ಔರಂಗಾಬಾದ್ (ಬಿಹಾರ್‌):ಹೊಸ ವರ್ಷದ ಹೊಸ್ತಿನಲ್ಲಿ ಇರುವಾಗಲೇ ನಿನ್ನೆ ಮಧ್ಯರಾತ್ರಿ ಭೀಕರ ಅಪಘಾತವೊಂದು ನಡೆದಿದ್ದು, ಆರು ಮಂದಿ ಕೂಲಿ ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಔರಂಗಾಬಾದ್‌ನ ಹರಿಹರಗಂಜ್​​ನ ರಾಷ್ಟ್ರೀಯ ಹೆದ್ದಾರಿ 98ರಲ್ಲಿ ಈ ಅಪಘಾತ ಸಂಭವಿಸಿದೆ. ಒಬ್ರಾ ಪೊಲೀಸ್ ಠಾಣಾ ಪ್ರದೇಶದಲ್ಲಿ ಎರಡು ಪಿಕಪ್​ ವ್ಯಾನ್​​ಗಳಲ್ಲಿ ಕಾರ್ಮಿಕರು ಬರುತ್ತಿದ್ದರು. ಈ ಸಂದರ್ಭದಲ್ಲಿ ಹರಿಹರಗಂಜ್​​​ ಬಳಿ ನಿಯಂತ್ರಣ ತಪ್ಪಿದ ಟ್ರಕ್​ವೊಂದು ಪಿಕಪ್​ ವ್ಯಾನ್​ಗೆ​​ ಡಿಕ್ಕಿ ಹೊಡೆದು, ಪಲ್ಟಿಯಾಗಿದೆ. ಈ ಅವಘಡದಲ್ಲಿ ವ್ಯಾನ್‌ನಲ್ಲಿದ್ದ ಆರು ಮಂದಿ ಮೃತಪಟ್ಟಿದ್ದಾರೆ.
ಇವರೆಲ್ಲರೂ ಶಿಹುಡಿ ಗ್ರಾಮದಲ್ಲಿ ಭತ್ತದ ಕೊಯ್ಲು ಮುಗಿಸಿ ಮನೆಗೆ ವಾಪಸಾಗುತ್ತಿದ್ದ ಕಾರ್ಮಿಕರು ಎಂದು ಪೊಲೀಸರು ಹೇಳಿದ್ದಾರೆ. ಗಾಯಗೊಂಡವರನ್ನು ಮೇದಿನಿರೈ ವೈದ್ಯಕೀಯ ಕಾಲೇಜ್​​ ಮತ್ತು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಮೃತಪಟ್ಟವರನ್ನು ಕಲೋಕುಮಾರಿ, ರೀಟಾ, ಬಸಂತಿ, ನೀಲಂ, ಅಪರ್ಣಾ, ಕಮಲೇಶ್​ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ವೈದ್ಯಯಾಗುವ ಕನಸು ಕಂಡೆ… ಈಗ ಯಾರಿಗೂ ಮುಖ ತೋರಿಸಲಾರೆ ಎಂದು ನೇಣಿಗೆ ಶರಣಾದ ಎಂಬಿಬಿಎಸ್‌ ವಿದ್ಯಾರ್ಥಿನಿ

15 ವರ್ಷದ ಬಾಲಕನ ಜತೆ 22 ವರ್ಷದ ಯುವತಿ ಪರಾರಿ- ಫೇಸ್‌ಬುಕ್‌ನಲ್ಲಿ ಲವ್ವಾಗಿ, ದೇವಸ್ಥಾನದಲ್ಲಿ ಮದ್ವೆಯಾದವರು ಪೊಲೀಸರ ಅತಿಥಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 7 =
Remember me
