ಬೆಗುಸರಾಯ್ (ಬಿಹಾರ):ಮನೆಯ ಅಂಗಳದಲ್ಲಿ ಬೆಳೆದಿದ್ದ ಸಸಿಯೊಂದನ್ನು ಆಟವಾಡುತ್ತಿದ್ದ ಬಾಲಕಿ ಕಿತ್ತ ಸಿಟ್ಟಿಗೆ ಆಕೆಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿರುವ ಭೀಕರ ಘಟನೆ ಬಿಹಾರದ ಬೆಗುಸರಾಯ್​ ಎಂಬಲ್ಲಿ ನಡೆದಿದೆ.
12 ವರ್ಷದ ಬಾಲಕಿಯನ್ನು ಸೀಮೆಎಣ್ಣೆ ಸುರಿದು ಸುಟ್ಟು ಹಾಕಿದ್ದಾನೆ ಸಿಖಂದರ್ ಯಾದವ್ ಎಂಬ ಪಾಪಿ. ಬೇಗುಸರಾಯ್ ಜಿಲ್ಲೆಯ ಸಿವರಾಣ ಗ್ರಾಮದಲ್ಲಿ ಈ ಭಯಾನಕ ಘಟನೆ ನಡೆದಿದೆ.
12 ವರ್ಷದ ಬಾಲಕಿ ಈತನ ಮನೆಯ ಎದುರು ಆಟವಾಡುತ್ತಿದ್ದಳು. ಈ ವೇಳೆ ಸಿಖಂದರ್ ಮನೆಯ ಎದುರಿಗೆ ಇದ್ದ ಒಂದು ಸಸಿ ಆಕೆಯ ಗಮನ ಸೆಳೆದಿದೆ. ಅದನ್ನು ಕೀಳಬಾರದು ಎನ್ನುವುದನ್ನೂ ತಿಳಿಯದ ಬಾಲಕಿ ನೋಡಲು ಚೆನ್ನಾಗಿದ್ದ ಕಾರಣ ಅದನ್ನು ಕಿತ್ತುಬಿಟ್ಟಿದ್ದಾಳೆ.
ಸಸಿ ಕಿತ್ತದ್ದನ್ನು ಕಂಡು ಕೆಂಡಾಮಂಡಲನಾದ ಸಿಕಂದರ್​ ಮಾತ್ರವಲ್ಲದೇ ಆತನ ಪತ್ನಿ ಮತ್ತು ಆತನ ಮಗಳು ಬಾಲಕಿ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಸಾಲದು ಎಂಬಂತೆ ಸಿಕಂದರ್​ ಮನೆಯಲ್ಲಿದ್ದ ಸೀಮೆ ಎಣ್ಣೆ ತಂದು ಬಾಲಕಿಯ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ. ಇದಕ್ಕೆ ಪತ್ನಿ ಮತ್ತು ಮಗಳೂ ಸಾಥ್​ ನೀಡಿದ್ದಾರೆ!
ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಯ ಸ್ಥಿತಿ ಗಂಭೀರವಾಗಿರುವುದಾಗಿ ವೈದ್ಯರು ಹೇಳಿದ್ದಾರೆ. ಸಿಖಂದರ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬೇಗುಸರಾಯ್ ಪೊಲೀಸ್ ವರಿಷ್ಠಾಧಿಕಾರಿ ನಿಶಿತ್ ಪ್ರಿಯಾ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದಿದ್ದಾರೆ.
ಬಸವಕಲ್ಯಾಣದಿಂದ ಬಿ.ವೈ.ವಿಜಯೇಂದ್ರ ಕಣಕ್ಕಿಳಿಯುವರೆ?ಸಿಎಂ ಯಡಿಯೂರಪ್ಪ ಏನು ಹೇಳಿದ್ರು ನೋಡಿ…

ಪತಿಯನ್ನು ಕೊಲ್ಲಲು ಸುಪಾರಿ ಕೊಟ್ಟ ಪತ್ನಿ- ₹6 ಲಕ್ಷ ಕೊಟ್ಟ ಪುತ್ರ- ಬೆಂಗಳೂರಲ್ಲಿ ಭಯಾನಕ ಘಟನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
