ಹರಿಯಾಣ:ಹರಿಯಾಣದ ಅಂತಾರಾಷ್ಟ್ರೀಯ ಮಟ್ಟದ ಕುಸ್ತೀಪಟು ನಿಶಾ ದಹಿಯಾ ಹಾಗೂ ಅವರ ಕುಟುಂಬದ ಮೇಲೆ ಎರಡು ದಿನಗಳ ಹಿಂದೆ ಭಯಾನಕ ಗುಂಡಿನ ದಾಳಿ ನಡೆದಿತ್ತು. ಈ ಸಮಯದಲ್ಲಿ ನಿಶಾ ಮತ್ತು ಸಹೋದರ ಮೃತಪಟ್ಟಿದ್ದರೆ, ಕುಟುಂಬಸ್ಥರು ಗಂಭೀರವಾಗಿ ಗಾಯಗೊಂಡಿದ್ದರು.ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಹತ್ಯೆಯಾಗಿರುವ ನಿಶಾ ಅವರ ಫೋಟೋ ಸಹಿತ ಮಾಧ್ಯಮಗಳಲ್ಲಿ ವರದಿಯಾಗಿದ್ದವು. ಆದರೆ ಇದೀಗ ನಿಶಾ ದಹಿಯಾ ಜಾಲತಾಣದಲ್ಲಿ ಪ್ರತ್ಯಕ್ಷರಾಗಿ ಅಚ್ಚರಿ ಮೂಡಿಸಿದ್ದಾರೆ. ನಿಶಾ ದಹಿಯಾ ಗುಂಡಿನ ದಾಳಿಯಲ್ಲಿ ಸತ್ತಿದ್ದು ನಿಜ. ಆಕೆ ರಾಷ್ಟ್ರೀಯ ಮಟ್ಟದ ಕುಸ್ತಿ ಪಟು ಕೂಡ ಹೌದು. ಆದರೆ ಆಕೆ ನಾನಲ್ಲ ಎಂದಿದ್ದಾರೆ!ಇದರಿಂದ ಜನರು ಗಲಿಬಿಲಿಗೊಂಡಿದ್ದಂತೂ ನಿಜ. ಅಷ್ಟಕ್ಕೂ ಆಗಿರುವುದು ಏನೆಂದರೆ ಹರಿಯಾಣದಲ್ಲಿ ಇಬ್ಬರು ನಿಶಾ ದಹಿಯಾ ಇದ್ದು, ಇಬ್ಬರೂ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳೇ ಆಗಿರುವುದು ಇಷ್ಟೆಲ್ಲಾ ಗೊಂದಲಕ್ಕೆ ಕಾರಣವಾಗಿದೆ. ಬದುಕಿರುವ ನಿಶಾ ದಹಿಯಾ ಅವರ ಫೋಟೋಗಳನ್ನು ಹಾಕಿ ಅವರ ಹತ್ಯೆ ಎಂದು ಬರೆಯಲಾಗಿತ್ತು.ಅದಕ್ಕೆ ಅವರು, ‘ಪ್ಲೀಸ್‌ ಈವಿಷಯ ನಂಬಿ, ಸರಿಯಾಗಿ ಕೇಳಿ. ನನ್ನ ಮೇಲೆ ಗುಂಡಿನ ದಾಳಿ ಆಗಿಲ್ಲ. ನನ್ನ ಕುಟುಂಬದ ಜತೆ ಸುರಕ್ಷಿತವಾಗಿದ್ದೇನೆ. ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕಾಗಿ ಸದ್ಯ ಗೊಂಡಾಕ್ಕೆ ಬಂದಿದ್ದೇನೆ. ಗುಂಡಿನಲ್ಲಿ ಮೃತಪಟ್ಟಿದ್ದು, ಯು-23 ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದವರು. ಅವರು ನಾನಲ್ಲ. ಇಬ್ಬರ ಹೆಸರೂ ಒಂದೇ ಆಗಿದ್ದ ಕಾರಣ ಈ ಗೊಂದವಾಗಿದೆ. ಅದ್ದರಿಂದ ಸತ್ತಿದ್ದು ನಾನಲ್ಲ’ ಎಂದಿದ್ದಾರೆ.
ನಿಶಾ ಮಾತನಾಡಿರುವ ವಿಡಿಯೋ ಇಲ್ಲಿದೆ:
#WATCH| "I am in Gonda to play senior nationals. I am alright. It's a fake news (reports of her death). I am fine," says wrestler Nisha Dahiya in a video issued by Wrestling Federation of India.(Source: Wrestling Federation of India)pic.twitter.com/fF3d9hFqxG— ANI (@ANI)November 10, 2021
#WATCH| "I am in Gonda to play senior nationals. I am alright. It's a fake news (reports of her death). I am fine," says wrestler Nisha Dahiya in a video issued by Wrestling Federation of India.(Source: Wrestling Federation of India)pic.twitter.com/fF3d9hFqxG
ಚಾಮರಾಜನಗರದ ಅಂಧರ ಬಾಳಲ್ಲಿ ಬೆಳಕಾಗಲಿದೆ ಅಪ್ಪು ಆದರ್ಶ: ‘ಪುನೀತ್‌’ ಕಣ್ಣಿನ ಆಸ್ಪತ್ರೆ- 46 ಸಾವಿರ ಮಂದಿಯ ನೇತ್ರದಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + thirteen =
Remember me
