ಶ್ರೀನಗರ:ಆಸ್ಪತ್ರೆಯಲ್ಲಿ ವೈದ್ಯರು ಸತ್ತೇಹೋಗಿದ್ದಾರೆ ಎಂದು ಘೋಷಿಸುವ ವ್ಯಕ್ತಿಗಳು ನಂತರ ಜೀವಂತವಾಗುವ ಘಟನೆಗಳು ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತವೆ. ಅಂಥದ್ದೇ ಒಂದು ಘಟನೆ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಬನಿಹಾಲ್​ನಲ್ಲಿ ನಡೆದಿದೆ.
ನವಜಾತ ಶಿಶು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದು, ಅಂತ್ಯಸಂಸ್ಕಾರದ ಸಮಯದಲ್ಲಿ ಮಗು ಜೀವಂತವಾಗಿರುವ ಘಟನೆ ಇದು.
ಬಷರತ್ ಅಹಮ್ಮದ್​ ಅವರ ಮಗು ಹೀಗೆ ಪವಾಡದಿಂದ ಮರುಜನ್ಮ ಪಡೆದಿದೆ. ಅವರ ಪತ್ನಿಯ ಹೆರಿಗೆ ಉಪ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿತ್ತು. ಆದರೆ ಹುಟ್ಟುತ್ತಲೇ ಮಗು ಸತ್ತುಹೋಗಿದೆ ಎಂದು ವೈದ್ಯರು ಘೋಷಿಸಿದ್ದರು. ಇದರಿಂದ ಕುಟುಂಬಸ್ಥರು ಮಗುವನ್ನು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ದಿದ್ದಾರೆ.
ಸಮಾಧಿ ಮಾಡಲು ಎಲ್ಲಾ ರೀತಿಯ ತಯಾರಿ ನಡೆಯುತ್ತಿದ್ದಾಗ, ಕುಟುಂಬದ ಸದಸ್ಯರು ಮಗು ಅಲ್ಲಾಡುವುದನ್ನು ನೋಡಿದ್ದಾರೆ ಹಾಗೂ ಅದು ಕಣ್ಣುಬಿಡಲು ಶುರುಮಾಡಿದೆ. ಕೂಡಲೇ ಬೆಚ್ಚಿಬಿದ್ದ ಅವರು, ಮಗುವನ್ನು ಕೂಡಲೇ ಮಗುವನ್ನು ಮತ್ತೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಮಗು ಜೀವಂತ ಇರುವುದಾಗಿ ವೈದ್ಯರು ಹೇಳಿದ್ದಾರೆ.
ಇಷ್ಟಾಗುತ್ತಿದ್ದಂತೆಯೇ ವೈದ್ಯರ ನಿರ್ಲಕ್ಷ್ಯದ ವಿರುದ್ಧ ಕೊಪಗೊಂಡ ಮಗುವಿನ ಕುಟುಂಬಸ್ಥರು ಆಸ್ಪತ್ರೆ ಎದುರು ಭಾರಿ ಪ್ರತಿಭಟನೆ ನಡೆಸಿದರು. ಪೊಲೀಸರು ಮಧ್ಯೆ ಪ್ರವೇಶಿಸಿ ಅವರನ್ನು ಶಾಂತಗೊಳಿಸಿದ್ದಾರೆ. ಮಗುವನ್ನು ಸರಿಯಾಗಿ ಪರೀಕ್ಷೆ ಮಾಡದೇ ಹೀಗೆ ಮೃತಪಟ್ಟಿರು ವರದಿ ನೀಡಿದ ಕಾರಣಕ್ಕೆ ಇಬ್ಬರು ಆಸ್ಪತ್ರೆಯ ವೈದ್ಯರನ್ನು ಅಮಾನತುಗೊಳಿಸಲಾಗಿದೆ.
ಕಾರು ಚಾಲಕನ ಕೊಲೆ ಕೇಸ್​ಗೆ ಭಾರಿ ಟ್ವಿಸ್ಟ್: ನಾನೇ ಕೊಲೆಗಾರ ಎಂದು ಒಪ್ಪಿಕೊಂಡ ಶಾಸಕ!

ಕನ್ನಡದ ಖ್ಯಾತ ನಟಿಯೊಬ್ಬಳು ಮಂಚಕ್ಕೆ ಕರೆದಿದ್ಲು: ಶಾಕಿಂಗ್​ ಹೇಳಿಕೆ ನೀಡಿದ ನಿರ್ದೇಶಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 20 =
Remember me
