ಧರ್ಮಪುರಿ:ಅಂಕ ಎಂಬುದು ಸರ್ವಸ್ವ ಅಲ್ಲ, ಅದೇ ಜೀವನವಲ್ಲ ಎಂಬುದಾಗಿ ಹಲವರು ಬುದ್ಧಿಮಾತು ಹೇಳುತ್ತಿದ್ದರೂ, ಪಾಲಕರ ಒತ್ತಡಕ್ಕೋ, ಶಿಕ್ಷಕರ ಮೇಲಿನ ಭಯಕ್ಕೋ ಒಟ್ಟಿನಲ್ಲಿ ಪರೀಕ್ಷೆ ಹಾಗೂ ಫಲಿತಾಂಶದ ಆಸುಪಾಸು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ.
ಅಂಥದ್ದೇ ಘಟನೆ ತಮಿಳುನಾಡಿನಲ್ಲಿಯೂ ನಡೆದಿದೆ. ಇಂದು ನೀಟ್​ ಪರೀಕ್ಷೆ. ಆದರೆ ಈ ಪರೀಕ್ಷೆಯ ಭಯದಲ್ಲಿ ನಿನ್ನೆ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಧರ್ಮಪುರಿ ಜಿಲ್ಲೆಯ ಇಲಕ್ಕಿ ಯಂಪಟ್ಟಿ ಎಂಬಲ್ಲಿ 20 ವರ್ಷದ ವಿದ್ಯಾರ್ಥಿ ಎಂ.ಆದಿತ್ಯ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈತ ಇಲಂಕಿಯಂಪಟ್ಟಿಯ ಸೇವಾತಕವುಂದಾರ್ ನಿವಾಸಿ. ಸೇಲಂ ಪರೀಕ್ಷಾ ಕೇಂದ್ರದಲ್ಲಿ ಇಂದು ಆತ ಪರೀಕ್ಷೆಗೆ ಹಾಜರಾಗಬೇಕಿತ್ತು.
ಇದನ್ನೂ ಓದಿ:ಸಿಎಎ ವಿರೋಧಿ ಪ್ರತಿಭಟನೆಗೆ ಕುಮ್ಮಕ್ಕು: ಆರೋಪಿ ಪಟ್ಟಿಯಲ್ಲಿ ಸೀತಾರಾಮ್​ ಯೆಚೂರಿ, ಯೋಗೇಂದ್ರ ಯಾದವ್​
ಆದರೆ ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಪರೀಕ್ಷಾ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವೈದ್ಯನಾಗುವ ಹಂಬಲದಿಂದ ನೀಟ್​ ಪರೀಕ್ಷೆಗೆ ಹಾಜರಾಗಬೇಕಿದ್ದ 21 ವರ್ಷದ ಮೋತಿಲಾಲ್ ಎಂಬ ವಿದ್ಯಾರ್ಥಿ ಕೂಡ ನಿನ್ನೆ ಆತ್ಮಹತ್ಯೆಯ ಹಾದಿ ತುಳಿದಿದ್ದಾನೆ. ನಮಕ್ಕಲ್ ಜಿಲ್ಲೆಯ ತಿರುಚೆಂಗೊಡೆಯ ನಿವಾಸಿ ಈತ. ಕಳೆದ ಎರಡು ಬಾರಿ ನೀಟ್ ಪರೀಕ್ಷೆ ಬರೆದು ಅತ್ಯಂತ ಕಡಿಮೆ ಅಂಕ ಗಳಿಸಿದ್ದ ಈತ ಪರೀಕ್ಷೆಯ ಮುನ್ನಾದಿನವೇ ಅದೇ ಭಯದಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಧುರೈಯ ವಿದ್ಯಾರ್ಥಿನಿ ಕೂಡ ನೀಟ್​ ಪರೀಕ್ಷೆಯ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ಡೆತ್​ನೋಟ್​ ಬರೆದಿಟ್ಟು, ಮೃತಪಟ್ಟಿದ್ದಾಳೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತಮಿಳುನಾಡಿನ 238 ಪರೀಕ್ಷಾ ಕೇಂದ್ರಗಳಲ್ಲಿ ಇಂದು ಪರೀಕ್ಷೆ ನಡೆಯಲಿದೆ. 1,17,990 ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿ ಆಂಬ್ಯುಲೆನ್ಸ್​ ಹತ್ತಿದ್ದ ಕರೊನಾ ಸೋಂಕಿತೆ ತಲುಪಿದ್ದು ದೆಹಲಿ! ಆಗಿದ್ದೇನು?

ಕೇರಳದ ಸ್ಮಗ್ಲಿಂಗ್​ ರಾಣಿಗೂ, ಕರ್ನಾಟಕದ ಡ್ರಗ್ಸ್​ ದಂಧೆಗೂ ಲಿಂಕ್​: ತನಿಖೆಯಿಂದ ಬಯಲು!

ರಾಮನ ಹಣಕ್ಕೆ ಕನ್ನ ಹಾಕಿದ ಖದೀಮರು: ಲಕ್ಷಾಂತರ ರೂಪಾಯಿ ವಿತ್​ಡ್ರಾ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − twelve =
Remember me
