ಕೋಲ್ಕತಾ:ಹಿಂದೂ ಮತ್ತು ಮುಸ್ಲಿಂ ನಡುವೆ ಸಾಮರಸ್ಯವನ್ನು ಹದಗೆಡಿಸಲು ಕೆಲ ಶಕ್ತಿಗಳು ಪ್ರಯತ್ನಿಸುತ್ತಲೇ ಇರುವುದು ಗುಟ್ಟಾಗೇನೂ ಉಳಿದಿಲ್ಲ. ಇದರ ನಡುವೆಯೇ ಎಷ್ಟೋ ಕಡೆಗಳಲ್ಲಿ ಎರಡೂ ಧರ್ಮಿಯರು ಒಟ್ಟಾಗಿ ಹಬ್ಬಗಳನ್ನು ಆಚರಿಸುವುದು, ಧಾರ್ಮಿಕ ವಿಧಿ ವಿಧಾನ ನೆರವೇರಿಸುವುದು ನಡೆದೇ ಇದೆ. ಎರಡೂ ಧರ್ಮಿಯರ ನಡುವೆ ಭಾತೃತ್ವ ಸಾರುವ ಕೆಲ ಘಟನೆಗಳೂ ನಡೆಯುತ್ತಿದ್ದು, ಇದು ಕೂಡ ಅಂಥದ್ದೇ ಒಂದು ಘಟನೆ.
ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಹಿಂದೂ ಸ್ನೇಹಿತನಿಗೆ ತಮ್ಮ ಒಂದು ಮೂತ್ರಪಿಂಡವನ್ನು ದಾನ ಮಾಡಲು ಮುಂದಾಗಿದ್ದು, ಇದೀಗ ಬಹಳ ಸುದ್ದಿಯಾಗುತ್ತಿದೆ. ಹಸ್ಲು ಮೊಹಮ್ಮದ್ ಎನ್ನುವವರು ಸ್ನೇಹಿತ ಅಚಿಂತ್ಯ ಬಿಸ್ವಾಸ್ ಎಂಬುವರಿಗೆ ಕಿಡ್ನಿ ದಾನಕ್ಕೆ ಮುಂದಾಗಿದ್ದಾರೆ.
ಇಬ್ಬರೂ 6 ವರ್ಷಗಳಿಂದ ಗೆಳೆಯರಾಗಿದ್ದು, ಒಬ್ಬರ ಕಷ್ಟ ಸುಖದಲ್ಲಿ ಮತ್ತೊಬ್ಬರು ಭಾಗಿಯಾಗುತ್ತಿದ್ದಾರೆ. ಇವರಿಬ್ಬರೂ ಹಣಕಾಸು ಕಂಪನಿಯ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ, ಎರಡು ವರ್ಷಗಳ ಹಿಂದೆ ಹಸ್ಲು ಮೊಹಮ್ಮದ್ ಅಲ್ಲಿಂದ ಕೆಲಸ ಬಿಟ್ಟು, ತಮ್ಮದೇ ಆದ ಸ್ವಂತ ಉದ್ಯಮ ಆರಂಭಿಸಿದ್ದರೂ ಸ್ನೇಹ ಮಾತ್ರ ಮುಂದುವರೆದಿದೆ.
ಕೆಲ ದಿನಗಳ ಹಿಂದೆ ಅಚಿಂತ್ಯ ಅವರಿಗೆ ಕಿಡ್ನಿ ಸಮಸ್ಯೆ ಆಗಿತ್ತು. ತಕ್ಷಣವೇ ಕಿಡ್ನಿ ಕಸಿ ಅಗತ್ಯವಿದೆ ಅಂತ ವೈದ್ಯರು ಹೇಳಿದ್ದರು. ಆದರೆ ದಾನಿಗಳನ್ನು ಹುಡುಕುವಷ್ಟು ಸಮಯ ಮತ್ತ ಹಣ ಅವರ ಬಳಿ ಇರಲಿಲ್ಲ. ಈ ವಿಚಾರ ಹಸ್ಲು ಮೊಹಮ್ಮದ್ ಅವರಿಗೆ ಗೊತ್ತಾದದ್ದೇ ತಡ, ತಮ್ಮ ಕಿಡ್ನಿ ನೀಡುವುದಾಗಿ ಹೇಳಿದ್ದಾರೆ. ವ್ಯಕ್ತಿಯ ದೇಹದಲ್ಲಿ ಇರುವ ಎರಡು ಮೂತ್ರಪಿಂಡಗಳ ಪೈಕಿ ಒಂದನ್ನು ದಾನ ಮಾಡಬಹುದು. ಇದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ನಗುತ್ತಲೇ ಹೇಳುವ ಹಸ್ಲು ಮೊಹಮ್ಮದ್, ತಮ್ಮ ಒಂದು ಕಿಡ್ನಿಯಿಂದ ಸ್ನೇಹಿತನ ಜೀವ ಉಳಿದರೆ ಅದಕ್ಕಿಂತ ದೊಡ್ಡ ಭಾಗ್ಯ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ನಮ್ಮ ಧರ್ಮ ಬೇರೆ ಬೇರೆ ಇರಬಹುದು, ಆದರೆ ನಮ್ಮಿಬ್ಬರ ರಕ್ತದ ಗುಂಪು ಒಂದೇ” ಎಂದಿದ್ದಾರೆ.
ಇನ್ನು ಅಂಗಾಂಗ ದಾನಕ್ಕೆ ಅವಕಾಶ ನೀಡುವಂತೆ ಕೋರಿ ಹಸ್ಲು ಮೊಹಮ್ಮದ್ ಅವರು ಇತ್ತೀಚೆಗೆ ರಾಜ್ಯ ಆರೋಗ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಕೆಲವೊಂದು ನಿಯಮ ಪಾಲನೆ ಮಾಡಬೇಕಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಆರೋಗ್ಯ ಇಲಾಖೆಗೆ ವರದಿ ಕಳುಹಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
VIDEO: ಕುಡಿದ ಗುಂಗಿನಲ್ಲಿ ನಾಯಕ್‌ ಹ್ಞೂಂ ಮೇ… ಖಳನಾಯಕ್‌ ಹ್ಞೂಂ… ಎಂದು ಡಾನ್ಸ್‌ ಮಾಡುತ್ತ ಸತ್ತೇ ಹೋದ…!

ಸಾಹೇಬ್ರೆ ಭಾರಿ ಮೋಸ ಆಗೋಯ್ತು.. ಇವ್ಳಿಗೆ ಇದೆಲ್ಲಾ ಬರಲ್ಲ, ಮಧ್ಯರಾತ್ರಿ ಫೋನ್‌- ಕಾರಣ ಕೇಳಿ ಪೊಲೀಸರು ಸುಸ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
