ಹೈದರಾಬಾದ್:ವಿವಾದಾತ್ಮಕ ಹೇಳಿಕೆ ನೀಡುವುದಕ್ಕೇ ಫೇಮಸ್‌ ಆಗಿರುವ, ಜತೆಗೆ ಇಂಥ ಹೇಳಿಕೆಯಿಂದಲೇ ಟ್ರೋಲ್‌ ಆಗುತ್ತಿರುವ ತೆಲುಗು ಹಿರಿಯ ನಟ, ರಾಜಕಾರಣಿ ಹಾಗೂ ಎನ್.ಟಿ.ರಾಮ ರಾವ್ ಅವರ ಪುತ್ರ ನಂದಮುರಿ ಬಾಲಕೃಷ್ಣ ಈಗ ಮತ್ತೊಂದು ಹೇಳಿಕೆ ನೀಡಿದ್ದು, ಜಾಲತಾಣದಲ್ಲಿ ಭಾರಿ ಕೋಪಕ್ಕೆ ಗುರಿಯಾಗಿದೆ.ಖಾಸಗಿ ವಾಹಿನಿಗೆ ಬಾಲಕೃಷ್ಣ ಅವರು ನೀಡಿರುವ ಸಂದರ್ಶನದಿಂದ ಇದೀಗ ಎಲ್ಲರೂ ಹುಬ್ಬೇರಿಸಿದ್ದಾರೆ. ಏಕೆಂದರೆ ಇವರು ಅತ್ಯುನ್ನತ ಪ್ರಶಸ್ತಿಗಳ ವಿರುದ್ಧವಾಗಿ ಮಾತನಾಡಿರುವುದು ಮಾತ್ರವಲ್ಲದೇ ಅವುಗಳನ್ನು ಅತ್ಯಂತ ಹೀನಾಯವಾಗಿ ಕಂಡಿದ್ದು, ಭಾರಿ ಟೀಕೆಗೆ ಗುರಿಯಾಗಿದೆ.ತೆಲುಗು ಚಿತ್ರರಂಗದ ಸ್ಟಾರ್‌ ನಟರಾಗಿ ದಶಕಗಳ ಕಾಲ ಗುರುತಿಸಿಕೊಂಡಿದ್ದ ಎನ್‌.ಟಿ.ರಾಮರಾವ್‌ (ಎನ್‌ಟಿಆರ್‌) ಅವರ ಪುತ್ರರಾಗಿರುವ ನಂದಮುರಿ ಅವರು, ಭಾರತ ರತ್ನ ನನ್ನ ತಂದೆ ಎನ್‌ಟಿಆರ್‌ ಅವರ ಕಾಲಿನ ಬೆರಳಿನ ಉಗುರಿಗೆ ಸಮ, ಆಸ್ಕರ್ ಪ್ರಶಸ್ತಿ ಅವರ ಪಾದದ ಧೂಳಿಗೆ ಸಮ, ಯಾವ ಪ್ರಶಸ್ತಿಗಳನ್ನೂ ನಾನು ಗೌರವಿಸುವುದಿಲ್ಲ. ಎಲ್ಲವೂ ನನ್ನ ಪಾದಕ್ಕೆ ಸಮ ಎಂದು ಹೇಳಿದ್ದಾರೆ.ಸಂದರ್ಶನದ ಸಮಯದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಅವರ ಕುರಿತಾಗಿ ಕೇಳಿರುವ ಪ್ರಶ್ನೆಗೆ ಉತ್ತರಿಸಿದ ನಂದಮುರಿ ಬಾಲಕೃಷ್ಣ ಅವರು, ನನಗೆ ಎ.ಆರ್.ರೆಹಮಾನ್ ಯಾರೆಂದು ಗೊತ್ತಿಲ್ಲ, ನಾನು ಕೇರ್ ಮಾಡುವುದಿಲ್ಲ. ದಶಕಗಳ ಹಿಂದೆ ಅವರು ಹಿಟ್ ಹಾಡುಗಳನ್ನು ನೀಡಿ ಆಸ್ಕರ್ ಅವಾರ್ಡ್ ಪಡೆದಿರಬಹುದು. ಆದರೆ ಅವೆಲ್ಲಾ ನನ್ನ ತಂದೆಯ ಪಾದದ ಧೂಳಿಗೆ ಸಮ. ಟಾಲಿವುಡ್‍ಗೆ ನಮ್ಮ ಕುಟುಂಬ ನೀಡಿದ ಕೊಡುಗೆಯನ್ನು ಯಾವುದೇ ಪ್ರಶಸ್ತಿ ಸರಿದೂಗಿಸಲು ಸಾಧ್ಯವಿಲ್ಲ. ಪ್ರಶಸ್ತಿಗಳು ಮಾತ್ರ ಕೆಟ್ಟದ್ದನ್ನು ಅನುಭವಿಸಬೇಕು. ನನ್ನ ಕುಟುಂಬ ಅಥವಾ ನನ್ನ ತಂದೆ ಅಲ್ಲ ಎಂದು ಖಾರವಾಗಿ ನುಡಿದಿದ್ದಾರೆ.ಎ.ಆರ್.ರೆಹಮಾನ್ ಅವರು 1993ರಲ್ಲಿ ಬಾಲಕೃಷ್ಣ ಅವರ ನಿಪ್ಪು ರವ್ವಾ ಸಿನಿಮಾಗೆ ಹಿನ್ನೆಲೆ ಸಂಗೀತ ಕಂಪೋಸ್ ಮಾಡಿದ್ದು ಇಲ್ಲಿ ಉಲ್ಲೇಖಾರ್ಹ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
