ಮುಂಬೈ:80-90ರ ದಶಕದಲ್ಲಿ ಬಾಲಿವುಡ್​ ಸಿನಿಮಾ ಆಳಿದ ಕೆಲವೇ ತಾರೆಯರ ಪೈಕಿ ನೀಲಂ ಕೂಡ ಒಬ್ಬರು. 2011ರಲ್ಲಿ ಸಲೀಂ ಸೋನಿ ಅವರನ್ನು ವಿವಾಹವಾಗುವ ಮೂಲಕ ನೀಲಂ ಕೊಠಾರಿ ಸೋನಿಯಾಗಿರುವ ಈ ನಟಿ ಕಳೆದ ತಿಂಗಳಷ್ಟೇ 51ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಸದ್ಯ ನೆಟ್‌ಫ್ಲಿಕ್ಸ್ ಕಾರ್ಯಕ್ರಮದ ಫ್ಯಾಬುಲಸ್ ಲೈವ್ಸ್ ಆಫ್ ಬಾಲಿವುಡ್ ವೈವ್ಸ್‌ನಲ್ಲಿ ಬಿಜಿಯಾಗಿರುವ ನೀಲಂ, ತಮ್ಮ ಆರಂಭದ ಭಯಾನಕ ದಿನಗಳನ್ನು ಬಿಚ್ಚಿಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ತಾವು ಅನುಭವಿಸಿದ ವಿಲಕ್ಷಣ ವದಂತಿಯ ಬಗ್ಗೆ ಹೇಳಿಕೊಂಡಿದ್ದಾರೆ.
‘ನಾನು ತುಂಬಾ ಸ್ನೇಹಜೀವಿ. ಎಲ್ಲರ ಜತೆ ಅತ್ಯಂತ ಆತ್ಮೀಯತೆಯಿಂದಲೇ ಮಾತನಾಡುತ್ತಿದ್ದೆ. ಅದ್ಯಾಕೋ ಗೊತ್ತಿಲ್ಲ. ಇದಕ್ಕಿದ್ದಂತೆಯೇ ನನ್ನ ಬಗ್ಗೆ ವಿಚಿತ್ರ ವದಂತಿ ಹರಡಿಬಿಟ್ಟಿತು. ನಾನೊಬ್ಬಳು ಸಲಿಂಗಕಾಮಿ ಎನ್ನುವ ವದಂತಿ ಅದಾಗಿತ್ತು’ ಎಂದಿದ್ದಾರೆ.
ಈ ಬಗ್ಗೆ ವಿವರಣೆ ನೀಡಿರುವ ನಟಿ, “ಸಲಿಂಗಕಾಮಿ ಎಂಬ ವದಂತಿ ಎಷ್ಟರಮಟ್ಟಿಗೆ ಹರಡಿತ್ತು ಎಂದರೆ ಅನೇಕ ಮಂದಿ ನನ್ನಲ್ಲಿ ಪ್ರಶ್ನೆ ಮಾಡಲು ಶುರು ಮಾಡಿದರು. ಆರಂಭದಲ್ಲಿ ನನಗೆ ಈ ವಿಷಯ ಕೇಳಿ ಆಘಾತವೇ ಆಗಿ ಹೋಯಿತು. ನಂತರ ಬರಬರುತ್ತಾ ಎಷ್ಟು ಭಯಾನಕ ಆಗಿಹೋಯಿತೆಂದರೆ ನಿಜಕ್ಕೂ ನಾನು ಸಲಿಂಗಕಾಮಿಯೇ ಎನ್ನಿಸಲು ಶುರುವಾಗಿಬಿಟ್ಟಿತು. ಅಬ್ಬಾ! ಎಂಥ ಹಿಂಸೆ ಅನುಭವಿಸಿದೆ” ಎಂದು ನೀಲಂ ಹೇಳಿದ್ದಾರೆ.
ಹೀಗೆ ಯಾರು ತಮ್ಮ ಬಗ್ಗೆ ಇಲ್ಲಸಲ್ಲದ ಆರೋಪ ಹೊರಿಸಿದರು ಎಂದು ತಿಳಿದಿಲ್ಲ ಎಂದಿರುವ ನೀಲಂ, ಆ ದಿನಗಳಂತೂ ನನಗೆ ವಿಚಿತ್ರ ಅನುಭವಗಳು ಆಗಲು ಶುರುವಾಗಿದ್ದವು ಎಂದಿದ್ದಾರೆ.
ಸದ್ಯ ಮತ್ತೆ ಹಿರಿತೆರೆಯ ಮೇಲೆ ಕಾಣಿಸಿಕೊಳ್ಳಲು ಇಚ್ಛಿಸಿರುವ ನಟಿ, ಈ ಕುರಿತು ತನ್ನ ಸ್ನೇಹಿತೆ ಏಕ್ತಾ ಕಪೂರ್ ಜತೆ ಚರ್ಚಿಸುತ್ತಿದ್ದಾರೆ. ಸದ್ಯ ರಿಯಾಲಿಟಿ ಸರಣಿ ಫ್ಯಾಬುಲಸ್ ಲೈವ್ಸ್ ಆಫ್ ಬಾಲಿವುಡ್ ವೈವ್ಸ್ ನಾಲ್ಕು ಬಾಲಿವುಡ್ ಪತ್ನಿಯರ ಮನಮೋಹಕ ಜೀವನವನ್ನು ತೋರಿಸುತ್ತಿದೆ. ಇದರಲ್ಲಿ ನೀಲಂ (ಸಮೀರ್ ಸೋನಿಯ ಪತ್ನಿ), ಭಾವನಾ ಪಾಂಡೆ (ಚಂಕಿ ಪಾಂಡೆಯವರ ಪತ್ನಿ), ಮಹೀಪ್ ಕಪೂರ್ (ಸಂಜಯ್ ಕಪೂರ್ ಅವರ ಪತ್ನಿ), ಮತ್ತು ಸೀಮಾ ಖಾನ್ (ಸೊಹೈಲ್ ಖಾನ್ ಅವರ ಪತ್ನಿ) ಅವರು ಇದನ್ನು ನಡೆಸಿಕೊಡುತ್ತಿದ್ದಾರೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ, ಇದು ನೆಟ್‌ಫ್ಲಿಕ್ಸ್ ಇಂಡಿಯಾದಲ್ಲಿ ಟಾಪ್ ಟ್ರೆಂಡಿಂಗ್ ಷೋ ಆಗಿ ಮಾರ್ಪಟ್ಟಿದೆ.
ಪುರುಷತ್ವ ಹೆಚ್ಚಿಸಲು ಆಯುರ್ವೇದ ಪರಿಹಾರವೇನು? ವೈದ್ಯರು ಕೊಟ್ಟ ಮಾಹಿತಿ ಇಲ್ಲಿದೆ…

ಪ್ಲೀಸ್​ ನಮ್ಮ ಲೆಗ್ಗಿಂಗ್ಸ್​ ಧರಿಸಿ ರಾಯಭಾರಿಯಾಗಿ: ಮೃತಪಟ್ಟಾಕೆಯನ್ನು ಕೋರಿಕೊಂಡ ಪ್ರಸಿದ್ಧ ಕಂಪೆನಿ!

ಸನ್ನಿ ಲಿಯೋನ್​, ಇಮ್ರಾನ್​ ಹಶ್ಮಿ ನನ್ನ ಅಮ್ಮ-ಅಪ್ಪ; ಹಾಲ್​ ಟಿಕೆಟ್​ನಲ್ಲಿ ಬರೆದ ವಿದ್ಯಾರ್ಥಿ!

ಪ್ರಿಯಾಂಕಾ ಛೋಪ್ರಾ, ಅರ್ಮಾನ್​ ಮಲಿಕ್​ರನ್ನು ಹಿಂದಿಕ್ಕಿ ಟಾಪ್​ 1 ಆದ್ರು ಸೋನು ಸೂದ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 + seventeen =
Remember me
