ಲಖನೌ:ಟ್ರೂ ಕಾಲರ್‌ನಲ್ಲಿ ಹೆಸರು ನೋಡಿಕೊಂಡು ಸಾವಿರಾರು ಮಹಿಳೆಯರಿಗೆ ಅಶ್ಲೀಲ ಕರೆ ಮಾಡಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಯುವಕನೊಬ್ಬನನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ವಾಟ್ಸ್‌ಆ್ಯಪ್‌ ವಿಡಿಯೋ ಕಾಲ್‌ ಮಾಡುತ್ತಿದ್ದ ಈತ ತನ್ನ ನಗ್ನ ದೇಹವನ್ನು ತೋರಿಸಿ, ಅದನ್ನು ರೆಕಾರ್ಡ್‌ ಮಾಡಿಟ್ಟುಕೊಂಡು ನಂತರ ಮಹಿಳೆಯರಿಗೆ ಕಿರುಕುಳ ನೀಡಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ. ಈ ಸಂಬಂಧ 370 ಮಂದಿ ಮಹಿಳೆಯರು ಉತ್ತರ ಪ್ರದೇಶ ಪೊಲೀಸರ ಮಹಿಳಾ ಪವರ್ ಲೈನ್ 1090ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇನ್ನು ಮಾಹಿತಿ ನೀಡದೇ ಹೆದರಿ ಸುಮ್ಮನಾಗಿರುವವರು ಸಹಸ್ರಾರು ಮಂದಿ ಇರಬಹುದು ಎಂದಿದ್ದಾರೆ ಪೊಲೀಸರು.
ಬಲ್ಲಿಯಾ ಮೂಲದ 35 ವರ್ಷದ ಶುವ್ ಕುಮಾರ್ ವರ್ಮಾ ಎಂಬಾತನನ್ನು ಬಂಧಿಸಲಾಗಿದೆ. ಬಿಎ ಪದವೀಧರನಾದ ಶುವ್‌ ಸ್ಟೇಷನರಿ ಅಂಗಡಿಯೊಂದನ್ನು ನಡೆಸುತ್ತಿದ್ದಾನೆ. ಇಲ್ಲಿ ಕೆಲಸ ಮುಗಿದ ಮೇಲೆ ಈತನದ್ದು ಬ್ಲ್ಯಾಕ್‌ಮೇಲಿಂಗ್‌ ಕೆಲಸ.
ಇವನು ಮಾಡುತ್ತಿದ್ದುದು ಏನೆಂದರೆ, ಯಾವುದಾದರೂ 10 ಅಂಕಿಯ ನಂಬರ್‌ ಅನ್ನು ಟೈಪ್‌ ಮಾಡುತ್ತಿದ್ದ. ಟ್ರೂಕಾಲರ್‌ನಲ್ಲಿ ಹೆಣ್ಣುಮಕ್ಕಳ ಹೆಸರು ಕಂಡುಬಂದರೆ ಅವರಿಗೆ ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೋ ಕಾಲ್‌ ಮಾಡುತ್ತಿದ್ದ. ಇವನ ಬಳಿ ಏಳು ಸ್ಮಾರ್ಟ್‌ಫೋನ್‌ಗಳು ಇವೆ. ಈ ಸಮಯದಲ್ಲಿ ತನ್ನನ್ನು ಸಂಪೂರ್ಣವಾಗಿ ನಗ್ನಮಾಡಿಕೊಂಡಿರುತ್ತಿದ್ದ. ನಂತರ ವಿಡಿಯೋ ಕಾಲ್‌ ಅನ್ನು ಮಹಿಳೆಯರು ಸ್ವೀಕರಿಸಿದ ತಕ್ಷಣ ವಿಡಿಯೋ ರೆಕಾರ್ಡಿಂಗ್‌ ಬಳಸಿ ತನ್ನ ಮತ್ತು ಅವರ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ. ಅವನು ಯಾರು, ಅವನು ವೇಷ ನೋಡುವ ಮೊದಲೇ ಅಲ್ಲಿ ಆತನ ಮತ್ತು ಆ ಮಹಿಳೆಯ ವಿಡಿಯೋ ರೆಕಾರ್ಡಿಂಗ್‌ ಆಗಿರುತ್ತದೆ.
ನಂತರ ಮಹಿಳೆಯರು ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದರೆ, ಅಥವಾ ಏನಾದರೂ ಧಮ್ಕಿ ಹಾಕಿದರೆ, ಅವರ ಮನೆಯವರ ಫೋನ್‌ ನಂಬರ್‌ಗಳು ತನ್ನ ಬಳಿ ಇದ್ದು, ಅವರಿಗೆ ಈ ವಿಡಿಯೋ ಕ್ಲಿಪ್ಪಿಂಗ್ಸ್‌ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ಇದರಿಂದ ಹೆದರಿ ಮಹಿಳೆಯರು ಅವನ ಸಹವಾಸ ಬೇಡ ಎಂದು ಸುಮ್ಮನಾಗುತ್ತಿದ್ದರು. ಆದರೆ ಕೆಲವು ಮಹಿಳೆಯರು ದೂರು ನೀಡಿದ್ದು, ಈತನನ್ನು ಬಂಧಿಸಿ ಎಲ್ಲಾ ಸ್ಮಾರ್ಟ್‌ಫೋನ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ದಿನವೂ ಕನಸಲ್ಲಿ ಬಂದು ರೇಪ್‌: ಮಹಿಳೆ ದೂರು ಕೇಳಿ ಬೆಚ್ಚಿಬಿದ್ದ ಪೊಲೀಸರು- ಆಗಿದ್ದೇನು?

ಲವರ್‌ ಜತೆ ಓಡಿಹೋಗಿದ್ದಕ್ಕೆ ಜೈ ಎಂದ ಕೋರ್ಟ್‌- ಆದೇಶ ಕೇಳಿ ಸುಸ್ತಾದ ಗುಟ್ಕಾಪ್ರಿಯ ಪತಿ!

ಲಸಿಕೆಗೆ ಒತ್ತಾಯಿಸುವುದು, ಸೌಲಭ್ಯ ಕಟ್‌ ಎನ್ನುವ ಬೆದರಿಕೆ ಹಾಕುವುದು ಕಾನೂನುಬಾಹಿರ ಎಂದ ಹೈಕೋರ್ಟ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 3 =
Remember me
