ನವದೆಹಲಿ:ನಮ್ಮ ಜೀವ ಹೋದ್ರೆ ನಿಮಗೇನ್ರಿ? ನಮಗೆ ಇಷ್ಟ ಇದ್ರೆ ಕಾರ್​ಬೆಲ್ಟ್​ ಧರಿಸ್ತೇವೆ, ಹೆಲ್ಮೆಟ್​ ಹಾಕ್ತೇವೆ, ಹಾಕದಿದ್ರೆ ಸಾಯ್ತೇವೆ, ಕೇಳೋಕೆ ನೀವ್ಯಾರು ಎಂದು ಸರ್ಕಾರಗಳನ್ನು ಪ್ರಶ್ನಿಸುವವರಿಗೇನೂ ಕೊರತೆಯಿಲ್ಲ. ಸಾರ್ವಜನಿಕರ ಹಿತಾಸಕ್ತಿಯಿಂದಾಗಿ, ಅವರ ಪ್ರಾಣಕ್ಕೆ ಅಪಾಯ ಆಗಬಾರದು ಎನ್ನುವ ಕಾರಣಕ್ಕೆ, ಇದಾಗಲೇ ಘಟಿಸಿಹೋಗಿರುವ ಕೆಲವು ಪ್ರಾಣಘಾತಕ ಘಟನೆಗಳ ಆಧಾರದ ಮೇಲೆ ಕೆಲವೊಂದು ನಿಯಮಗಳನ್ನು ಕಡ್ಡಾಯ ಮಾಡಿವೆ.
ನೀವು ಕೇಳಲಿ, ಬಿಡಲಿ ಸರ್ಕಾರ ನಿಯಮಗಳನ್ನು ಕಡ್ಡಾಯ ಮಾಡಿದ ಮೇಲೆ ಅದನ್ನು ಪಾಲಿಸದಲೇಬೇಕು, ಇಲ್ಲದಿದ್ದರೆ ದಂಡ ಕಟ್ಟಬೇಕು.
ಈಗ ಅಂಥದ್ದೇ ಒಂದು ಹೊಸ ನಿಯಮ ಬಂದಿದೆ. ಅದೇನೆಂದರೆ, ಬೈಕ್​ನಲ್ಲಿ ಸೈಡ್​ ಮಿರರ್​ ಇರದಿದ್ದರೆ ಭಾರಿ ಪ್ರಮಾಣದ ದಂಡ ವಿಧಿಸುವ ನಿಯಮವಿದು. ಅಷ್ಟೇ ಅಲ್ಲ… ಕಾರಿನಲ್ಲಿ ಮುಂದುಗಡೆ ಕುಳಿತವರು ಮಾತ್ರವಲ್ಲ, ಹಿಂದುಗಡೆ ಕುಳಿತವರು ಬೆಲ್ಟ್​ ಅನ್ನು ಕಡ್ಡಾಯವಾಗಿ ಧರಿಸಲೇಬೇಕು. ಇಲ್ಲದಿದ್ದರೆ ಒಂದು ಸಾವಿರ ರೂಪಾಯಿ ದಂಡ ಕಟ್ಟಬೇಕು!
ಅಬ್ಬಬ್ಬಾ! ಈಗಿರೋ ನಿಯಮಗಳು ಸಾಲದು ಎಂದು ಮತ್ತಷ್ಟು ನಿಯಮಗಳೇ ಎಂದು ಹುಬ್ಬೇರಿಸಬೇಡಿ. ಸದ್ಯ ಇಂಥದ್ದೊಂದು ಕಠಿಣ ಕಾನೂನು ಜಾರಿಯಾಗಿರುವುದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾತ್ರ. ನಿನ್ನೆಯಿಂದಲೇ ಅಂದರೆ ಶುಕ್ರವಾರದಿಂದ ಈ ನಿಯಮ ಜಾರಿಗೆ ತರಲಾಗಿದ್ದು, ಕಡ್ಡಾಯವಾಗಿ ವಾಹನ ಸವಾರರು ಇವುಗಳನ್ನು ಪಾಲಿಸಬೇಕಿದೆ.
ಕೆಲವರು ಶೋಕಿಗಾಗಿ, ಇನ್ನು ಕೆಲವರು ಕಿರಿಕಿರಿ ಎಂದು ಬೈಕ್​ಗಳಲ್ಲಿರುವ ಕನ್ನಡಿಯನ್ನು ಕಿತ್ತು ಹಾಕುತ್ತಿದ್ದಾರೆ. ಇದರಿಂದಲೂ ಅಪಘಾತಗಳು ಹೆಚ್ಚಾಗುತ್ತಿರುವ ಬಗ್ಗೆ ತಿಳಿದುಬಂದಿದೆ. ಅದೇ ರೀತಿ ಕಾರಿನ ಅಪಘಾತವಾದಾಗ ಸೀಟು ಬೆಲ್ಟ್​ ಇರದೇ ಇರುವ ಕಾರಣಕ್ಕೆ ಹಿಂಬದಿ ಸವಾರರ ಪ್ರಾಣಕ್ಕೆ ಅಪಾಯ ಬಂದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಇಂಥದ್ದೊಂದು ಕಾನೂನು ಜಾರಿಗೊಳಿಸಲಾಗಿದೆ ಎಂದು ದೆಹಲಿ ಸಂಚಾರ ಪೊಲೀಸರು ಹೇಳಿದ್ದಾರೆ.
ಅಷ್ಟಕ್ಕೂ ಇದೇನು ಹೊಸ ಕಾನೂನು ಅಲ್ಲ. ಮೋಟಾರು ವಾಹನ ಕಾಯ್ದೆ 1988 ಮತ್ತು ಕೇಂದ್ರೀಯ ಮೋಟಾರು ವಾಹನ ಕಾಯ್ದೆ 1989 ಎರಡರಲ್ಲೂ ಈ ನಿಯಮಗಳು ಮುಂಚಿನಿಂದಲೇ ಇವೆ. ಆದರೆ ಇವುಗಳನ್ನು ಅಷ್ಟು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ. ಸದ್ಯ ಇದು ದೆಹಲಿಯಲ್ಲಿ ಮಾತ್ರ ಜಾರಿಗೆ ಬಂದಿದ್ದು, ಶೀಘ್ರದಲ್ಲಿ ಬೇರೆಡೆ ಬಂದರೂ ಅಚ್ಚರಿಯಿಲ್ಲ.
ಮಂಡ್ಯದಲ್ಲಿ ಜೆಡಿಎಸ್​ಗೆ ಶಾಕ್​ ಕೊಟ್ಟ ಮಾಜಿ ಕಂದಾಯ ಅಧಿಕಾರಿ: ಬಿಜೆಪಿಗೆ ಸೇರ್ಪಡೆ

ಈರುಳ್ಳಿ ಉಪ್ಪಿನಕಾಯಿ ಹೇಗೆ ಮಾಡೋದು ಗೊತ್ತಾ? ಸಲ್ಮಾನ್​ ಖಾನ್​ ಇಲ್ಲಿ ತೋರಿಸಿಕೊಟ್ಟಿದ್ದಾರೆ ನೋಡಿ…

ಭಾರತದಲ್ಲಿ ಇಂದು ಕೋವಿಡ್​ ಲಸಿಕೆ ಮೊದಲು ಪಡೆದವರು ಯಾರು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ…

ಸಂಸಾರ ಮಾಡಲು ಗಂಡ ಒಪ್ಪದಿದ್ದರೆ ಏನಾದರೂ ಪರ್ಯಾಯ ಮಾರ್ಗಗಳಿವೆಯೆ?

ಹುಟ್ಟುಹಬ್ಬ ಮಾಡಿ ಅರೆಸ್ಟ್​ ಆದ್ರು! 20 ಸೆಕೆಂಡ್​ ವಿಡಿಯೋದಲ್ಲಿ ಅಂಥದ್ದೇನಿದೆ ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen − thirteen =
Remember me
