ಲಖನೌ:ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿಯನ್ನು ಏನಾದರೂ ಮಾಡಿ ಮಣಿಸಲೇಬೇಕು ಎಂದು ಇತರ ಪಕ್ಷಗಳು ಪಣತೊಟ್ಟಿವೆ. ಈ ಹಿನ್ನೆಲೆಯಲ್ಲಿ ಚುನಾವಣಾ ಪೂರ್ವದಲ್ಲಿಯೇ ಭಾರಿ ಯೋಜನೆಯೊಂದು ಪ್ರತಿಪಕ್ಷಗಳು ರೂಪಿಸಿವೆ. ಈ ನಿಮಿತ್ತವಾಗಿ ಹೊಸ ಮೈತ್ರಿಕೂಟವನ್ನು ರಚಿಸಿಕೊಳ್ಳಲಾಗಿದ್ದು, 5 ವರ್ಷಗಳ ಅವಧಿಯಲ್ಲಿ ಐವರು ಮುಖ್ಯಮಂತ್ರಿ ಮತ್ತು 20 ಉಪ ಮುಖ್ಯಮಂತ್ರಿಗಳ ಸೂತ್ರವನ್ನು ಸಿದ್ಧಪಡಿಸಲಾಗಿದೆ.
ಈ ಕುರಿತು ಸುಹೇಲ್ ದೇವ್ ಭಾರತೀಯ ಸಮಾಜ ಪಾರ್ಟಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್ ಭರ್ ಮಾಹಿತಿ ನೀಡಿದ್ದಾರೆ. ಎಂಐಎಂ ಸೇರಿದಂತೆ ಒಟ್ಟು 10 ಪಕ್ಷಗಳು ಸೇರಿ ಮೈತ್ರಿಕೂಟ ರಚನೆ ಮಾಡಿಕೊಂಡಿದ್ದು, ಇದಕ್ಕೆ ಭಗಿದಾರಿ ಸಂಕಲ್ಪ ಮೋರ್ಚಾ ಎಂದು ಹೆಸರು ಇಡಲಾಗಿದೆ. ಇದರ ಉದ್ದೇಶ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ಐದು ಸಮುದಾಯಗಳಿಂದ ಅಂದರೆ ಕುಶ್ವಾಹ, ರಾಜ್ಭರ್, ಚೌಹಾಣ್, ಮುಸ್ಲಿಂ ಮತ್ತು ಪಟೇಲ್ ಸಮುದಾಯಗಳಿಂದ ಐವರು ಮುಖ್ಯಮಂತ್ರಿ ಆಗಲಿದ್ದಾರೆ. ಇದಾದ ಬಳಿಕ ಪ್ರತಿ ವರ್ಷ ನಾಲ್ಕು ಉಪ ಮುಖ್ಯಮಂತ್ರಿಗಳ ಸೂತ್ರ ಕೂಡ ಇದೆ ಎಂದಿದ್ದಾರೆ.
ಭಗಿದಾರಿ ಸಂಕಲ್ಪ ಮೋರ್ಚಾ ಸಣ್ಣ ಪಕ್ಷಗಳ ವೇದಿಕೆಯಾಗಿದ್ದು, ಇದರಲ್ಲಿ ಓಂ ಪ್ರಕಾಶ್ ರಾಜ್‌ಭರ್ ಅವರ ಸುಭಾಸ್ಪಿ ಮತ್ತು ಅಸದುದ್ದೀನ್ ಒವೈಸಿ ಅವರ ಎಐಐಎಂ, ಕೃಷ್ಣ ಪಟೇಲ್ ನೇತೃತ್ವದ ಅಪ್ನಾ ದಳ ಮತ್ತು ಮಾಜಿ ಸಚಿವ ಬಾಬು ಸಿಂಗ್ ಕುಶ್ವಾಹ ನೇತೃತ್ವದ ಜನ ಅಧಿಕಾರ ಮಂಚ್ ಸೇರಿವೆ. ಓಂಪ್ರಕಾಶ್ ರಾಜ್‌ಭರ್ ಭಗಿದಿ ಸಂಕಲ್ಪ ಮೋರ್ಚಾ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 403 ಸ್ಥಾನಗಳಲ್ಲೂ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಒಟ್ಟಾಗಿ ಸರ್ಕಾರ ರಚಿಸುವುದಾಗಿ ಹೇಳಿಕೊಂಡಿದೆ.
ರಾತ್ರೋರಾತ್ರಿ ಚಿಕ್ಕೋಡಿ ದೇವಿ ಕಣ್ಣುಬಿಟ್ಟಿದ್ದೇಕೆ? ಕೊನೆಗೂ ಬಯಲಾಯ್ತು ‘ಭಯಾನಕ’ ರಹಸ್ಯ

ಬಾಣಲೆಗೆ ಬಿದ್ದು ಚಿಕನ್‌ಸೂಪ್‌ ಜತೆ ಬೆಂದುಹೋದ ಪ್ರಸಿದ್ಧ ಬಾಣಸಿಗ- ಔತಣಕೂಟದಲ್ಲಿ ಭಾರಿ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 14 =
Remember me
