ನಾನೊಬ್ಬ ನತದೃಷ್ಟ ಯುವತಿ, ಕಾಲೇಜಿಗೆ ಹೋಗುತ್ತಿದ್ದೇನೆ. ಇಬ್ಬರು ತಮ್ಮಂದಿರು ಇದ್ದಾರೆ. ತಾಯಿಯನ್ನು ಕಳೆದುಕೊಂಡಿದ್ದೇವೆ. ತಂದೆ ಬೆಳಗ್ಗೆ 8ಕ್ಕೆ ಕೆಲಸಕ್ಕೆಂದು ಹೋದರೆ ಸಂಜೆ 6ಗಂಟೆಗೆ ಬರುತ್ತಾರೆ. ನಂತರ ಮನೆಗೆ ಬಳಸಲು ಹೊರಗಿನ ನಲ್ಲಿಯಿಂದ ನೀರು ತಂದು ಹಾಕುತ್ತಾರೆ. ಆಮೇಲೆ ಹೊರಹೋದರೆ ಮತ್ತೆ ಮನೆಗೆ ಬರುವುದು ರಾತ್ರಿ 10 ಗಂಟೆಯ ಮೇಲೆ!
ಚಿಕ್ಕತಮ್ಮಂದಿರು 9ಕ್ಕೆ ಮಲಗಿ ಬಿಡುತ್ತಾರೆ. ನಾನೊಬ್ಬಳೇ ಅಪ್ಪ ಬರುವತನಕ ಅಳುತ್ತಾ ಕೂಡುತ್ತೇನೆ. ಕೆಲವೊಮ್ಮೆ ಕವನ ಬರೆಯುತ್ತಾ ಕಾಲ ಕಳೆಯುತ್ತೇನೆ. ಒಮ್ಮೊಮ್ಮೆ ಭಯವಾಗುತ್ತದೆ. ಇತ್ತ ತಾಯಿಯು ಇಲ್ಲ, ಅತ್ತ ತಂದೆಯ ಪ್ರೀತಿಯು ಇಲ್ಲ. ಅಪ್ಪ ಹೀಗೇಕೆಮಾಡುತ್ತೀ?
ಮನೆಯಲ್ಲಿರು. ನಮ್ಮನ್ನು ನೋಡಿಕೋ ಎಂದರೆ ನನಗೊಂದಷ್ಟು ವಿಷವಿದ್ದರೆ ಕೊಟ್ಟುಬಿಡಿ ಎಂದು ಗದರುತ್ತಾರೆ. ನಮಗೆ ಆರೋಗ್ಯ ತಪ್ಪಿದರೂ ತಮ್ಮ ಕೆಲಸಕ್ಕೆ ರಜೆ ಹಾಕುವುದಿಲ್ಲ. ಆದರೆ ಅವರ ಸ್ನೇಹಿತ ಯಾವುದೋ ಚುನಾವಣೆಗೆ ನಿಂತರೆ ವಾರಗಟ್ಟಲೆ ರಜೆ ಹಾಕಿದ್ದರು. ನಮಗೆ ಉಡುವುದಕ್ಕೆ ತಿನ್ನುವುದಕ್ಕೆ ಯಾವುದಕ್ಕೂ ಕಡಿಮೆ ಮಾಡಿಲ್ಲ. ಕೇಳಿದ್ದನ್ನು ಎಷ್ಟೇ ದುಬಾರಿಯಾದರೂ ಕೊಡಿಸುತ್ತಾರೆ. ಆದರೆ ಮೇಡಂ, ನಮಗೆ ಅಪ್ಪನ ಪ್ರೀತಿಯು ಬೇಕಲ್ಲವೇ? ಅವರು ನಮ್ಮ ಜೊತೆಯಲ್ಲಿ ಸ್ವಲ್ಪ ಕಾಲವನ್ನಾದರೂ ಕಳೆಯ ಬೇಕಲ್ಲವೇ? ಒಳ್ಳೆಯ ಮಾತುಗಳನ್ನು ಆಡಬೇಕಲ್ಲವೇ? ಅಪ್ಪನ ಪ್ರೀತಿ ಪಡೆಯೋ ಅದೃಷ್ಟವಂತರು ನಾವಲ್ಲವೇ? ನಾವೇನು ಮಾಡಿದರೆ ಅವರು ನಮ್ಮನ್ನು ಪ್ರೀತಿಸುತ್ತಾರೆ ತಿಳಿಸಿ ಮೇಡಂ?
ಉತ್ತರ:ಮಗು. ನೀನು ಕವನ ಬರೆಯುವುದನ್ನು ಅಭ್ಯಾಸ ಮಾಡಿಕೋ. ಇದು ನಿನಗೆ ಸಾಕಷ್ಟು ಒಳ್ಳೆಯ ಭವಿಷ್ಯ ನೀಡುತ್ತದೆ. ಈಗ ನಿನ್ನ ಸಮಸ್ಯೆಗೆ ಬರೋಣ. ನಿನ್ನ ಪತ್ರದಿಂದಲೇ ನನಗೆ ತಿಳಿದಿದ್ದೇನೆಂದರೆ ನಿಮ್ಮ ಅಪ್ಪ ನಿಮ್ಮನ್ನು ಪ್ರೀತಿಸುವುದಿಲ್ಲವೆನಿಸುವುದಿಲ್ಲ.
ಅವರು ಪ್ರತಿನಿತ್ಯ ಹೊರಗಿನ ನಲ್ಲಿಯಿಂದ ನೀರು ಹೊತ್ತು ಹಾಕುವುದು, ನೀವು ಕೇಳಿದ್ದನ್ನು ಎಷ್ಟು ದುಬಾರಿಯಾದರೂ ಕೊಡಿಸುವುದು ಇವೆಲ್ಲ ನಿಮ್ಮ ಬಗ್ಗೆ ಪ್ರೀತಿಯಿಲ್ಲದಿದ್ದರೆ ಮಾಡುತ್ತಿರಲಿಲ್ಲ. ಕೆಲವರಿಗೆ ಮಕ್ಕಳನ್ನು ಆಲಂಗಿಸುವುದು, ಒಳ್ಳೆ ಮಾತುಗಳನ್ನಾಡುತ್ತಾ ಮುದ್ದು ಮಾಡುವುದು ಇವೆಲ್ಲ ಬರುವುದಿಲ್ಲ. ಒಬ್ಬೊಬ್ಬರ ಪ್ರೀತಿಯ ಪ್ರಕಟ ಒಂದೊಂದು ರೀತಿಯಿರುತ್ತದೆ. ಇಲ್ಲಿ ನೀನು ಇನ್ನೊಂದು ವಿಷಯವನ್ನು ಗಮನಿಸ ಬೇಕು.
ನೀವು ಅಮ್ಮನನ್ನ ಕಳೆದುಕೊಂಡಂತೆ, ಅವರು ಹೆಂಡತಿಯನ್ನು ಕಳೆದುಕೊಂಡಿದ್ದಾರೆ. ನೀನೇನೋ ಅಪ್ಪನೇ ಅಮ್ಮನ ಸ್ಥಾನ ತುಂಬಲಿ ಎಂದು ನಿರೀಕ್ಷಿಸುತ್ತೀಯೆ. ಕಾಲೇಜಿಗೆ ಹೋಗುವ ನಿನ್ನಂಥ ಮಗಳ ತಂದೆ, ಮಧ್ಯವಯಸ್ಕರಾದವರು `ಹೆಂಡತಿ’ ಯ ಸ್ಥಾನ ಖಾಲಿಯಾದಾಗ ಪರಿತಪಿಸುವುದು ಸಹಜವೇತಾನೇ? ಮನೆಯಲ್ಲಿ ಹೆಚ್ಚುಹೊತ್ತು ಇದ್ದಷ್ಟು ಅವರಿಗೆ ತಮ್ಮ ಅಳಿದ ಹೆಂಡತಿಯ ನೆನಪು ಕಾಡಬಹುದು. ಅದರಿಂದ ಬಚಾವಾಗಲು ಅವರು ಹೊರಗೆ ಸ್ನೇಹಿತರ ಸಾಂಗತ್ಯವನ್ನು ಪಡೆಯುತ್ತಿದ್ದಾರೆ ಅಷ್ಟೇ.
ನೀನು, ನಿನ್ನ ಮತ್ತು ತಮ್ಮಂದಿರ ಬಗ್ಗೆ ಮಾತ್ರ ಯೋಚಿಸುತ್ತಿದ್ದೀಯೆ. ನೀನು ಪ್ರೌಢಾವಸ್ಥೆಗೆ ಬರುತ್ತಿದ್ದೀಯೆ. ಈಗ ನಿಮ್ಮಪ್ಪನ ಬಗ್ಗೆಯೂ ಯೋಚಿಸು. ಅವರಿಂದ ಮಗುವಿನ ಹಾಗೆ ಹೆಚ್ಚು ನಿರೀಕ್ಷಿಸುವುದನ್ನು ಬಿಟ್ಟು , ಅವರಿಗೆ ಸಂತೋಷವಾಗುವ ಹಾಗೆ ಒಳ್ಳೆಯ ಅಡುಗೆ ಮಾಡಿ ಹಾಕುವುದು, ಮನೆಯನ್ನು ಶುಭ್ರವಾಗಿಟ್ಟುಕೊಳ್ಳುವುದು, ತಮ್ಮಂದಿರ ಓದಿಗೆ ಸಹಾಯ ಮಾಡುವುದು, ಇತ್ಯಾದಿಯನ್ನು ಮಾಡುತ್ತಾ `ನಾನಿಲ್ಲದಿದ್ದರು ನನ್ನ ಮಗಳು ಮನೆಯನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾಳೆ’ ಎನ್ನುವ ಭಾವ ನಿಮ್ಮಪ್ಪನಿಗೆ ಬರುವ ಹಾಗೆ ಮಾಡು.
ಸ್ವಲ್ಪ ಕಾಲವಾದ ಮೇಲೆ ನಿನ್ನ ಒಳ್ಳೆಯತನ, ನಿನ್ನ ಅಚ್ಚುಕಟ್ಟುತನ ಇವೆಲ್ಲವೂ ನಿಮ್ಮಪ್ಪನನ್ನು ಮನೆಯ ಕಡೆಗೆ ಎಳೆಯಬಹುದಲ್ಲವೇ? ಹಾಗೂ ಅವರು ಬದಲಾಗಲಿಲ್ಲವೆಂದುಕೊ ಆ ಹೊತ್ತಿಗೆ ‘ಎಂಥಾ ಪ್ರಸಂಗ ಬಂದರು ನಿಭಾಯಿಸುತ್ತೇನೆ’ ಎನ್ನುವ ಧೈರ್ಯ ನಿನಗೆ ಬಂದಿರುತ್ತದಲ್ಲ? ಅದಕ್ಕಿಂತ ಹೆಚ್ಚೇನು ಬೇಕು ಹೇಳು?
ಡಾ.ಶಾಂತಾ ನಾಗರಾಜ್​ ಅವರ ಆಪ್ತ ಸಲಹೆಗಾಗಿ ಕ್ಲಿಕ್ಕಿಸಿ:
https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/
ಪ್ರೀತಿಸಿದವಳನ್ನು ಮದುವೆಯಾಗಲು ಮನೆಯವರು ಬಿಡುತ್ತಿಲ್ಲ- ನಮಗಿರುವ ಮುಂದಿನ ದಾರಿಗಳೇನು?

ಮಕ್ಕಳಿಗಾಗಿ ಮದುವೆಯಾದರು: ಎರಡನೇ ಪತ್ನಿಯಾದ ಮಾತ್ರಕ್ಕೆ ನನಗೆ ಬಯಕೆಗಳು ಇರುವುದು ತಪ್ಪೆ?

ಈ ಪತ್ರವನ್ನು ಗುಟ್ಟಾಗಿ ಬರೆಯುತ್ತಿದ್ದೇನೆ. ಈ ನತದೃಷ್ಟೆಗೆ ದಯವಿಟ್ಟು ನೆರವಾಗಿ ಮೇಡಂ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × four =
Remember me
