ಹೈದರಾಬಾದ್:ಮನೆಗಳನ್ನು ನಿರ್ಮಾಣ ಮಾಡುವಾಗ ಮರಗಳು ಅಡ್ಡಬರುವುದು ಸಹಜ. ಆದರೆ ಆ ಮರಗಳನ್ನು ಮನಸೋಇಚ್ಛೆ ಕಡಿಯುವಂತಿಲ್ಲ. ಅದಕ್ಕೆ ಅಧಿಕಾರಿಗಳ ಅನುಮತಿ ಬೇಕು, ಕೆಲವೊಂದು ಷರತ್ತುಗಳನ್ನು ವಿಧಿಸಿದ ಮೇಲೆ ಮರ ಕಡಿಯಲು ಅನುಮತಿ ನೀಡಲಾಗುತ್ತದೆ.
ಆದರೆ ಎಷ್ಟೋ ಕಡೆಗಳಲ್ಲಿ ಈ ನಿಯಮ ಮೀರಿ ಕಟ್ಟಡ ನಿರ್ಮಾಣದ ವೇಳೆ ಬೇಕಾಬಿಟ್ಟೆ ಮರ ಕಡಿಯಲಾಗುತ್ತದೆ. ಇದನ್ನು ನೋಡಿದವರು ಕೂಡ ನಮಗ್ಯಾಕೆ ಬೇಕು ಉಸಾಬರಿ ಎಂದು ಸುಮ್ಮನಾಗುತ್ತಾರೆ. ಆದರೆ ಇಲ್ಲೊಬ್ಬ 8ನೇ ಕ್ಲಾಸ್​ ಬಾಲಕ ಸುಮ್ಮನಾಗದೇ ಅಧಿಕಾರಿಗಳಿಗೆ ಕರೆ ಮಾಡಿ, ಮರ ಕಡಿಯುವವನಿಗೆ ಭಾರಿ ದಂಡ ಹಾಕಿಸಿ ಇದೀಗ ಸುದ್ದಿಯಾಗಿದ್ದಾನೆ, ಮಾತ್ರವಲ್ಲದೇ ಮರ ಕಡಿಯುವವರಿಗೆ ಹಾಗೂ ಮರ ಕಡಿಯುವುದನ್ನು ನೋಡಿಯೂ ಸುಮ್ಮನೇ ಇರುವವರಿಗೆ ಈ ಬಾಲಕ ಬುದ್ಧಿ ಕಲಿಸಿದ್ದಾನೆ.
ಈ ಘಟನೆ ನಡೆದಿರುವುದು ಹೈದರಾಬಾದ್​ನಲ್ಲಿ. ಹೊಸ ಮನೆ ನಿರ್ಮಾಣಕ್ಕೆ 40 ವರ್ಷಗಳಿಂದ ಬೆಳೆದು ನಿಂತಿರುವ ಬೇವಿನ ಮರ ಅಡ್ಡಿಯಾಗುತ್ತಿತ್ತು ಎಂದು ಬೇವಿನ ಮರ ಕತ್ತರಿಸಲಾಗುತ್ತಿತ್ತು. ಜಿ ಸಂತೋಷ್ ರೆಡ್ಡಿ ಎನ್ನುವವರು ಅರಣ್ಯ ಇಲಾಖೆಗೆ ಮಾಹಿತಿ ನೀಡದೇ ಈ ಕ್ರಮ ತೆಗೆದುಕೊಂಡಿದ್ದರು.
ಮರ ಕತ್ತರಿಸುವುದನ್ನು ಗಮನಿಸಿದ 8ನೇ ಕ್ಲಾಸ್​ ವಿದ್ಯಾರ್ಥಿಯೊಬ್ಬ ಅರಣ್ಯ ಇಲಾಖೆಯ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಸರ್​ ಸರ್​ ಇಲ್ಲೊಬ್ಬ ಅಂಕಲ್​ ಮರ ಕಡಿಯುತ್ತಿದ್ದಾರೆ ಎಂದು ದೂರು ನೀಡಿದ್ದ. ಸ್ಥಳಕ್ಕೆ ಆಗಮಿಸಿದ ಪೊಲೀಸರು ರೆಡ್ಡಿಯವರಿಗೆ 62 ಸಾವಿರ ರೂಪಾಯಿ ದಂಡವನ್ನು ವಿಧಿಸಿದ್ದಾರೆ.
ಮರ ಕಡಿಯುತ್ತಿರುವ ವಿಷಯವನ್ನು ಸಂಬಂಧ ಪಟ್ಟ ಇಲಾಖೆಗೆ ತಿಳಿಸಿದ ಬಾಲಕನ ಕೆಲಸಕ್ಕೆ ಅರಣ್ಯ ಇಲಾಖೆ ಹಾಗೂ ಸುತ್ತಮುತ್ತಲಿನ ಜನರು ಅಭಿನಂದನೆ ಸಲ್ಲಿಸಿದ್ದಾರೆ.
ಪಾಕ್​ ಜೈಲಿನಲ್ಲಿ 18 ವರ್ಷ ಅಕ್ರಮ ಬಂಧನ: ಭಾರತದ ಮಣ್ಣಿಗೆ ನಮಸ್ಕರಿಸಿ ಪ್ರಾಣಬಿಟ್ಟ ಹಸೀನಾ

ರೈತರ ಹೆಸರಿನಲ್ಲಿ ಗಣರಾಜ್ಯೋತ್ಸವದಂದು ಹಿಂಸಾಚಾರ: ಸಿಕ್ಕಿಬಿದ್ದ ಸಿಂಗ್​

VIDEO: ಹಿಮ ಸ್ಫೋಟ- 32 ಮೃತದೇಹ ಪತ್ತೆ; 200ಕ್ಕೂ ಅಧಿಕ ಮಂದಿ ನಾಪತ್ತೆ; ಹಗಲಿರುಳು ರಕ್ಷಣಾ ಕಾರ್ಯ

ಇತ್ತ ಪತ್ನಿ, ಅತ್ತ ಅಮ್ಮ- ಹಾವು ಮುಂಗುಸಿಯಂತೆ ಇರುವ ಇವರ ನಡುವೆ ಸಿಲುಕಿ ಒದ್ದಾಡುತ್ತಿದ್ದೇನೆ; ಪರಿಹಾರ ಹೇಳಿ ಪ್ಲೀಸ್​…

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:twelve + 7 =
Remember me
