ಪ್ರಯಾಗರಾಜ್:ಉತ್ತರಪ್ರದೇಶ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಸಿಕ್ಕಿರುವ ಘಟನೆಗೆ ಸಂಬಂಧಿಸಿದಂತೆ ಈ ಪ್ರಕರಣ ಇನ್ನೂ ವಾರಣಾಸಿ ಹೈಕೋರ್ಟ್​ನಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ. ಅದೇ ಇನ್ನೊಂದೆಡೆ, ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿರುವ ಶಿವಲಿಂಗ ಮತ್ತು ಆ ಸ್ಥಳವನ್ನು ಯಥಾವತ್ತಾಗಿ ಕಾಪಾಡಲು ಸುಪ್ರೀಂಕೋರ್ಟ್​ ಸೂಚಿಸಿದೆ.
ಈ ನಡುವೆಯೇ ಶ್ರಾವಣ ಸೋಮವಾರದ ಹಿನ್ನೆಲೆಯಲ್ಲಿ, ಇಲ್ಲಿಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಹೋಗಿದ್ದರು ಸುಭಾಷ್​ ಚಂದ್ರ ಬೋಸ್​ ಅವರ ಮರಿ ಮೊಮ್ಮಗಳಾದ ರಾಜಶ್ರೀ ಚೌಧರಿ. ಆದರೆ ಅವರನ್ನು ನಡುವೆಯೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದೆಹಲಿಯಿಂದ ರೈಲು ಮುಖಾಂತರ ವಾರಾಣಸಿಗೆ ಹೊರಟಿದ್ದ ಹಿಂದೂ ಮಹಸಭಾ ರಾಷ್ಟ್ರೀಯ ಅಧ್ಯಕ್ಷೆಯಾಗಿರುವ ರಾಜಶ್ರೀ ಚೌಧರಿ ಅವರನ್ನು ಸಂಗಮ್​ ನಗರದಲ್ಲಿಯೇ ತಡೆಯಲಾಗಿದೆ. ಮಸೀದಿ ಆವರಣದಲ್ಲಿ ಸಿಕ್ಕಿರುವ ವಿವಾದಿತ ಶಿವಲಿಂಗಕ್ಕೆ ಪೂಜೆ, ಜಲಾಭಿಷೇಕ ಮಾಡಲು ತಾವು ಹೋಗುತ್ತಿರುವುದಾಗಿ ಹೇಳಿದರೂ ಪೊಲೀಸರು ರಾಜಶ್ರೀ ಅವರಿಗೆ ಅವಕಾಶವನ್ನು ನೀಡಲಿಲ್ಲ. ಸದ್ಯ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.
ಇದಕ್ಕೆ ಕಾರಣ, ಮಸೀದಿಗೆ ಸಂಬಂಧಿಸಿದಂತೆ ಕೋರ್ಟ್​ನಲ್ಲಿ ವಿಚಾರಣೆ ಬಾಕಿ ಇರುವ ಹಿನ್ನೆಲೆಯಲ್ಲಿ, ಶಿವಲಿಂಗಕ್ಕೆ ಪೂಜಾ ಕೈಂಕರ್ಯಗಳನ್ನು ಸದ್ಯಕ್ಕೆ ನಡೆಸದಂತೆ ಸೂಚಿಸಲಾಗಿದೆ. ಮಸೀದಿಯಲ್ಲಿ ಪ್ರಾರ್ಥನೆಗೆ ಅಡ್ಡಿಯುಂಟು ಮಾಡಬಾರದು ಎಂದು ಇದಾಗಲೇ ಸುಪ್ರೀಂಕೋರ್ಟ್​ ಹೇಳಿದ್ದು. ಪೂಜೆ ಸಲ್ಲಿಸಿದರೆ ಏನಾದರೂ ಗಲಾಟೆಯಾಗುವ ಸಾಧ್ಯತೆ ಇರುವ ಕಾರಣ ರಾಜಶ್ರೀ ಅವರನ್ನು ತಡೆಯಲಾಗಿದೆ ಎನ್ನಲಾಗಿದೆ.
ಪ್ರಯಾಗ್​ರಾಜ್​ ಜಂಕ್ಷನ್​ ಬಳಿ ಅವರನ್ನು ರೈಲಿನಿಂದ ಕೆಳಗಿಳಿಸಿ ಪೊಲೀಸ್​ ಅತಿಥಿ ಗೃಹಕ್ಕೆ ಕರೆದೊಯ್ಯಲಾಗಿದೆ, ಈ ಮೊದಲೇ ಅವರು ತಾವು ಇಲ್ಲಿಯ ಶಿವಲಿಂಗಕ್ಕೆ ಪೂಜೆ ಸಲ್ಲಿಸುವುದಾಗಿ ಘೋಷಿಸಿದ್ದರು. ಆಗಲೇ ಪೊಲೀಸ್​ ಪಡೆ ಎಚ್ಚೆತ್ತುಕೊಂಡಿದೆ.(ಏಜೆನ್ಸೀಸ್​)
ಜ್ಞಾನವಾಪಿ ಕೇಸ್​ನಲ್ಲಿ ಮುಸ್ಲಿಂ ಪರ ವಾದಿಸುತ್ತಿದ್ದ ವಕೀಲ ಯಾದವ್​ಗೆ​ ಹೃದಯಾಘಾತ: ಕೋರ್ಟ್​ಗೆ ಉತ್ತರಿಸುವ ಮುನ್ನವೇ ನಿಧನ
ಹಂಪಿಯ ಪಾರಂಪರಿಕ ತಾಣಕ್ಕೂ ಎದುರಾಯ್ತು ಜಲಕಂಟಕ! ಮುಳುಗಿಹೋದವು ಐತಿಹಾಸಿಕ ಸ್ಮಾರಕಗಳು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 2 =
Remember me
