ತಿರುವನಂತಪುರ:ಪುರುಷ ಹಾಗೂ ಮಹಿಮೆ ಸಮಾನರು, ಮಹಿಳೆಯರಿಗೆ ಸಮಾಜದಲ್ಲಿ ಗೌರವ ಸ್ಥಾನಮಾನ ನೀಡಬೇಕು, ಹೆಣ್ಣು ಎಂದರೆ ಹಾಗೆ, ಹೀಗೆ ಎಂದೆಲ್ಲಾ ಭಾಷಣಗಳಲ್ಲಿ ಹೇಳುವುದನ್ನು ಕೇಳುತ್ತಿದ್ದೇವೆ, ಅದೇ ರೀತಿ ಭಾರತೀಯರು ಹೆಣ್ಣನ್ನು ದೇವತೆಗೆ ಹೋಲಿಸುವುದು ಕೂಡ ಇದೆ. ಆದರೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದ ಘಟನೆ ಮಾತ್ರ ತುಂಬಾ ಶಾಕಿಂಗ್​ ಆಗಿದೆ.
ಆಗಿದ್ದೇನೆಂದರೆ, ಮುಸ್ಲಿಂ ವಿದ್ವಾಂಸರೊಬ್ಬರಿಂದ ಪ್ರಶಸ್ತಿ ಸ್ವೀಕರಿಸಲು ಪ್ರತಿಭಾನ್ವಿತೆಯಾಗಿರುವ ಬಾಲಕಿಯನ್ನು ಸಂಘಟಕರು ವೇದಿಕೆ ಮೇಲೆ ಕರೆದಿದ್ದರು. ಆಕೆ ಪ್ರಶಸ್ತಿಯನ್ನು ಸ್ವೀಕರಿಸಿದಳು. ಇದೇ ಮಹಾ ತಪ್ಪು ಎನ್ನುವಂತೆ ಅಲ್ಲಿ ಭಾರಿ ಗಲಾಟೆ ನಡೆದಿದೆ. ಕಾರ್ಯಕ್ರಮದ ಸಂಘಟಕರನ್ನು ವೇದಿಕೆ ಮೇಲಿದ್ದ ಗಣ್ಯರು ತರಾಟೆಗೆ ತೆಗೆದುಕೊಂಡಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಬಾಲಕಿಯನ್ನು ಕರೆದದ್ದೇಕೆ? ಅದರ ಬದಲು ಆಕೆಯ ತಂದೆಯನ್ನು ಪ್ರಶಸ್ತಿ ಸ್ವೀಕರಿಸಲು ಕರೆಯಬೇಕಿತ್ತು ಎನ್ನುವುದು ಅವರ ಮಾತು.
ರಾಮಪುರಂನಲ್ಲಿ ಮದ್ರಸಾ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಹಲವು ಮುಸ್ಲಿಂ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ ಸಂಘಟಕರಲ್ಲಿ ಒಬ್ಬರು ಹುಡುಗಿಯನ್ನು ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಆಹ್ವಾನಿಸಿದ್ದರು. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕ ಪಾಣಕ್ಕಾಡ್ ಸೈಯದ್ ಅಬ್ಬಾಸ್ ಅಲಿ ಶಿಹಾಬ್ ತಂಗಳ್ ಅವರು ಹುಡುಗಿಗೆ ಸ್ಮರಣಿಕೆ ನೀಡಿದರು. ಅದು ಗಲಾಟೆಗೆ ಕಾರಣವಾಗಿದೆ.
ಈಕೆ 10ನೇ ತರಗತಿ ವಿದ್ಯಾರ್ಥಿನಿ. ಅವಳನ್ನು ವೇದಿಕೆಗೆ ಆಹ್ವಾನಿಸಲು ಯಾರು ಹೇಳಿದರು? ಅಂತಹ ಹುಡುಗಿಯರನ್ನು ಕರೆಯಬೇಡಿ… ಸಮಸ್ತದ ನಿರ್ಧಾರ ನಿಮಗೆ ಗೊತ್ತಿಲ್ಲವೇ? ನೀವು ಅವಳನ್ನು ಕರೆದಿದ್ದೀರಾ? ಆಕೆಯ ಪಾಲಕರನ್ನುವೇದಿಕೆಗೆ ಬರಲು ಹೇಳಿ ಎಂದು ಬೈಯುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.
ಈ ವಿಡಿಯೋ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದ್ದು, ಪರ-ವಿರೋಧದ ಅಭಿಪ್ರಾಯಗಳು ಕೇಳಿಬರುತ್ತಿವೆ. ಈ ಘಟನೆಗೆ ಭಾರಿ ಟೀಕೆಗಳು ಕೇಳಿಬರುತ್ತಿದ್ದು, ಕೆಲವರು ಇದು ಸರಿಯಾಗಿದೆ ಎಂದೂ ಸಮರ್ಥಿಸಿಕೊಂಡಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ:(ಕೃಪೆ ಸೌತ್​ ಎಕ್ಸ್​ಪ್ರೆಸ್​)
While#Talibanhas ordered Afghan women to be covered from head-to-toe, our very own#Keralais not far behind!Maulvis restricted a girl from receiving an award & asked her father to collect it for her. Girls must not appear in public, they declared. Where are we headed??!!pic.twitter.com/j9cl8BqmKg— Priti Gandhi – प्रीति गांधी (@MrsGandhi)May 10, 2022
While#Talibanhas ordered Afghan women to be covered from head-to-toe, our very own#Keralais not far behind!Maulvis restricted a girl from receiving an award & asked her father to collect it for her. Girls must not appear in public, they declared. Where are we headed??!!pic.twitter.com/j9cl8BqmKg
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
