ಮುಂಬೈ:ಅನೇಕ ದಿನಗಳಿಂದ ನಡೆಯುತ್ತಿದ್ದ ಮಹಾರಾಷ್ಟ್ರದ ಬಿಕ್ಕಟ್ಟಿಗೆ ಕೊನೆಗೂ ಮುಕ್ತಿ ದೊರೆತಿದ್ದು ಇದಾಗಲೇ ಶಿವಸೇನೆಯ ರೆಬಲ್​ ಶಾಸಕ ಏಕನಾಥ ಶಿಂಧೆ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಹೊಸ ಸರ್ಕಾರದ ರಚನೆಗೆ ಎರಡನೇ ಹಂತದ ಸರ್ಕಸ್​ ಶುರುವಾಗಿದೆ. ಅದು ಸ್ಪೀಕರ್​ ಆಯ್ಕೆ ಕುರಿತು.
ಮಹಾರಾಷ್ಟ್ರ ವಿಧಾನಸಭೆ ಅಧಿವೇಶನ ಇಂದು (ಭಾನುವಾರ) ಹಾಗೂ ನಾಳೆ ನಡೆಯಲಿದೆ. ಇಂದು ಸ್ಪೀಕರ್‌ ಆಯ್ಕೆ ನಡೆದಿದ್ದು ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ ಅವರು ಸ್ಪೀಕರ್​ ಆಗಿ ನೇಮಕಗೊಂಡಿದ್ದಾರೆ. 288 ಸದಸ್ಯ ಬಲದ ವಿಧಾನಸಭೆಯಲ್ಲಿ  164 ಮತಗಳಿಂದ ನಾರ್ವೇಕರ್​ ಆಯ್ಕೆಯಾಗಿದ್ದಾರೆ. ನಾಳೆ ನೂತನ ಸರ್ಕಾರದ ವಿಶ್ವಾಸ ಮತಯಾಚನೆ ಪ್ರಕ್ರಿಯೆ ನಡೆಯಲಿದೆ. ಬಿಜೆಪಿ- ಶಿವಸೇನಾ ಮೈತ್ರಿಯ ಹೊಸ ಸರ್ಕಾರ ವಿಧಾನಸಭೆಯಲ್ಲಿ ತನ್ನ ಬಹುಮತ ಸಾಬೀತುಪಡಿಸಲಿದೆ.
ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಶಿವಸೇನಾ ಶಾಸಕ ಮತ್ತು ಉದ್ಧವ್ ಠಾಕ್ರೆ ಆಪ್ತ ರಾಜನ್ ಸಾಲ್ವಿ ಕಣದಲ್ಲಿದ್ದರು. ಇವರಿಗೆ 106 ಮತಗಳು ಬಂದಿವೆ. ನಾರ್ವೇಕರ್ ಮುಂಬೈನ ಕೊಲಬಾ ವಿಧಾನಸಭೆ ಕ್ಷೇತ್ರ ಶಾಸಕರಾಗಿದ್ದರೆ, ಸಾಲ್ವಿ ರತ್ನಗಿರಿ ಜಿಲ್ಲೆಯ ರಾಜಪುರ್ ಕ್ಷೇತ್ರದ ಶಾಸಕ. ಕಾಂಗ್ರೆಸ್‌ನ ನಾನಾ ಪಟೋಲೆ ಅವರು 2021ರ ಫೆಬ್ರವರಿಯಲ್ಲಿ ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿದ ನಂತರ ಹುದ್ದೆ ತ್ಯಜಿಸಿದ್ದರು. ಈ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಸ್ಪೀಕರ್ ಸ್ಥಾನ ಖಾಲಿ ಉಳಿದಿದೆ. ಡೆಪ್ಯುಟಿ ಸ್ಪೀಕರ್ ಆಗಿದ್ದ ಎನ್‌ಸಿಪಿಯ ನರಹರಿ ಜಿರ್ವಾಲ್ ಅವರೇ ಹಂಗಾಮಿ ಸ್ಪೀಕರ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.
ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲದ ಕುರಿತು ಬರುವುದಾದರೆ: ಶಿವಸೇನೆ 55, ಎನ್‌ಸಿಪಿ 53, ಕಾಂಗ್ರೆಸ್ 44, ಬಿಜೆಪಿ 106, ಬಹುಜನ ವಿಕಾಸ್ ಅಘಾಡಿ 3, ಸಮಾಜವಾದಿ ಪಕ್ಷ 2, ಎಐಎಂಐಎಂ 2, ಪ್ರಹಾರ್ ಜನಶಕ್ತಿ ಪಕ್ಷ 2, ಎಂಎನ್‌ಎಸ್ 1, ಸಿಪಿಐ (ಎಂ) 1, ಪಿಡಬ್ಲ್ಯೂಪಿ 1, ಸ್ವಾಭಿಮಾನಿ ಪಕ್ಷ 1, ರಾಷ್ಟ್ರೀಯ ಸಮಾಜ ಪಕ್ಷ 1, ಜನಸುರಾಜ್ಯ ಶಕ್ತಿ ಪಕ್ಷ 1, ಕ್ರಾಂತಿಕಾರಿ ಶೆಟ್ಕರಿ ಪಕ್ಷ 1 ಮತ್ತು ಸ್ವತಂತ್ರರು 13 ಮಂದಿ ಇದ್ದಾರೆ. ಕಳೆದ ತಿಂಗಳು ಶಿವಸೇನೆ ಶಾಸಕ ರಮೇಶ್ ಲಟ್ಕೆ ನಿಧನರಾದ ಕಾರಣ ಒಂದು ಸ್ಥಾನ ಖಾಲಿ ಇದೆ.
ಈ ನಡುವೆಯೇ ಇನ್ನೊಂದು ವಿಷಯ ಏನೆಂದರೆ, 16 ಶಾಸಕರ ಅನರ್ಹತೆಯ ಅರ್ಜಿಗಳು ವಿಚಾರಣೆಗೆ ಬಾಕಿ ಇದ್ದು, ಅವರನ್ನು ಅಮಾನತುಗೊಳಿಸಲು ಶಿವಸೇನಾ ಮುಖ್ಯ ವಿಪ್ ಸುನಿಲ್ ಪ್ರಭು ಮಾಡಿರುವ ಮನವಿಯ ಅರ್ಜಿಯನ್ನು ಸುಪ್ರೀಂಕೋರ್ಟ್ ಜುಲೈ 11ರಂದು ವಿಚಾರಣೆಗೆ ಎತ್ತಿಕೊಳ್ಳಲಿದೆ. ಅದೇ ದಿನ ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಶಿಂಧೆ ಬಣ ಸಲ್ಲಿಸಿರುವ ಅರ್ಜಿಗಳನ್ನು ಕೂಡ ನ್ಯಾಯಾಲಯ ವಿಚಾರಣೆ ನಡೆಸಲಿದೆ.
ಮಹಾರಾಷ್ಟ್ರದ ರೆಬೆಲ್​ ಶಾಸಕರ ಗುಂಪಿನಲ್ಲಿ ಇಬ್ಬರು ನಕಲಿ! ಹೋಟೆಲ್​ನಲ್ಲಿ ಸಿಕ್ಕಬಿದ್ದ ಜೋಡಿ…

ಆಟೋಡ್ರೈವರ್​ನಿಂದ ‘ಮಹಾ’ ಸಿಎಂ ಖುರ್ಚಿಯವರೆಗೆ… ಬಾಳಾಸಾಹೇಬರ ಶಿಷ್ಯನ ಕುತೂಹಲದ ಪಯಣವಿದು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − nineteen =
Remember me
