ಲಖನೌ:ಅಪ್ಪ ಮುಸ್ಲಿಂ, ಮಗ ಹಿಂದೂ. ತಾನು ಹಿಂದೂ ಧರ್ಮದಂತೆ ಮದುವೆಯಾಗಬೇಕು ಎನ್ನುವುದು ಈ ಪುತ್ರನ ಕೋರಿಕೆ. ಈ ಕೋರಿಕೆಯನ್ನು ಈಡೇರಿಸಿರುವ ಅಪ್ಪ, ಅದ್ಧೂರಿಯಾಗಿ ಮಗನ ಮದುವೆಯನ್ನು ನೆರವೇರಿಸಿದ್ದು, ಇದೀಗ ಭಾರಿ ಸುದ್ದಿಯಾಗಿದ್ದಾರೆ. ಸದ್ಯ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಉತ್ತರ ಪ್ರದೇಶದ ಘಾಜಿಪುರದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಆಗಿದ್ದೇನೆಂದರೆ ಸುಮಾರು 16 ವರ್ಷದ ಹಿಂದೆ ಗಹಮಾರಾ ಗ್ರಾಮದ ನಿವಾಸಿ ಮೊಹಮ್ಮದ್ ಶೇರ್ ಖಾನ್ ಎಂಬವವರು ಪಪ್ಪು ಅನ್ನೋ ಹುಡುಗನನ್ನು ದತ್ತು ಪಡೆದುಕೊಂಡಿದ್ದರು. ಪಪ್ಪು ಬಾಲ್ಯದಲ್ಲಿ ತಂದೆ-ತಾಯಿಯನ್ನ ಕಳೆದುಕೊಂಡು ಅನಾಥನಾಗಿದ್ದ.
ಆದ್ದರಿಂದ ಈ ಬಾಲಕನನ್ನು ದತ್ತು ಪಡೆದಿದ್ದರು ಖಾನ್​. ಇದಕ್ಕೆ ಗ್ರಾಮಸ್ಥರು ಒಪ್ಪಿಗೆ ನೀಡಿದ್ದರು. ಇಷ್ಟು ವರ್ಷ ತಮ್ಮ ಸಂಪ್ರದಾಯದಂತೆಯೇ ಈ ದತ್ತುಪುತ್ರನನ್ನು ಬೆಳೆಸಿದಿದ್ದಾರೆ. ಇದೀಗ ಆತ ಮದುವೆ ವಯಸ್ಸಿಗೆ ಬಂದಿದ್ದು, ಹಿಂದೂ ಸಂಪ್ರದಾಯದಂತೆ ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದ.
ಈ ಹಿನ್ನೆಲೆಯಲ್ಲಿ ಪಕ್ಕದೂರಿನ ಉತರೌಲಿ ಗ್ರಾಮದ ಭಗವಾನ ರಾಮ್ ಅವರ ಪುತ್ರಿ ಕಾಶ್ಮೀರಾ ಎನ್ನುವ ಹಿಂದೂ ಯುವತಿಯನ್ನೇ ನೋಡಿದ ತಂದೆ, ಆಕೆಯ ಜತೆ ಮಗನ ವಿವಾಹವನ್ನು ಹಿಂದೂ ಸಂಪ್ರದಾಯದಂತೆ ಮಾಡಿಸಿದ್ದಾರೆ. ತಂದೆಯ ಈ ಪ್ರೀತಿಗೆ ನೆಟ್ಟಿಗರು ಭೇಷ್​ ಎಂದಿದ್ದಾರೆ.
ಸಚಿವ ಸುಧಾಕರ್​ ಕೊಟ್ಟ ‘ಒಬ್ಳೇ ಹೆಂಡ್ತಿ ಚಾಲೆಂಜ್’​ಗೆ ಕುಮಾರಸ್ವಾಮಿ ಏನು ಹೇಳಿದ್ರು ನೋಡಿ…

ನೋಡ್ರಪ್ಪಾ ನನಗಿರೋದು ಒಬ್ಳೇ ಹೆಂಡ್ತಿ, ತನಿಖೆ ಆಗ್ಲಿ… ಸತ್ಯ ಹರಿಶ್ಚಂದ್ರ ಚಾಲೆಂಜ್​ ಸ್ವೀಕರಿಸಿದ ಡಿಕೆಶಿ,

ಮಧ್ಯರಾತ್ರಿವರೆಗೂ ಬಿಸಿಬಿಸಿ ಮಾತು: ಕೇರಳ ಲೀಡರುಗಳಿಗೆ ಫುಲ್‌ ಕ್ಲಾಸ್‌ ಕೊಟ್ಟ ಅಮಿತ್‌ ಷಾ;

ಶುರುವಾಯ್ತು ಒಬ್ಳೇ ಹೆಂಡ್ತಿ ಚಾಲೆಂಜ್​! ಸತ್ಯಹರಿಶ್ಚಂದ್ರ ಯಾರಪ್ಪಾ ಎಂದು ಸವಾಲ್​ ಹಾಕಿದ ಸಚಿವ..

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 1 =
Remember me
