ಕಿಶನ್‌ಗಂಜ್ (ಬಿಹಾರ):ಎಂಟು ಮಂದಿ ಅಪ್ರಾಪ್ತೆಯರೂ ಸೇರಿದಂತೆ 12 ಮಂದಿಯನ್ನು ಮದುವೆಯಾದ ಬಿಹಾರದ ಕಿಶನ್​ಗಂಜ್​ ಜಿಲ್ಲೆಯ ಅನಾರ್ಕಲಿ ಗ್ರಾಮದ ನಿವಾಸಿಯೊಬ್ಬನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. 32 ವರ್ಷದ ಶಂಶಾದ್​ ಪುರ್ನಿಯಾ ಎಂಬ ಈ ವ್ಯಕ್ತಿ 12 ಮಂದಿಯನ್ನು ನಿಖಾ ಮಾಡಿಕೊಂಡು ಅವರನ್ನೆಲ್ಲಾ ಏನು ಮಾಡಿದ್ದ ಎಂದು ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ತಾನೊಬ್ಬ ಅವಿವಾಹಿತ ಎಂದು ಹೇಳಿಕೊಂಡು ಕೆಲವೊಂದು ಮದುವೆಯಾಗಿದ್ದರೆ, ಬಾಲಕಿಯರನ್ನು ಅಪಹರಿಸಿ ಈತ ಮದುವೆಯಾಗುತ್ತಿದ್ದ. 2015 ರಲ್ಲಿ ಬಾಲಕಿ ಅಪಹರಣ ಮಾಡಿದ ಕೇಸ್​ ದಾಖಲಾಗಿತ್ತು. ಅಂದಿನಿಂದಲೂ ಪೊಲೀಸರಿಗೆ ಬೇಕಾಗಿದ್ದ ಈತ ತನ್ನ ವಿರುದ್ಧ ದೂರು ನೀಡಿದ ಬಾಲಕಿಯನ್ನೇ ಮತ್ತೆ ಅಪಹರಿಸಿದ್ದ. ಅಲ್ಲದೇ, ಆಕೆಯೊಂದಿಗೆ ಮದುವೆಗೆ ಸಿದ್ಧನಾಗಿದ್ದ. ಈ ವಿಷಯ ತಿಳಿದ ಪೊಲೀಸರು ಈತನ ಹಿಂದೆ ಬಿದ್ದಾಗ ಭಯಾನಕ ಕಥೆಗಳು ತೆರೆದುಕೊಂಡಿವೆ.
ವಿಚಾರಣೆ ವೇಳೆ ಆತ ತನಗೆ ಈಗಾಗಲೇ 12 ಮದುವೆಗಳಾಗಿವೆ ಎಂದು ಬಾಯ್ಬಿಟ್ಟಿದ್ದಾನೆ. ತಾನು ಇವರನ್ನು ಮದುವೆಯಾಗಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಬಗ್ಗೆ ಹೇಳಿಕೊಂಡಿದ್ದಾನೆ. ಗಿಶನ್​ಗಂಜ್​ನ ಠಾಕೂರ್​ಗಂಜ್​ನ ರೆಡ್​ಲೈಟ್​ ಏರಿಯಾದಲ್ಲಿ ಈತ ಮದುವೆಯಾದವರನ್ನು ವೇಶ್ಯಾವಾಟಿಕೆಗೆ ನೂಕುತ್ತಿದ್ದ. ಇದಾಗಲೇ 12 ಮಂದಿಯನ್ನೂ ವೇಶ್ಯಾವಾಟಿಕೆಗೆ ನೂಕಿ ಹಣ ಮಾಡುತ್ತಿದ್ದ ಈತ ಈಗ ಪೊಲೀಸರ ಬಲೆಗೆ ಬಿದ್ದಿದ್ದು, ಆತನ ವಿರುದ್ಧ ಕೇಸ್​ ದಾಖಲಾಗಿದೆ. ತಾನು ಮದುವೆಯಾದವರ ಪೈಕಿ ಕೆಲವರನ್ನು ಬೇರೆ ಬೇರೆ ದೇಶಗಳಿಗೆ ಈತ ಮಾರಾಟ ಕೂಡ ಮಾಡಿರುವ ಅಂಶ ಬೆಳಕಿಗೆ ಬಂದಿದೆ.
ಇದಾಗಲೇ ಇಷ್ಟು ಮದುವೆಯಾಗಿದ್ದರೂ 15 ವರ್ಷದ ಬಾಲಕಿಯ ಅಪಹರಣದ ಕೇಸ್​ ಬಿಟ್ಟು ಬೇರೆ ಯಾವ ಕೇಸ್​ಗಳೂ ದಾಖಲಾಗಲಿಲ್ಲ. ಇದು ಪೊಲೀಸರನ್ನು ಅಚ್ಚರಿಗೆ ತಳ್ಳಿದೆ. ಇದೀಗ ಬಾಲಕಿ ಸೇರಿದಂತೆ ಉಳಿದ 12 ಮಂದಿಯ ಪತ್ತೆಗೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.
ವಯಾಗ್ರ ತಂದ ಆಪತ್ತು- ಅತಿಯಾಗಿ ಸೇವಿಸಿ ಜೀವನಪೂರ್ತಿ ಪೇಚಿಗೆ ಸಿಲುಕಿದ ನವವಿವಾಹಿತ: ವೈದ್ಯರ ಎಚ್ಚರಿಕೆ

‘ಆ ಇನ್ಸ್‌ಪೆಕ್ಟರ್‌ನ ರೌಡಿಸಂ ನನ್ನತ್ರ ನಡಿಯಲ್ಲ, ಎಲ್ಲಾ ಮಾಡೇ ಬಂದವ ನಾನು… ಮೂರನೇ ಕಣ್ಣು ಬಿಟ್ರೆ ಅಷ್ಟೇ..’

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:15 − fifteen =
Remember me
