ಅಹಮದಾಬಾದ್ (ಗುಜರಾತ್):ನಾವೆಲ್ಲಾ ಸಾಯಬೇಕು, ನಮಗೆ ದಯಾಮರಣ ಕೊಡಿ… ಹೀಗೆಂದು 100 ಮುಸ್ಲಿಂ ಕುಟುಂಬಗಳು ಅಹಮದಾಬಾದ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಮೀನುಗಾರಿಕೆಯಲ್ಲಿ ತೊಡಗಿರುವ ಈ ಕುಟುಂಬಗಳು ತಾವು ಸಾಯುವ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿಕೊಂಡಿವೆ. 2016 ರಿಂದ ಪೋರಬಂದರ್‌ನ ಗೋಸಾಬರ ಬಂದರಿನಲ್ಲಿ ದೋಣಿ ನಿಲುಗಡೆಯನ್ನು ಸರ್ಕಾರ ನಿಷೇಧಿಸಿದೆ. ಈ ನಿಷೇಧದಿಂದ ತೊಂದರೆಗೀಡಾಗಿರುವ ಹಿನ್ನೆಲೆಯಲ್ಲಿ ತಾವು ಸಾಯಬೇಕಿದೆ ಎಂದು ಅವರು ಹೇಳಿದ್ದಾರೆ.
ಮೀನುಗಾರಿಕೆ ಮತ್ತು ಬೋಟಿಂಗ್ ಪರವಾನಗಿ ಇದ್ದರೂ ತಮ್ಮ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ ಎನ್ನುವುದು ಈ ಕುಟುಂಬಗಳ ಆರೋಪ. ಇದಕ್ಕೆ ಸಂಬಂಧಿಸಿದಂತೆ ಇದಾಗಲೇ ರಾಜ್ಯಪಾಲರು, ಮುಖ್ಯಮಂತ್ರಿಗಳು, ಪೋರಬಂದರ್ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡರೂ ಪ್ರಯೋಜನ ಆಗಿಲ್ಲ ಎನ್ನುವುದು ಇವರ ಆರೋಪ. ಸದ್ಯ ಹೈಕೋರ್ಟ್‌ಗೆ ರಜೆ ಇದ್ದು, ರಜಾ ದಿನಗಳು ಮುಗಿದ ನಂತರ ಈ ಅರ್ಜಿಯ ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ.
ಪ್ರಿಯತಮೆ ಜತೆ ಮದುವೆಯಾಗುವಾಗ್ಲೇ ಎಂಟ್ರಿ ಕೊಟ್ಟಳೊಬ್ಬ ಮಹಿಳೆ! ವಧು ಜತೆ ತೀರ್ಥಹಳ್ಳಿಯ ವರ ಎಸ್ಕೇಪ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + one =
Remember me
