ಕೋಲ್ಕತ:ರಾಷ್ಟ್ರ ಮಟ್ಟದ ಶೂಟರ್‌ ಕೋನಿಕಾ ನಾಯಕ್‌ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ, ಕೊಲೆಯೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಬಂಗಾಳದ ಬಾಲಿ ಹಾಸ್ಟೆಲ್‌ನಲ್ಲಿ ಈಕೆಯ ಮೃತದೇಹ ಪತ್ತೆಯಾಗಿದೆ. ಮೃತದೇಹದ ಸಮೀಪ ಡೆತ್‌ನೋಟ್‌ ಕೂಡ ಸಿಕ್ಕಿದೆ. ‘ಖಿನ್ನತೆಯೇ ನನ್ನ ಈ ನಿರ್ಧಾರಕ್ಕೆ ಕಾರಣ. ನನಗೆ ಅವಕಾಶಗಳು ಸಿಗದ ಕಾರಣ ಖಿನ್ನತೆಗೆ ಒಳಗಾಗಿದ್ದೆ. ಆದ್ದರಿಂದ ಸಾಯುತ್ತಿದ್ದೇನೆ’ ಎಂದು ಅದರಲ್ಲಿ ಬರೆಯಲಾಗಿದೆ. ಆದರೆ ನಿಜವಾಗಿಯೂ ಇದು ಕೋನಿಕಾ ಅವರೇ ಬರೆದದ್ದಾ ಅಥವಾ ಇದು ಬೇರೆಯವರದ್ದು ಬರವಣಿಗೆಯಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚಿದ್ದ ಕೊನಿಕಾ, ಇದಾಗಲೇ ಹಲವಾರು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದರು. ಜಾರ್ಖಂಡ್‌ ರಾಜ್ಯಮಟ್ಟದ ರೈಫಲ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದಿದ್ದರು. ಒಲಿಂಪಿಯನ್‌ ಮತ್ತು ಅರ್ಜುನ ಪ್ರಶಸ್ತಿ ವಿಜೇತ ಜೋಯ್‌ದೀಪ್‌ ಕರ್ಮಾಕರ್‌ ಬಳಿ ತರಬೇತಿ ಪಡೆಯುತ್ತಿದ್ದರು.
ಈಕೆಯ ಸಾಧನೆಯನ್ನು ಗಮನಿಸಿದ್ದ ನಟ ಸೋನು ಸೂದ್‌ ಜರ್ಮನಿಯಲ್ಲಿ ತಯಾರಿಸಿದ್ದ ರೈಫಲ್‌ ಅನ್ನು ಈಕೆಗೆ ಉಡುಗೊರೆಯಾಗಿ ನೀಡಿದ್ದರು. ‘ಸೋನು ಸೂದ್‌ ಸರ್‌, ನೀವು ಕೊಟ್ಟ ರೈಫಲ್‌ ನನ್ನ ಬಳಿ ಇದೆ. ತುಂಬಾ ಧನ್ಯವಾದಗಳು, ನೀವು ಇದನ್ನು ಕೊಟ್ಟಿರುವುದಕ್ಕೆ ನನ್ನ ಕುಟುಂಬದಲ್ಲಿ ಸಂತಸ ಮೂಡಿದೆ. ಇಡೀ ಗ್ರಾಮವೇ ನಿಮ್ಮನ್ನು ಆಶೀರ್ವದಿಸುತ್ತಿದೆ. ನೀವು ಬಹುಕಾಲ ಬಾಳಿರಿʼಎಂದು ಟ್ವೀಟ್‌ ಮಾಡಿದ್ದರು.ಇಷ್ಟೆಲ್ಲಾ ಇರುವಾಗ ಖಿನ್ನತೆಗೆ ಇವರು ಜಾರಲು ಸಾಧ್ಯವೆ ಅಥವಾ ಈ ಸಾವಿನ ಹಿಂದೆ ಇನ್ನೇನಾದರೂ ನಿಗೂಢ ಕಾರಣಗಳಿವೆಯೇ ಎಂಬುದು ಬೆಳಕಿಗೆ ಬರಬೇಕಿದೆ.
ಬಾಲಿವುಡ್‌ ನಟಿ ಆಲಿಯಾ ಭಟ್‌ ಎರ್ರಾಬಿರ್ರಿ ಓಡಾಟ: ಎಫ್‌ಐಆರ್‌ ದಾಖಲಿಸಲು ಆದೇಶಿಸಿದ ಆರೋಗ್ಯ ಸಮಿತಿ

ಅಂಗವಿಕಲೆಯ ಪಾದಕ್ಕೆ ನಮಸ್ಕರಿಸಿದ ಪ್ರಧಾನಿ ಮೋದಿ: ಭಾವುಕನಾದ ಸಹೋದರ- ಶ್ಲಾಘನೆಗಳ ಮಹಾಪೂರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
