ಪ್ರಶ್ನೆ: ನಮ್ಮ ತಂದೆ ತಾಯಿಗೆ ನಾಲ್ಕು ಗಂಡು ಮಕ್ಕಳು ಮತ್ತು ನಾನು ಒಬ್ಬಳೇ ಹೆಣ್ಣು ಮಗಳು. ಒಬ್ಬ ಅಣ್ಣ ತೀರಿಕೊಂಡಿದ್ದು, ಅವನ ಹೆಂಡತಿ ಇದ್ದಾಳೆ. ನಮ್ಮ ತಂದೆ ಸ್ವಯಾರ್ಜಿತ ಆಸ್ತಿ ಬೆಂಗಳೂರಿನಲ್ಲಿ ಇದೆ. ಅವರು ತೀರಿಕೊಳ್ಳುವ ಮುಂಚೆ ಆ ಆಸ್ತಿಯನ್ನು ನಮ್ಮ ತಾಯಿಗೆ ವಿಲ್ ಮಾಡಿದ್ದರು. ಖಾತೆ ಅವರ ಹೆಸರಿಗೇ ಬಂದಿತ್ತು. ಈಗ ನಮ್ಮ ತಾಯಿಯೂ ತೀರಿಕೊಂಡಿದ್ದಾರೆ. ಅವರು ಯಾರಿಗೂ ವಿಲ್ ಮಾಡಿಲ್ಲ. ಈಗ ಆಸ್ತಿಯಲ್ಲಿ ನನಗಾಗಲೀ, ನಮ್ಮ ಅಕ್ಕನಿಗಾಗಲೀ ನನ್ನ ವಿಧವೆ ಅತ್ತಿಗೆಗಾಗಲೀ ಭಾಗ ಕೊಡುವುದಿಲ್ಲ ಎಂದು ನನ್ನ ಮೂರು ತಮ್ಮಂದಿರು ಹೇಳುತ್ತಿದ್ದಾರೆ. ಅವರು ಮೂವರೇ ಆಸ್ತಿ ಹಂಚಿಕೊಂಡು ವಿಭಾಗ ಪತ್ರ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ಈಗ ನಮ್ಮ ಹಕ್ಕು ಇದೆಯೇ?
ಉತ್ತರ: ನಿಮ್ಮ ತಂದೆ ನಿಮ್ಮ ತಾಯಿಗೆ ವಿಲ್ ಮಾಡಿದ ಮೇಲೆ ಅದು ನಿಮ್ಮ ತಾಯಿಯ ಆಸ್ತಿಯೇ ಆಗುತ್ತದೆ, ನಿಮ್ಮ ತಾಯಿ ತೀರಿಕೊಂಡ ನಂತರ ಹಿಂದೂ ವಾರಸಾ ಕಾಯ್ದೆಯ ಕಲಂ 15ರಂತೆ ನಿಮ್ಮ ತಾಯಿಯ ಎಲ್ಲ ಮಕ್ಕಳಿಗೂ ಸಮಪಾಲು ಬರುತ್ತದೆ.
ನಿಮ್ಮ ತೀರಿಕೊಂಡ ಅಣ್ಣನ ಐದನೇ ಒಂದು ಭಾಗ ಅವರ ವಿಧವೆ ಪತ್ನಿಗೆ ಸೇರುತ್ತದೆ. ನೀವು ಧೈರ್ಯವಾಗಿ ವಿಭಾಗದ ದಾವೆ ಹಾಕಬಹುದು. ನಿಮ್ಮ ಸಹೋದರರು ಮಾಡಿಕೊಂಡಿರುವ ವಿಭಾಗ ನಿಮ್ಮ ಹಕ್ಕನ್ನು ಬಂಧಿಸುವುದಿಲ್ಲ ಎನ್ನುವ ಹಕ್ಕು ಘೋಷಣೆಯನ್ನೂ ಕೇಳಬಹುದು. ಲಿಮಿಟೇಷನ್ ಕಾಯ್ದೆಯ ಮತ್ತು ಔಸ್ಟರ್ ಎನ್ನುವ ಕಾನೂನಿನ ಅಂಶದ ತಡೆ ಬಾರದಂತೆ ವಕೀಲರ ಹತ್ತಿರ ಹೋಗಿ ಸರಿಯಾದ ಸಲಹೆ ಪಡೆದು ದಾವೆ ಸಲ್ಲಿಸಿ.
(ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲುhttp://vijayavani.netಕ್ಲಿಕ್ಕಿಸಿ. ಅಲ್ಲಿ ಅಂಕಣ ಕಾಲಮ್‌ನಲ್ಲಿ ನ್ಯಾಯದೇವತೆ ಎಂದು ಇದ್ದು ಅದರ ಮೇಲೆ ಕ್ಲಿಕ್‌ ಮಾಡಿದರೆ ಎಲ್ಲವೂ ಲಭ್ಯ.)
ಮಗನ ಮದುವೆಗೆ ನೆರವಾದದ್ದೇ ತಪ್ಪಾಯ್ತು: ಗಂಡ ಹತ್ತಿರ ಸೇರಿಸುತ್ತಿಲ್ಲ- ಅವರ ಆಸ್ತಿ ಸಿಗುವುದಿಲ್ಲವೆ?

ಮನೆ ಕಟ್ಟಿದ ಮಾತ್ರಕ್ಕೆ ಆಸ್ತಿ ನಿಮ್ಮದಾಗುವುದಿಲ್ಲ: ಕಾನೂನು ಏನು ಹೇಳುತ್ತದೆ ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × three =
Remember me
