ಮುಂಬೈ:ಸಿನಿ ಜಗತ್ತಿನಲ್ಲಿ ಕಾಸ್ಟ್​ ಕೌಚಿಂಗ್​ ಕುರಿತು ಇದಾಗಲೇ ಹಲವು ನಟಿಯರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ನಿರ್ದೇಶಕರು, ನಿರ್ಮಾಪಕರೂ ಸೇರಿದಂತೆ ಹಲವರು ತಮ್ಮನ್ನು ಹೇಗೆಲ್ಲಾ ಬಳಸಿಕೊಂಡರು ಅಥವಾ ಎಷ್ಟು ಕೀಳುಮಟ್ಟದ ಆಫರ್​ ನೀಡಿದ್ದರು ಎಂಬ ಬಗ್ಗೆ ಇದಾಗಲೇ ಬಹಿರಂಗವಾಗಿಯೇ ಕೆಲ ನಟಿಯರು ಹೇಳಿಕೆ ಕೊಟ್ಟಿದ್ದಾರೆ. ಇದೀಗ ಅಂಥದ್ದೇ ಹೇಳಿಕೆ ನೀಡಿದ್ದಾರೆ ಬಾಲಿವುಡ್​ ನಟಿ ನೀತು ಚಂದ್ರ.
ಸಿನಿಮಾವೊಂದರ ಆಡಿಷನ್​ಗೆ ಹೋಗಿದ್ದ ಸಂದರ್ಭದಲ್ಲಿ ಸಿನಿಮಾದ ನಿರ್ದೇಶಕರು ತಮ್ಮನ್ನು ರಿಜೆಕ್ಟ್​ ಮಾಡಿದ್ದಕ್ಕೆ, ಅದನ್ನೇ ಬಂಡವಾಳವಾಗಿಸಿಕೊಂಡು ಉದ್ಯಮಿಯೊಬ್ಬರು ತಮಗೆ ಕೊಟ್ಟ ಆಫರ್​ ಕುರಿತು ಸಂದರ್ಶನವೊಂದರಲ್ಲಿ ಕಹಿ ಅನುಭವ ಹಂಚಿಕೊಂಡಿದ್ದಾರೆ. ಉದ್ಯಮಿಯ ಹೆಸರನ್ನು ಹೇಳದ ನಟಿ, ತಮಗೆ ಅವರು ಕೊಟ್ಟ ಆಫರ್​ ಬಗ್ಗೆ ಹೇಳಿಕೊಂಡಿದ್ದಾರೆ.
ನಾನು ಇದಾಗಲೇ 13 ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರ ಜತೆ ಕೆಲಸ ಮಾಡಿದ್ದೇನೆ. ಆದರೆ ಇಷ್ಟು ಮಾಡಿದರೂ ನನ್ನ ಬಳಿ ಹಣವೂ ಇಲ್ಲ, ಕೆಲಸವೂ ಇಲ್ಲ. ಚಿಕ್ಕದಾಗಿ ಹೇಳಬೇಕೆಂದರೆ ನನ್ನದು ಯಶಸ್ವಿ ನಟನ ವೈಫಲ್ಯದ ಕಥೆ ಎಂದೇ ಹೇಳಬಹುದು. ಚಿತ್ರವೊಂದರ ಶೂಟಿಂಗ್​ಗೆ ಹೋದಾಗ, ಒಂದೇ ಒಂದು ಗಂಟೆಯಲ್ಲಿ ನಿರ್ದೇಶಕರು ನನ್ನನ್ನು ರಿಜೆಕ್ಟ್​ ಮಾಡಿದರು. ಇದು ತಿಳಿಯುತ್ತಲೇ ಪ್ರಖ್ಯಾತ ಉದ್ಯಮಿಯೊಬ್ಬರು ನನ್ನನ್ನು ಸಂಬಳದ ಪತ್ನಿಯಾಗಿ ಇರಿಸಿಕೊಳ್ಳುವುದಾಗಿ ಆಫರ್​ ಕೊಟ್ಟರು. ಇದಕ್ಕಿಂಥ ಕಹಿ ಅನುಭವ ಬೇಕೆ ಎಂದು ಭಾವುಕರಾಗಿ ನುಡಿದರು.
ಗರಂ ಮಸಾಲಾ (2005) ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ನೀತು, ಇದರಲ್ಲಿ ಗಗನಸಖಿಯ ಪಾತ್ರವನ್ನು ನಿರ್ವಹಿಸಿದ್ದರು. ಅದಾದ ಮೇಲೆ ಟ್ರಾಫಿಕ್ ಸಿಗ್ನಲ್, ಒನ್ ಟೂ ತ್ರೀ, ಓಯ್ ಲಕ್ಕಿ ಲಕ್ಕಿ ಓಯೆ, ಅಪಾರ್ಟ್‌ಮೆಂಟ್, 13 ಬಿ ಮುಂತಾದ ಹಲವಾರು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶೆಫಾಲಿ ಶಾ, ರಾಹುಲ್ ಬೋಸ್ ಮತ್ತು ಸುಮೀತ್ ರಾಘವನ್ ಜತೆಗಿನ ಕುಚ್ ಲವ್ ಜೈಸಾ ಅವರ ಕೊನೆಯ ಹಿಂದಿ ಚಿತ್ರ. ಓಯೆ ಲಕ್ಕಿ ಲಕ್ಕಿ ಓಯೆ ಅತ್ಯುತ್ತಮ ಜನಪ್ರಿಯ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ನೀತೂ ಅಭಿನಯದ ಮಿಥಿಲಾ ಮಖಾನ್ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಕೂಡ ಲಭಿಸಿದೆ. ಇಷ್ಟಾದರೂ ಇವರ ಕೈಯಲ್ಲಿ ಸದ್ಯ ಸಿನಿಮಾ ಇಲ್ಲ.
ನೀತು ಚಂದ್ರ ನೀಡಿರುವ ಹೇಳಿಕೆ ವಿಡಿಯೋ ಇಲ್ಲಿದೆ:
A post shared by Faridoon Shahryar (@ifaridoon)
ಮಾಡೆಲ್​ನಂತಾಗಲು 4.5 ಕೋಟಿ ರೂ. ಖರ್ಚು ಮಾಡಿದಳು- ಮೊದಲಿನಂತಾಗಲು ಮತ್ತೆ ಸರ್ಜರಿ ಮಾಡಿಸಿದಳು!

ರಾಜಕೀಯ ನಾಯಕರ ತಲೆಬಿಸಿ ಮಾಡಿದ ಹೊಸ ಕೈಪಿಡಿ: ಇನ್ಮುಂದೆ ಬಾಯಿ ಬಿಡೋ ಹಾಗೇ ಇಲ್ಲ!

ಉನ್ನತ ಶಿಕ್ಷಣ ಪಡೆದ ಸಿರಿವಂತ ಮಹಿಳೆಯರೇ ಈತನ ಟಾರ್ಗೆಟ್​: 11 ಮಂದಿಯನ್ನು ಮದ್ವೆಯಾದ ಸಚಿವರ ಸಂಬಂಧಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 9 =
Remember me
