ಕೀವ್:ಯೂಕ್ರೇನ್​ನಲ್ಲಿ ಎಂಬಿಬಿಎಸ್​ ಓದಲು ತೆರಳಿ ಗುಂಡಿನ ದಾಳಿಗೆ ಬಲಿಯಾಗಿರುವ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಮೃತದೇಹ ಸಿಕ್ಕಿರುವುದಾಗಿ ವರದಿಯಾಗಿದೆ.
ಅಗತ್ಯ ವಸ್ತುಗಳನ್ನು ಖರೀದಿಸಲು ನವೀನ್​ ತೆರಳಿದ್ದ ವೇಳೆ ಫೈರಿಂಗ್​ ಶುರುವಾಯಿತು. ಅಷ್ಟರಲ್ಲಿ ನವೀನ್​ ಮೇಲೆ ಗುಂಡಿನ ದಾಳಿ ಆಯಿತು ಎಂದು ಸ್ನೇಹಿತ ಗೌತಮ್ ಹೇಳಿದ್ದಾರೆ. ಆದರೆ ಇದುವರೆಗೆ ಮೃತದೇಹ ಪತ್ತೆಯಾಗಿರಲಿಲ್ಲ. ಅದೀಗ ಪತ್ತೆಯಾಗಿರುವುದಾಗಿ ವರದಿಯಾಗಿದೆ.‘ಯೂಕ್ರೇನ್​ನ ಖಾರ್ಕಿವ್ ನಲ್ಲಿ ನವೀನ್ ಮೃತದೇಹ ಸಿಕ್ಕಿದ್ದು, ಅದನ್ನು ಭಾರತಕ್ಕೆ ಸಾಗಿಸಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಯೂಕ್ರೇನ್​ನ ರಾಯಭಾರಿ ಕಚೇರಿ ಮೂಲಕ ನವೀನ್ ಪಾರ್ಥಿವ ಶರೀರ ವಾಪಸ್ ತರಲು ಯತ್ನ ಮಾಡಲಾಗುತ್ತಿದೆ. ಈ ಕುರಿತು ಮಾತುಕತೆ ನಡೆದಿರುವುದಾಗಿ ವರದಿಯಾಗಿದೆ.
ಈ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನವೀನ್ ಕುಟುಂಬಕ್ಕೆ ಪರಿಹಾರ ಮತ್ತು ಏನ್ ಬೇಕೋ ಅದನ್ನು ಮಾಡುತ್ತೇವೆ. ಮೊದಲು ನಾವು ಅಲ್ಲಿಂದ ಮೃತದೇಹ ತರುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ನವೀನ್ ಜತೆಗಿದ್ದ ಎನ್ನಲಾದ ಗಾಯಾಳು ಸ್ನೇಹಿತರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪ್ರಾಥಮಿಕವಾಗಿ ಎರಡು ತರಹದ ಮಾಹಿತಿ ಬರುತ್ತಿದೆ. ಒಂದು ವರದಿಯ ಪ್ರಕಾರ ನವೀನ್ ಜತೆ ಇದ್ದರು. ಇನ್ನೊಂದು ವರದಿ ಪ್ರಕಾರ ಜತೆ ಇರಲಿಲ್ಲವೆಂದು ಹೇಳಲಾಗುತ್ತಿದೆ. ಖಚಿತವಾಗುವ ತನಕ ಯಾವುದನ್ನೂ ದೃಢಪಡಿಸಲಾಗದು ಎಂದರು.
ನವೀನ್ ಧರಿಸಿದ್ದ ಉಡುಪುಗಳನ್ನು ಆತನ ಗೆಳೆಯರು ಗುರುತಿಸಿ ಫೋಟೋಗಳನ್ನು ಕಳುಹಿಸಿದ್ದು, ವಿದೇಶಾಂಗ ಸಚಿವರು‌ ಹಾಗೂ ಯೂಕ್ರೇನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ‌ ಕಳುಹಿಸಲಿದ್ದು, ಮೃತದೇಹ ಪತ್ತೆ ಹಚ್ವಿ ಭಾರತಕ್ಕೆ ವಾಪಸ್ ತರಲು ಪ್ರಯತ್ನಿಸಲಾಗುವುದು ಎಂದರು.
ಕೇಂದ್ರ ಸರ್ಕಾರ ತುಂಬಾ ಕೆಲಸ ಮಾಡಿದೆ. ಕನ್ನಡಿಗರು ಯಾರೆಲ್ಲಾ ಇದ್ದಾರೆ ಅವರನ್ನೆಲ್ಲಾ ಕೋಠರ್ಡಿನೆಟ್ ಮಾಡುತ್ತಿದ್ದೇವೆ. ಯುದ್ಧ ನಡೆದಿರುವ ಕಾರಣ ವೇಗ, ನಿಖರವಾಗಿ ತೆರವು ಮಾಡಲು ಆಗುತ್ತಿಲ್ಲ. ನಿಧಾನವಾಗಿ ವಾರ್ ಝೋನ್ ನಿಂದ ಎಲ್ಲರನ್ನು ಕರೆತರುವ ಪ್ರಯತ್ನ ಮುಂದುವರಿದಿದೆ ಎಂದರು.
ಪ್ರತಿಪಕ್ಷ ಕಾಂಗ್ರೆಸ್ ಗೆ ಜನರ ಸಮಸ್ಯೆಗಿಂತ ರಾಜಕಾರಣವೇ ಮುಖ್ಯ. ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿ ಯುದ್ಧಗಳು ನಡೆದವು. ಆಗ ಒಬ್ಬರನ್ನು ತಾಯ್ನಾಡಿಗೆ ಕರೆತರದವರು ಈಗ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನಡೆಸಿರುವ ಪ್ರಯತ್ನಗಳನ್ನು ಟೀಕಿಸುತ್ತಿದೆ. ಇವರಿಗೆ ಯುದ್ಧ ಕಾಲದಲ್ಲಿ ರಾಜಕಾರಣ ಮಾಡುವುದು ಬೇಕಾಗಿದೆ. ಯೂಕ್ರೇನ್ ಗಡಿ ದೇಶಗಳಲ್ಲಿ ನಾಲ್ವರು ಸಚಿವರು ಬಿಡಾರ ಹೂಡಿದ್ದಾರೆ. ತೆರವು ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಮುಂದಿನ 72 ತಾಸುಗಳಲ್ಲಿ 26 ವಿಮಾನಗಳನ್ನು ಬಳಸಿ ಭಾರತೀಯರನ್ನು ಕರೆ ತರುವ ಏರ್ಪಾಟುಗಳಾಗಿವೆ. ಇದ್ಯಾವುದು ಕಾಂಗ್ರೆಸ್ ನವರ ಕಣ್ಣಿಗೆ ಕಾಣುತ್ತಿಲ್ಲ. ಯುದ್ಧವನ್ನು ರಾಜಕಾರಣಕ್ಕೆ ಬಳಸುತ್ತಿರುವ ಆ ಪಕ್ಷದ ನಾಯಕರು ಎಷ್ಟು ಕೆಳಮಟ್ಟಕ್ಕೆ ಇಳಿದಿದ್ದಾರೆ ಎನ್ನುವುದು ಎತ್ತಿ ತೋರಿಸುತ್ತದೆ ಎಂದು ಸಿಎಂ ಬೊಮ್ಮಾಯಿ‌ ಕಿಡಿಕಾರಿದರು.
ಯೂಕ್ರೇನ್​ನಲ್ಲಿ ಕನ್ನಡಿಗ ನವೀನ್​ ಸಾವು: ಘಟನೆಯನ್ನು​ ಎಳೆಎಳೆಯಾಗಿ ಬಿಚ್ಚಿಟ್ಟ ನವೀನ್​ ಸ್ನೇಹಿತ ಗೌತಮ್​

ಗ್ರಾಪಂ ಸದಸ್ಯನ ಜತೆ ಕಾಮದಾಟ: ಪ್ರಶ್ನಿಸಿದ್ದ ಮಗನನ್ನೇ ಕೊಲೆ ಮಾಡಿದಳಾ ಪಾಪಿ ತಾಯಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
