ಡೆಹ್ರಾಡೂನ್‌:ಉತ್ತರಾಖಂಡದ ಬಿಜೆಪಿ ಶಾಸಕ ಮಹೇಶ್‌ ನೇಗಿ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರದ ದೂರು ದಾಖಲು ಮಾಡಿದ್ದಾರೆ.
ಶಾಸಕ ಮಹೇಶ್‌ ನೇಗಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ. ಶಾಸಕರೇ ನನ್ನ ಮಗಳ ತಂದೆ. ಬೇಕಾದ್ದಲ್ಲಿ ಡಿಎನ್‌ಎ ಪರೀಕ್ಷೆಗೂ ತಾನು ಸಿದ್ಧ ಎಂದು ಮಹಿಳೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನೇಗಿ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ.
ನೇಗಿ ಅವರು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ, ಮಾತ್ರವಲ್ಲದೇ ವಿಷಯವನ್ನು ತಿಳಿಸದಂತೆ ಬೆದರಿಕೆ ಹಾಕಿದ್ದಾರೆ. ಅವರ ಅತ್ಯಾಚಾರದಿಂದಾಗಿಯೇ ನನಗೆ ಮಗಳ ಜನಿಸಿದ್ದಾಳೆ. ಆಕೆಯ ಡಿಎನ್​ಎ ಪರೀಕ್ಷೆ ಮಾಡಿದರೆ ಸತ್ಯಾಂಶ ಗೊತ್ತಾಗುತ್ತದೆ. ನಾನು ಪರೀಕ್ಷೆಗೆ ಸಿದ್ಧ ಎಂದು ಮಹಿಳೆ ಹೇಳಿದ್ದಾರೆ.
ಇದನ್ನೂ ಓದಿ:ಶಿಕ್ಷಕಿ ದೇಣಿಗೆ ಕೇಳಿದರೆ, ಅವರಿಂದಲೇ ₹48 ಲಕ್ಷ ದೋಚಿದ ಭೂಪ- ನಿಮಗೂ ಇದು ಪಾಠ!
ನೇಗಿ ಅವರ ಪತ್ನಿ ರಿತಾ ಕೂಡ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಸ್ಥಳೀಯ ನ್ಯಾಯಾಲಯದ ಆದೇಶದ ಮೇರೆಗೆ ಶಾಸಕ ಮಹೇಶ್‌ ನೇಗಿ ವಿರುದ್ಧ ಅತ್ಯಾಚಾರ ಮತ್ತು ಅವರ ಪತ್ನಿ ರಿತಾ ನೇಗಿಯ ವಿರುದ್ಧ ಬೆದರಿಕೆ ಕೇಸ್​ ದಾಖಲು ಮಾಡಿಕೊಳ್ಳಲಾಗಿದೆ.
ನೆಹರೂ ಕಾಲೋನಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡೆಹ್ರಾಡೂನ್‌ ವರಿಷ್ಠಾಧಿಕಾರಿ ಶ್ವೇತ ಚೌಬೆ ತಿಳಿಸಿದ್ದಾರೆ.
ಆದರೆ ಈ ಆರೋಪವನ್ನು ಮಹೇಶ್‌ ನೇಗಿ ತಳ್ಳಿ ಹಾಕಿದ್ದಾರೆ, ‘ಇದು ನನ್ನ ಹೆಸರಿಗೆ ಕಳಂಕ ತರಲು ನಡೆದಿರುವ ಪಿತೂರಿ. ಇದರಲ್ಲಿ ಕಾಂಗ್ರೆಸ್‌ ನಾಯಕರ ಕೈವಾಡವಿದೆ. ನಾನು ಯಾವುದೇ ತನಿಖೆಯನ್ನು ಎದುರಿಸಲು ಸಿದ್ಧನಿದ್ದೇನೆ’ ಎಂದು ಹೇಳಿದರು.
ನಟಿ ಕಂಗನಾಗೆ ಕೇಂದ್ರದಿಂದ ‘ವೈ ಪ್ಲಸ್’​ ಭದ್ರತೆ: ಏನಿದರ ವಿಶೇಷತೆ?

ಚಿಕ್ಕಮಗಳೂರು: ಕರೊನಾದಿಂದ ಮೃತಪಟ್ಟ ಅಪ್ಪನ ಅಂತ್ಯಕ್ರಿಯೆ ನಡೆಸಿ ಮಾದರಿಯಾದ ಮಗಳು…

ವಿಮಾನದ ಒಳಗಲ್ಲ… ಇನ್ನು ರೆಕ್ಕೆ ಮೇಲೆ ಕುಳಿತೇ ಹಾರಬಹುದು!

ಮದುವೆಯಾದ 3ನೇ ದಿನ ತವರಿಗೆ ದಬ್ಬಿದ… 8ನೇ ದಿನ ತಲಾಖ್​… ತಲಾಖ್​… ತಲಾಖ್​… ಎಂದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 17 =
Remember me
