ನವದೆಹಲಿ:ಚಿತ್ರನಟರಾದ ಸಮಂತಾ ಮತ್ತು ನಾಗಚೈತನ್ಯ ಅವರ ವಿಚ್ಛೇದನ ಸುದ್ದಿ ಇಡೀ ಚಿತ್ರರಂಗವನ್ನೇ ಹಾಗೂ ಚಿತ್ರರಸಿಕರನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಇವರಿಬ್ಬರು ಡಿವೋರ್ಸ್‌ ಪಡೆದದ್ದು ಏಕೆ ಎನ್ನುವ ಬಗ್ಗೆ ಅಭಿಮಾನಿಗಳ ನಡುವೆ ಹಾಗೆ ಹೀಗೆ ಎಂದು ಚರ್ಚೆಯಾಗುತ್ತಿದೆಯೇ ವಿನಾ, ನಿಜವಾದ ಕಾರಣ ಏನು ಎಂಬುದು ಅವರಿಗೆ ತಿಳಿದಿಲ್ಲ.
ಅದಕ್ಕಾಗಿ ಜಾಲತಾಣದ ಮೂಲಕವಾದಲೂ ಇವರಿಬ್ಬರು ಏನಾದರೂ ಹೇಳುತ್ತಾರೆಯೇ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದರ ನಡುವೆಯೇ, ಇವರಿಬ್ಬರ ಮೇಲೆ ಸದಾ ಕಣ್ಣಿಡುತ್ತಿದ್ದಾರೆ ಚಿತ್ರರಸಿಕರು. ನಾಗಚೈತನ್ಯ ಅವರಿಂದ 200 ಕೋಟಿ ರೂಪಾಯಿ ಪರಿಹಾರವನ್ನು ನಿರಾಕರಿಸಿದ ನಂತರ ಸಮಂತಾ ಹಲವರ ಬಾಯಲ್ಲಿ ಭೇಷ್‌ ಅನ್ನಿಸಿಕೊಂಡಿರುವ ನಡುವೆಯೇ, ದಂಪತಿ ದೂರವಾಗುತ್ತಿದ್ದಂತೆಯೇ ನಾಗಚೈತನ್ಯ ಅವರು ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಲಕ್ಷುರಿ ಮನೆ ಖರೀದಿಸಿದ್ದಾರೆ. ಸದ್ಯ ಈ ಮನೆಯನ್ನು ನವೀಕರಿಸಲಾಗುತ್ತಿದೆ. ನವೀಕರಣ ಕಾರ್ಯ ಪೂರ್ಣಗೊಂಡ ಬಳಿಕ ನಾಗಚೈತನ್ಯ ಅವರು ಅಲ್ಲಿಗೆ ಶಿಫ್ಟ್ ಆಗಲಿದ್ದಾರೆ ಎಂಬ ಸುದ್ದಿಗಳು ಕೇಳಿಬಂದಿವೆ.
ಇದೇನೇ ಇದ್ದರೂ ಬಹಿರಂಗವಾಗಿ ನಾಗಚೈತನ್ಯ ಅವರು ಯಾವುದೇ ಮಾಹಿತಿಯನ್ನು ನೀಡಲಿಲ್ಲ. ಈ ನಡುವೆಯೇ ಅವರು ಟ್ವೀಟ್‌ ಮಾಡುವ ಮೂಲಕ ಅಭಿಮಾನಿಗಳಿಗೆ ಹೊಸ ಸುದ್ದಿ ನೀಡಿದ್ದಾರೆ. ಡಿವೋರ್ಸ್‌ ಬೆನ್ನಲ್ಲೇ ಸ್ವಲ್ಪ ದಿನ ಜಾಲತಾಣದಿಂದಲೂ ದೂರವಿದ್ದ ನಾಗಚೈತನ್ಯ ಅವರು ಟ್ವಿಟರ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಅಭಿಮಾನಿಗಳು ಸಮಂತಾರ ವಿಷಯವೇ ಇರಬಹುದು, ತಮ್ಮ ದಾಂಪತ್ಯದ ಬಗ್ಗೆ ಬರೆದಿರಬಹುದು ಎಂದು ಟ್ವಿಟರ್‌ ಮೇಲೆ ಕಣ್ಣಾಡಿಸಿದ್ದರು. ಇದಕ್ಕೆ ಕಾರಣವೂ ಇದೆ. ಇವರಿಬ್ಬರೂ ಸ್ನೇಹಿತರ ಮಾತಿನ ಮೇರೆಗೆ ಒಟ್ಟಾಗಲಿದ್ದಾರೆ ಎಂಬ ಸುದ್ದಿಗಳೂ ಹರಿದಾಡುತ್ತಿದ್ದು ಇದರ ಬಗ್ಗೆಯೇ ಬರೆದಿರಬಹುದು ಎಂದು ಹಲವರು ಅಂದುಕೊಂಡಿದ್ದರು.
ಆದರೆ ಟ್ವಿಟರ್‌ನಲ್ಲಿ ನಾಗಚೈತನ್ಯ ಹೇಳಿರುವ ವಿಷಯ ತಮ್ಮ ಹೊಸ ಚಿತ್ರದ ಕುರಿತು. ತಮ್ಮ ಮುಂಬರುವ ತೆಲುಗು ಚಿತ್ರ ‘ಅನುಭವಂಚು ರಾಜಾ’ದ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ಈ ತಂಡಕ್ಕೆ ಶುಭ ಹಾರೈಸಿದ್ದಾರೆ.
Here’s the fun- filled massive mass title track of#AnubhavinchuRajahttps://t.co/0OEGzd05vkGood luck to the entire team !@AnnapurnaStdios@SVCLLP@itsRajTarun@GavireddySreenu@adityamusic@GopiSundarOfflpic.twitter.com/YL4RKLMc5L
— chaitanya akkineni (@chay_akkineni)October 11, 2021

‘ಕೋಟಿಗೊಬ್ಬ’ನ ಕಾಣದೇ ರಾಜ್ಯದೆಲ್ಲೆಡೆ ರೊಚ್ಚಿಗೆದ್ದ ಕಿಚ್ಚನ ಅಭಿಮಾನಿಗಳು- ಆತ್ಮಹತ್ಯೆ ಬೆದರಿಕೆ!

‘ಯತ್ನಾಳ್‌ರ ಸಿಡಿ ಬಿಡುಗಡೆಗೆ ಕ್ಷಣಗಣನೆ’- ಜಾಲತಾಣದ ತುಂಬ ಹರಿದಾಡ್ತಿದೆ ಪೋಸ್ಟ್‌: ದೂರು ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
