಕೆಯ ತಂದೆ. ಪರಕಡವು ಮೂಲದ ಕೆ.ಎಸ್.ಉಮ್ಮರ್ ಎಂಬುವವರು ಬಹುತೇಕ ಅಪ್ಪಂದಿರಂತೆ ತಮ್ಮ ಮಗಳ ಅದ್ಧೂರಿ ಮದುವೆಯ ಕನಸು ಕಂಡಿದ್ದರು. ಆದರೆ ಅವರಿಗೆ ಮಗಳ ಮದುವೆಯಂದು ಆಕೆಯೇ ಹಾಜರು ಇಲ್ಲದಿದ್ದರೆ ಅಷ್ಟೇನೂ ಚೆನ್ನಾಗಿರಲಿಲ್ಲ ಎನ್ನಿಸಿದೆ. ಆದರೆ ತಮ್ಮ ಸಂಪ್ರದಾಯದಲ್ಲಿ ಮದುಮಗಳು ತನ್ನ ಮದುವೆಗೆ ಹೋಗುವ ಅವಕಾಶ ಇಲ್ಲ ಎನ್ನುವುದು ಅವರನ್ನು ಬೇಸರಕ್ಕೆ ತಳ್ಳಿದೆ. ಆದರೂ ಅವರು ಗಟ್ಟಿ ಮನಸ್ಸು ಮಾಡಿ, ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅವರ ಮಗಳು ಬಹಾಜಾ ಕೂಡ ಈ ಡಿಫರೆಂಟ್​ ಮದುವೆಯನ್ನು ತುಂಬಾ ಖುಷಿಯಿಂದ ಒಪ್ಪಿಕೊಂಡಿದ್ದಾಳೆ.
ಇಸ್ಲಾಂನಲ್ಲಿ ಯಾವುದೇ ಸ್ಥಾನವಿಲ್ಲದ ಇಂತಹ ಆಚರಣೆಗಳನ್ನು ನಾವು ತಿರಸ್ಕರಿಸುವ ಸಮಯ ಬಂದಿದೆ. ನನ್ನ ಮಗಳು ಸೇರಿದಂತೆ ವಧುಗಳಿಗೆ ಅವರ ಮದುವೆಗೆ ಸಾಕ್ಷಿಯಾಗುವ ಹಕ್ಕಿದೆ. ಆದ್ದರಿಂದ ಇಂಥದ್ದೊಂದು ತೀರ್ಮಾನಕ್ಕೆ ಬಂದೆವು. ನಮ್ಮ ಈ ನಿರ್ಧಾರಕ್ಕೆ ವರನ ಮನೆಯವರೂ ಒಪ್ಪಿಕೊಂಡರು. ಈ ಹಿನ್ನೆಲೆಯಲ್ಲಿ ನಾವು ಮಹಲ್ ಸಮಿತಿಯನ್ನು ಸಂಪರ್ಕಿಸಿದೆವು. ಅವರ ಜತೆ ಚರ್ಚಿಸಿದ ಬಳಿಕ ನಮ್ಮ ಈ ವಿಭಿನ್ನ ಯೋಚನೆಗೆ ಅವರೂ ಅಭಿನಂದಿಸಿದರು. ಎಲ್ಲರ ಸಹಕಾರದಿಂದ ಸಂಪ್ರದಾಯ ಮೀರಿ ಮದುವೆ ಮಾಡಲು ಅನುಕೂಲವಾಯಿತು ಎಂದಿದ್ದಾರೆ ಉಮ್ಮರ್​.
ಕಳೆದ ವಾರ ಕೂಡ ಇಂಥದ್ದೇ ಮದುವೆ ನಡೆದಿತ್ತು. ವಧು ತನ್ನ ಮದುವೆಗೆ ಹಾಜರು ಆಗಿದ್ದಳು. ಆದರೆ ಮಸೀದಿಯೊಳಕ್ಕೆ ಹೋಗಿರಲಿಲ್ಲ. ಆದರೆ ಈ ಮದುವೆಯಲ್ಲಿ ಮದುಮಗಳು ಮಸೀದಿಯೊಳಗೇ ಹೋಗಿ ತನ್ನ ಮದುವೆಗೆ ಖುದ್ದು ಹಾಜರು ಇರುವುದರಿಂದ ಇದು ದಾಖಲೆಯಾಗಿದೆ ಎನ್ನುತ್ತಾರೆ ವಧುವಿನ ತಂದೆ ಉಮ್ಮರ್​.
ಇದಕ್ಕೆ ಇದಾಗಲೇ ಹಲವರು ವಿರೋಧ ಕೂಡ ವ್ಯಕ್ತಪಡಿಸುತ್ತಿದ್ದಾರೆ.(ಏಜೆನ್ಸೀಸ್​)
ಹಾಲು ಮಾರುವ ಸೋಗಿನಲ್ಲಿ ಖೋಟಾನೋಟು ಚಲಾವಣೆ: ಬಿಜೆಪಿ ಮುಖಂಡನೇ ಕಿಂಗ್​ಪಿನ್​

ದೇಹದ ಇಂಚಿಂಚೂ ಬಿಡದೇ ಟ್ಯಾಟೂ ಹಾಕಿಸಿಕೊಂಡ ನಟಿ! ಖಾಸಗಿ ಅಂಗಗಳ ನೋವು ಬಿಚ್ಚಿಟ್ಟಿದ್ದು ಹೀಗೆ…

ಮಾಜಿ ಶಾಸಕ ಫುಲ್​ಟೈಟ್​? ಎರ್ರಾಬಿರ್ರಿ ಕಾರು ಓಡಿಸಿ ಕಂಡಕಂಡಲ್ಲಿ ಗುದ್ದಿಸಿ ಭಾರಿ ಹಾನಿ.. ಸಂತ್ರಸ್ತರು ಗಪ್​ಚುಪ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
