ಸಿಂಗಪುರ:ಬಿಯರ್​ ಪ್ರಿಯರಿಗೆ ಖುಷಿಯ ಜೊತೆ ಶಾಕಿಂಗ್​ ಅನ್ನುವಂಥ ಸುದ್ದಿಯೊಂದು ಹೊರ ಬಂದಿದೆ. ಹೊಸ ಹೊಸ ಬ್ರ್ಯಾಂಡ್​ನ ಬಿಯರ್​ ಕುಡಿಯೋದು ಎಂದರೆ ಮದ್ಯಪ್ರಿಯರಿಗೆ ಅದೆಷ್ಟು ಖುಷಿ ಅಲ್ವಾ? ಮಾರುಕಟ್ಟೆಗೆ ಹೊಸ ಬ್ರ್ಯಾಂಡ್​ ಲಗ್ಗೆ ಇಟ್ಟಿದೆ ಅಂದ್ರೆ ಅದನ್ನೂ ಟ್ರೈ ಮಾಡಿ ನೋಡೋಣ ಎಂದುಕೊಳ್ಳುವವರೇ ಹೆಚ್ಚು.
ಅಂಥವರಿಗೆ ಖುಷಿಯ ವಿಷಯ ಏನಪ್ಪಾ ಅಂತಂದ್ರೆ, ಸಿಂಗಪುರದ ಕಂಪೆನಿಯೊಂದು ಹೊಸ ಬ್ರ್ಯಾಂಡ್​ ಬಿಯರ್​ ಬಿಡುಗಡೆ ಮಾಡಿದೆ. ಈ ಬ್ರ್ಯಾಂಡ್​ನ ಹೆಸರು ನ್ಯೂ ಬ್ರ್ಯೂ. ಸಿಂಗಪುರದಲ್ಲಿ ಇದು ಸಕತ್​ ಫೇಮಸ್​ ಆಗಿದ್ದು, ಮದ್ಯ ಪ್ರಿಯರು ಇದನ್ನು ಬಹಳ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದಾರಂತೆ. ಸಿಂಗಪುರದಿಂದ ಭಾರತಕ್ಕೂ ಇದು ಅತಿ ಶೀಘ್ರದಲ್ಲಿ ಬರಬಹುದು ಅನ್ನಿ. ಆಹಾ! ಈ ಹೊಸ ಬ್ರ್ಯಾಂಡ್​ ಸೇವಿಸೋ ಆಸೆಯಾಗಿದ್ರೆ ಒಮ್ಮೆ ಇದರ ಬಗ್ಗೆ ತಿಳಿದುಕೊಳ್ಳಿ.
ಅದೇನೆಂದರೆ, ಈ ಬಿಯರ್​ ಅನ್ನು ತಯಾರು ಮಾಡುವುದು ಮೂತ್ರ ಮತ್ತು ಕೊಳಚೆ ನೀರಿನಿಂದ ಎಂದಿದೆ ಕಂಪೆನಿ. ಮಾನವ ಮೂತ್ರದಿಂದ ಹಾಗೂ ಒಳ ಚರಂಡಿ ನೀರಿನಿಂದ ಇದನ್ನು ತಯಾರು ಮಾಡಲಾಗುತ್ತಿದೆಯಂತೆ. ಸಾಮಾನ್ಯ ಬಿಯರ್‌ನಂತೆ ಇರುವ ಇದು ಸಾಂಪ್ರಾಯಿಕ ರುಚಿಗಿಂತ ಬೇರೆನೇ ರುಚಿ ಕೊಡುವ ಕಾರಣ ಅಲ್ಪ ಸಮಯದಲ್ಲಿಯೇ ಹೆಚ್ಚು ಗ್ರಾಹಕರನ್ನು ಆಕರ್ಷಿಸಿದೆ ಎನ್ನುತ್ತಿದೆ ಕಂಪೆನಿ. ಜೇನುತುಪ್ಪದಂಥ ಟೇಸ್ಟ್​ ಇದಕ್ಕಿದೆ ಎಂದು ಕಂಪೆನಿ ಹೇಳಿಕೊಂಡಿದೆ.
ಅತ್ಯಾಧುನಿಕ ವಿಧಾನಗಳಿಂದ ಮೂತ್ರ ಮತ್ತು ಚರಂಡಿಯ ಕೊಳಚೆ ನೀರನ್ನು ಶುದ್ಧೀಕರಣ ಮಾಡಲಾಗುತ್ತದೆ. ಬಳಿಕ ಅದನ್ನು ಬಿಯರ್ ತಯಾರಿಕೆಗೆ ಬಳಸಲಾಗುತ್ತಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಸಿಂಗಪುರದ ನೀರು ಸರಬರಾಜ ಮಂಡಳಿಯು ಶುದ್ಧೀಕರಿಸಿ, ಸೋಸಿ, ಪೂರೈಕೆ ಮಾಡಿರುವ ಶುದ್ಧ ನೀರಿನಲ್ಲಿ ಇದನ್ನು ಉತ್ಪಾದಿಸಲಾಗುತ್ತಿದೆ. ಈ ಬಿಯರ್ ಉತ್ಪಾದನೆಗಾಗಿ ಪೂರೈಕೆ ಆಗುವ ಹೊಸ ನೀರನ್ನು ಕಟ್ಟುನಿಟ್ಟಾದ ಪರೀಕ್ಷಿಸಿ, ಹಲವು ಹಂತಗಳಲ್ಲಿ ಶೋಧಿಸಿ, ಕುಡಿಯುವುದಕ್ಕೆ ಸುರಕ್ಷಿತವಾಗಿದೆಯೇ ಎಂಬುದನ್ನು ಮೊದಲು ಖಾತ್ರಿಪಡಿಸಿಕೊಳ್ಳಲಾಗುತ್ತದೆ. ಇದು ಪರಿಸರ ಸ್ನೇಹಿಯಾಗಿದೆ ಎಂದು ಹೇಳಿದೆ ಕಂಪೆನಿ.
ಪ್ರಿಯಕರನ ಲೈಂಗಿಕ ಆಸೆ ಈಡೇರಿಸಲು ಮಗಳನ್ನೇ ಆತನ ಬಳಿ ಬಿಟ್ಟ ಪಾಪಿ ತಾಯಿ!
ಯುವಕರನ್ನು ಹಾದಿ ತಪ್ಪಿಸ್ತಿರೋ ಬಾಲಿವುಡ್‌ ನಟರ ವಿರುದ್ಧ ಕೇಸ್‌ ದಾಖಲು: ಬುದ್ಧಿ ಹೇಳಬೇಕಾದವರೇ ಕೆಟ್ಟದ್ದನ್ನು ಕಲಿಸಿದರೆ ಹೇಗೆ?
7 ಶತಕೋಟಿ ಒಡತಿ ನಟಿ ಐಶ್ವರ್ಯ ರೈ ಪಡೆದ ಮೊದಲ ಸಂಬಳ ಇಷ್ಟೇನಾ… ಮಾಡೆಲಿಂಗ್​ ಅಗ್ರಿಮೆಂಟ್​ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + ten =
Remember me
