ನವದೆಹಲಿ:ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಡಿಜಿಟಲ್​ ಪಾವತಿಯ ಸುರಕ್ಷತೆಯ ದೃಷ್ಟಿಯಿಂದ ನಾಳೆಯಿಂದ ಅಂದರೆ ಅಕ್ಟೋಬರ್​ 1ರಿಂದ ಕೆಲವೊಂದು ಹೊಸ ನಿಯಮಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಜಾರಿ ಮಾಡಿದೆ.
ಹೊಸ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದ್ದು, ಇದು ಒಂದನೇ ತಾರೀಖಿನಿಂದ ಜಾರಿಗೆ ಬರಲಿದೆ ಎಂದು ಆರ್​ಬಿಐ ಹೇಳಿದೆ. ಈ ಕಾರ್ಡ್​ಗಳಿಗೆ ಅನಗತ್ಯವಾಗಿ ಅಂತಾರಾಷ್ಟ್ರೀಯ ಸೌಲಭ್ಯಗಳನ್ನು ನೀಡದಂತೆ ಆರ್‌ಬಿಐ ಎಲ್ಲಾ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿತ್ತು. ಇವುಗಳನ್ನು ಬಳಸಿಕೊಂಡು ಹೆಚ್ಚುತ್ತಿರುವ ವಂಚನೆ ವಹಿವಾಟುಗಳನ್ನು ನಿಲ್ಲಿಸುವ ಉದ್ದೇಶವನ್ನು ಈ ಸೂಚನೆ ನೀಡಲಾಗಿತ್ತು.
ಇದನ್ನೂ ಓದಿ:ಅಕ್ಟೋಬರ್​ನಲ್ಲಿ 10 ದಿನಗಳು ಬ್ಯಾಂಕ್​ಗೆ ರಜೆ: ಇಲ್ಲಿದೆ ಮಾಹಿತಿ…
ಹೊಸ ಮಾರ್ಗಸೂಚಿ ಏನೇನು ಹೇಳುತ್ತದೆ?* ದೇಶದಲ್ಲಿ ಅಥವಾ ವಿದೇಶಗಳಲ್ಲಿ ಇದುವರೆಗೆ ಆನ್​ಲೈನ್​ ವ್ಯವಹಾರ ನಡೆಸಿದ ಎಲ್ಲಾ ಡೆಬಿಟ್​/ಕ್ರೆಡಿಟ್​ ಕಾರ್ಡ್​ಗಳ ಆನ್​ಲೈನ್​ ವ್ಯವಹಾರಗಳನ್ನು ಸ್ಥಗಿತಗೊಳಿಸುವಂತೆ ಆರ್​ಬಿಐ ಎಲ್ಲಾ ಬ್ಯಾಂಕ್​ಗಳಿಗೆ ಸೂಚನೆ ನೀಡಿದೆ.
* ಅಂತಾರಾಷ್ಟ್ರೀಯ ವಹಿವಾಟು, ಆನ್​ಲೈನ್​ ವಹಿವಾಟು ಬೇಕು ಎಂದು ಗ್ರಾಹಕರು ಹೇಳಿದರೆ ಮಾತ್ರ ಬ್ಯಾಂಕ್​ ಅಂಥ ಸೇವೆಗಳನ್ನು ಗ್ರಾಹಕರಿಗೆ ನೀಡಬೇಕು. ಎಷ್ಟೋ ಗ್ರಾಹಕರಿಗೆ ಈ ಸೇವೆಯ ಅಗತ್ಯವೇ ಇರುವುದಿಲ್ಲ. ಆದಾಗ್ಯೂ ಅವರ ಡೆಬಿಟ್​, ಕ್ರೆಡಿಟ್​ ಕಾರ್ಡ್​ನಲ್ಲಿ ಸೇವೆ ಒದಗಿಸುವುದರಿಂದ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಅಂಶವನ್ನು ಜಾರಿಗೆ ತರಲಾಗಿದೆ.
* ಡೆಬಿಟ್​ ಮತ್ತು ಕ್ರೆಡಿಟ್​ ಕಾರ್ಡ್​ಗೆ ಇಂತಿಷ್ಟೇ ಮೊತ್ತವನ್ನು ನಿಗದಿಪಡಿಸುವ ಅಧಿಕಾರವು ಇನ್ನು ಮುಂದೆ ಗ್ರಾಹಕರಿಗೆ ಇರಲಿದೆ. ಇದು ಆನ್​ಲೈನ್​ ವ್ಯವಹಾರಕ್ಕೆ ಸೀಮಿತವಾಗಿದೆ. ಉದಾಹರಣೆಗೆ ಯಾವುದೇ ಗ್ರಾಹಕರು ಒಂದು ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ಯಾವುದೇ ಸಂದರ್ಭದಲ್ಲಿ ಒಂದು ಬಾರಿಯ ಆನ್​ಲೈನ್​ ವ್ಯವಹಾರಕ್ಕೆ ಬಳಸುವುದಿಲ್ಲ ಎಂದಾದರೆ ಆ ಮೊತ್ತವನ್ನು ನಿಗದಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಎಟಿಎಂ, ಪಿಒಎಸ್, ಇ-ಕಾಮರ್ಸ್ ಅಥವಾ ಎನ್‌ಎಫ್‌ಸಿಯಲ್ಲಿ ಯಾವುದೇ ರೀತಿಯ ಆನ್​ಲೈನ್​ ಸೇವೆಯಲ್ಲಿಯೂ ನಿಗದಿತ ಮೊತ್ತವನ್ನು ಸ್ಪಷ್ಟಪಡಿಸಲು ಅವಕಾಶ ಕಲ್ಪಿಸಲಾಗಿದೆ.
* ಅಂತಾರಾಷ್ಟ್ರೀಯ ವಹಿವಾಟಿಗೆ ಸದ್ಯ ಡೆಬಿಟ್​ ಮತ್ತು ಕ್ರೆಡಿಟ್​ ಕಾರ್ಡ್​ಗಳಲ್ಲಿ ಅವಕಾಶವಿದೆ. ಒಂದು ವೇಳೆ ಯಾವುದೇ ಕಾರಣಕ್ಕೂ ಇದು ನಿಮಗೆ ಅಗತ್ಯವೇ ಇಲ್ಲ ಎಂದಾದರೆ ಅದನ್ನು ಸ್ಟಾಪ್​ ಮಾಡಿಸಲು ಇನ್ನುಮುಂದೆ ಅವಕಾಶ ಸಿಗಲಿದೆ. ಒಂದು ವೇಳೆ ಈ ಸೇವೆಯನ್ನು ಪುನರಾರಂಭಿಸಲು ಬಯಸುವುದಾದರೂ ಅದಕ್ಕೆ ಅವಕಾಶವಿದೆ.
ನಿಮ್ಮ ವ್ಯವಹಾರದ ಮೊತ್ತವನ್ನು ಮಿತಿಗೊಳಿಸಲು ನೀವೇನು ಮಾಡಬೇಕು? ಇಲ್ಲಿದೆ ವಿವರ:– ಮೊದಲನೆಯದಾಗಿ, ನೀವು ಮೊಬೈಲ್ ಅಥವಾ ನೆಟ್‌ಬ್ಯಾಂಕಿಂಗ್ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಲಾಗ್ ಇನ್ ಆಗಬೇಕು.– ಕಾರ್ಡ್‌ಗಳ ವಿಭಾಗದಲ್ಲಿ ಹೋಗಿ ‘ಕಾರ್ಡ್‌ಗಳನ್ನು ನಿರ್ವಹಿಸು’ (‘manage cards’)ವಿಭಾಗವನ್ನು ಆಯ್ಕೆಮಾಡಿ– ಇಲ್ಲಿ ನಿಮಗೆ ಎರಡು ಆಯ್ಕೆಗಳು ಇರುತ್ತವೆ : ದೇಶೀಯ ಮತ್ತು ಅಂತಾರಾಷ್ಟ್ರೀಯ 9domestic and international)– ನಿಮಗ್ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಿ.– ನೀವು ಯಾವುದೇ ನಿರ್ದಿಷ್ಟ ವಹಿವಾಟನ್ನು ಕ್ಲೋಸ್​ ಮಾಡಲು ಬಯಸಿದರೆ ಅದನ್ನು ಆಫ್ ಮಾಡಿ, ನೀವು ಪ್ರಾರಂಭಿಸಲು ಬಯಸಿದರೆ ಅದನ್ನು ಆನ್ ಮಾಡಿ.– ನೀವು ವ್ಯವಹಾರದ ಮಿತಿಯನ್ನು ಎಷ್ಟಕ್ಕೆ ಮಿತಿಗೊಳಿಸಲು ಬಯಸುತ್ತೀರೋ ಅಷ್ಟನ್ನು ಅಲ್ಲಿ ಉಲ್ಲೇಖಿಸಿ.
ಬಾಬ್ರಿ ಮಸೀದಿ ಕೇಸ್​- ಕೋರ್ಟ್​ನತ್ತ ಮುಖಂಡರು: ವಿನಾಯಿತಿ ಕೋರಿದ ಮೂವರು, ಆರೋಪ ಸಾಬೀತಾದರೆ ಶಿಕ್ಷೆ ಏನು?

ಇನ್ಮುಂದೆ ಈ ದೇಶದಲ್ಲಿ ಗೋಹತ್ಯೆ ಮಾಡುವಂತಿಲ್ಲ: ಜಾರಿಯಾಗಲಿದೆ ಹೊಸ ಕಾನೂನು

ಅಕ್ಟೋಬರ್​ನಲ್ಲಿ 10 ದಿನಗಳು ಬ್ಯಾಂಕ್​ಗೆ ರಜೆ: ಇಲ್ಲಿದೆ ಮಾಹಿತಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 5 =
Remember me
