ಪ್ಯಾರಿಸ್:ಕರೊನಾದಿಂದ ಇನ್ನೂ ಸುಧಾರಿಸಿಕೊಳ್ಳದ ಬೆನ್ನಲ್ಲೇ ಒಮಿಕ್ರಾನ್‌ ವೈರಾಣು ಒಕ್ಕರಿಸಿದೆ. ಇದರಿಂದಾಗಿ ವಿಶ್ವಾದ್ಯಂತ ಭಾರಿ ಕೋಲಾಹಲವೇ ಎದ್ದಿದ್ದು, ಹಲವರಿಗೆ ಈ ವೈರಸ್‌ ಕಾಣಿಸಿಕೊಂಡಿದೆ. ಇದರ ಬಗ್ಗೆ ಇನ್ನಷ್ಟು ಅಧ್ಯಯನ ಮಾಡುವ ಮುಂಚೆಯೇ ಇದೀಗ ಮತ್ತೊಂದು ವೈರಸ್‌ ಪತ್ತೆಯಾಗಿದೆ. ಇದರ ಹೆಸರು ಐಎಚ್‌ಯು (IHU).
ಸದ್ಯ ಇದು ಫ್ರಾನ್ಸ್‌ನಲ್ಲಿ ಪತ್ತೆಯಾಗಿದೆ. ಕ್ಯಾಮರೂನ್‌ಗೆ ಪ್ರಯಾಣ ಮಾಡಿದ್ದ ವ್ಯಕ್ತಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಕಳೆದ ಡಿಸೆಂಬರ್ 10ರಂದು ಫ್ರಾನ್ಸ್‌ನಲ್ಲಿ ಇದು ಮೊದಲ ಬಾರಿಗೆ ಪತ್ತೆಯಾಗಿತ್ತು. ಆದರೆ, ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಕರೊನಾದ ರೂಪಾಂತರ ಎಂದು ವರ್ಗೀಕರಣ ಮಾಡಿಲ್ಲದ ಕಾರಣ ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡುವುದು ತಡವಾಗಿದೆ. ಆದರೆ ಇದನ್ನು ಪತ್ತೆಹಚ್ಚುವ ಸಮಯದಲ್ಲಿ ಫ್ರಾನ್ಸ್‌ನ ಮಾರ್ಸಿಲ್ಲೆಸ್‌ನಲ್ಲಿ 12 ಮಂದಿಯಲ್ಲಿ ಈ ಸೋಂಕು ಪತ್ತೆಯಾಗಿದೆ.
ಒಮಿಕ್ರಾನ್‌ಗಿಂತಲೂ ಈ ಹೊಸ ವೈರಸ್‌ ಭೀಕರ ಎಂದಿದ್ದಾರೆ ಸಂಶೋಧಕರು. ಇದು ಅತಿ ಬೇಗನೇ ಹರಡಬಲ್ಲುದು, ಒಮಿಕ್ರಾನ್‌ಗಿಂದಲೂ ವೇಗವಾಗಿ ಹರಡಬಲ್ಲ, ರೂಪಾಂತರದ ತಳಿ ಇದು ಎಂದು ಬಣ್ಣಿಸಲಾಗಿದೆ.
ಈ ಮೊದಲಾದರೆ ಯಾವುದೋ ದೇಶದಲ್ಲಿ ವೈರಸ್‌ ಕಾಣಿಸಿಕೊಂಡರೆ ನಾವೇನೂ ತಲೆ ಕೆಡಿಸಿಕೊಳ್ಳುವ ಅಗತ್ಯವಿರಲಿಲ್ಲ. ಆದರೆ ಪರಿಸ್ಥಿತಿ ಈಗ ಹಾಗಿಲ್ಲ. ಕರೊನಾ, ಒಮಿಕ್ರಾನ್‌ ಯಾವುದೋ ದೇಶದಲ್ಲಿ ಕಾಣಿಸಿಕೊಂಡದ್ದೇ, ಮಿಂಚಿನ ವೇಗದಲ್ಲಿ ಇಡೀ ವಿಶ್ವವನ್ನೇ ಆವರಿಸಿರುವ ಕಾರಣ ಇದೀಗ ಈ ಹೊಸ ವೈರಸ್‌ ತಳಿ ಇನ್ನಷ್ಟು ಆತಂಕ ಸೃಷ್ಟಿ ಮಾಡಿದೆ.
ರೈಲಿನಲ್ಲಿರೋ ಶೌಚಗೃಹಕ್ಕೆ ಹೋದ ತಾಯಿ-ಮಗು ನಾಪತ್ತೆ! ಸಿಕ್ಕಿದ್ದು ಹಳಿಯ ಮೇಲೆ ಹೆಣವಾಗಿ…

ಉ.ಪ್ರದೇಶದ ಮುಂದಿನ ಸಿಎಂ ಯಾರು? ಅಖಿಲೇಶ್‌ ಯಾದವ್‌ ಕನಸಲ್ಲೂ ಬಂದು ಭವಿಷ್ಯ ನುಡಿದ ಶ್ರೀಕೃಷ್ಣ ಪರಮಾತ್ಮ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two + eleven =
Remember me
