ಉದಯಪುರ (ರಾಜಸ್ಥಾನ):ಬಿಜೆಪಿ ಮುಖಂಡೆ ನೂಪುರ್​ ಶರ್ಮಾ ಅವರನ್ನು ಬೆಂಬಲಿಸಿ ಜಾಲತಾಣದಲ್ಲಿ ಪೋಸ್ಟ್​ ಮಾಡಿದ ರಾಜಸ್ಥಾನ ಉದಯಪುರದ ಟೈಲರ್​ ಕನ್ಹಯ್ಯಕುಮಾರ್​ ಅವರನ್ನು ಇಬ್ಬರು ಕ್ರೂರಿಗಳು ಶಿರಚ್ಛೇದನ ಮಾಡಿರುವ ಆಘಾತಕಾರಿ ಘಟನೆ ಮಂಗಳವಾರ (ಜೂನ್​ 28) ನಡೆದಿದೆ. ಈ ಕುರಿತು ರಾಷ್ಟ್ರವ್ಯಾಪಿ ಭಾರಿ ಖಂಡನೆ ವ್ಯಕ್ತವಾಗಿದ್ದು, ಕನ್ಹಯ್ಯಕುಮಾರ್​ ಅವರ ಮಕ್ಕಳಾದ ಯಶ್ ಮತ್ತು ತರುಣ್ ಘಟನೆ ಹಿನ್ನೆಯನ್ನು ವಿವರಿಸಿದ್ದಾರೆ.
‘ಇಂಡಿಯಾ ಟುಡೆ’ ಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಯಶ್​ ಮತ್ತು ತರುಣ್​ ಘಟನೆಯ ಕುರಿತು ವಿವರಿಸಿದ್ದಾರೆ.
“ನಮ್ಮ ತಂದೆ ತಪ್ಪಾಗಿ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಕಾಮೆಂಟ್ ಹಾಕಿದ್ದರು. ಇದಕ್ಕೆ ಸಂಬಂಧಿಸಿದಂತೆ ಈ ಹಿಂದೆ ಪೊಲೀಸರು ಅವರನ್ನು ಬಂಧಿಸಿದ್ದರು. ಅವರಿಗೆ ಜಾಮೀನು ಕೂಡ ಸಿಕ್ಕಿತ್ತು. ಪೊಲೀಸ್ ಠಾಣೆಯಲ್ಲಿ ಅವರು ಕ್ಷಮೆಯಾಚಿಸಿದ್ದರು.
ಇದಾದ ಬಳಿಕ ಅವರಿಗೆ ನಿಯಮಿತವಾಗಿ ಬೆದರಿಕೆ ಕರೆಗಳು ಬರುತ್ತಿದ್ದವು. ಸಾಯಿಸುವುದಾಗಿ ಹೇಳುತ್ತಲೇ ಇದ್ದರು. ತಮಗೆ ಜೀವ ಭಯ ಇದೆ ಎಂದು ಹೇಳಿ ನಮ್ಮ ತಂದೆ ಹಲವಾರು ಬಾರಿ ಪೊಲೀಸರನ್ನು ಸಂಪರ್ಕಿಸಿದ್ದರು. ಆದರೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ, ಅವರು ಇದಕ್ಕೆ ಕೇರೇ ಮಾಡಲಿಲ್ಲ. ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಂಡಿದ್ದರೆ, ನಮ್ಮ ತಂದೆ ಇಂದು ಬದುಕುತ್ತಿದ್ದರು, ಎಂದು ಮಕ್ಕಳು ಹೇಳಿದ್ದಾರೆ.
ನಾನು ಬಿಎ ಎರಡನೆಯ ವರ್ಷದಲ್ಲಿದ್ದು, ನನ್ನ ತಮ್ಮ ಪ್ರಥಮ ವರ್ಷದ ಫಾರ್ಮಸಿ ವಿದ್ಯಾರ್ಥಿಯಾಗಿದ್ದಾನೆ. ನನ್ನ ಅಪ್ಪ ಮಾತ್ರ ದುಡಿಯುತ್ತಿದ್ದರು. ಬೆದರಿಕೆ ಕರೆಯಿಂದಾಗಿ ಐದಾರು ದಿನ ಅಂಗಡಿ ಮುಚ್ಚಿದ್ದರು. ಆದರೆ ಹೆಚ್ಚು ದಿನ ಮುಚ್ಚಲು ಸಾಧ್ಯವಾಗಲಿಲ್ಲ. ಅವರೊಬ್ಬರೇ ದುಡಿಮೆ ಮಾಡಬೇಕಾಗಿದ್ದರಿಂದ ಅಂಗಡಿ ತೆರೆಯುವುದು ಅನಿವಾರ್ಯವಾಗಿತ್ತು. ಅಂಗಡಿ ತೆರೆದ ದಿನವೇ ಈ ಘೋರ ಕೃತ್ಯ ನಡೆದಿದೆ ಎಂದು ಮಗ ಯಶ್​ ಕಣ್ಣೀರಿಟ್ಟಿದ್ದಾನೆ.
ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಅದೇ ಇನ್ನೊಂದೆಡೆ, ಕೇಂದ್ರ ಗೃಹ ಸಚಿವಾಲಯವು ಈ ಘಟನೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಿದೆ. ಯಾವುದೇ ಸಂಘಟನೆಯ ಒಳಗೊಳ್ಳುವಿಕೆ ಮತ್ತು ಅಂತರಾಷ್ಟ್ರೀಯ ಲಿಂಕ್‌ಗಳ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವಾಲಯ ಬುಧವಾರ ತಿಳಿಸಿದೆ.
ಶಿರಚ್ಛೇದನ ಮಾಡಿದವರಿಗೆ ಐಸಿಸ್​ ನಂಟು? ಮೃತ ಟೈಲರ್​ ಕುಟುಂಬಕ್ಕೆ 31 ಲಕ್ಷ ರೂ. ಪರಿಹಾರ- ಇಬ್ಬರಿಗೆ ಉದ್ಯೋಗ

ಕಲ್ಲಂಗಡಿ ಒಡೆದಾಗ ಗಡಿಪಾರು ಮಾಡು ಎಂದ ಬುದ್ಧಿಜೀವಿಗಳೇ, ರುಂಡ ಕತ್ತರಿಸಿದ್ದಾರೆ… ಬಾಯಿ ಮುಚ್ಚಿಕೊಂಡಿರುವಿರೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − four =
Remember me
