ತಂಜಾವೂರು (ತಮಿಳುನಾಡು):ಶೌಚಗೃಹದ ಫ್ಲಷ್‌ನಲ್ಲಿ ನವಜಾತ ಶಿಶುವಿನ ಮೃತದೇಹವೊಂದು ಸಿಕ್ಕಿರುವ ಘಟನೆ ತಮಿಳುನಾಡಿನ ತಂಜಾವೂರಿನ ಆಸ್ಪತ್ರೆಯೊಂದರಲ್ಲಿ ನಡೆದಿತ್ತು.
ಇಲ್ಲಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ (ಟಿಎಂಸಿಹೆಚ್) ಫ್ಲಷ್‌ ಸರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಎಂದು ದೂರು ಬಂದಿತ್ತು. ಇದನ್ನು ಆಧರಿಸಿ ರಿಪೇರಿ ಮಾಡಲು ಹೋಗಿದ್ದಾರೆ ಸಿಬ್ಬಂದಿ. ಆಗ ಫ್ಲಷ್‌ನ ಟ್ಯಾಂಕ್‌ ಬಾಗಿಲು ತೆರೆದಾಗ ಅವರಿಗೆ ಶಾಕ್‌ ಆಗಿದೆ. ಏಕೆಂದರೆ ಅದರಲ್ಲಿ ಆಗತಾನೇ ಹುಟ್ಟಿದ ಮಗುವಿನ ಶವವೊಂದು ಸಿಕ್ಕಿತ್ತು.
ತೀವ್ರ ನಿಗಾ ಘಟಕದ ಶೌಚಗೃಹದಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿಯಿಂದ ಈ ಕೃತ್ಯ ಎಸಗಿದಾಕೆ ಕೊನೆಗೂ ಸಿಕ್ಕಿಬಿದ್ದಿದ್ದಾಳೆ. ಮಗುವನ್ನು ಕೊಂದದ್ದು ಮತ್ಯಾರೂ ಅಲ್ಲ, ಖುದ್ದು ಹೆತ್ತಾಕೆಯೇ! 23 ವರ್ಷದ ಈಕೆ ಹೆಸರು ಪ್ರಿಯದರ್ಶಿನಿ. ಮಗು ಹುಟ್ಟುತ್ತಿದ್ದಂತೆಯೇ ಅದನ್ನು ಸಾಯಿಸಿದ್ದಾಳೆ. ಅದರ ಶವವನ್ನು ಎಲ್ಲಿ ಎಸೆಯಬೇಕು ಎಂದು ತಿಳಿಯದಾದಾಗ ಹೋಗಿ ಟಾಯ್ಲೆಟ್‌ನ ಫ್ಲಷ್‌ನಲ್ಲಿ ಹಾಕಿದ್ದಾಳೆ! ಸಿಸಿಟಿವಿಯಿಂದ ಅಸಲಿಯತ್ತು ಬದಲಾಗಿದೆ.
ಅಷ್ಟಕ್ಕೂ ಇಂಥದ್ದೊಂದು ನೀಚ ಕಾರ್ಯಕ್ಕೆ ಈಕೆ ಮುಂದಾಗಿದ್ದು ಏಕೆಂದರೆ ಇವಳು ಅವಿವಾಹಿತೆ. ಅಕ್ರಮ ಸಂಬಂಧ ಹೊಂದಿದ್ದ ಈಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ತನ್ನ ಅಕ್ರಮ ಸಂಬಂಧದ ಗುಟ್ಟು ಬಯಲಾಗುವ ಉದ್ದೇಶದಿಂದ ಈ ಕೃತ್ಯ ಮಾಡಿದ್ದಾಳೆ.ಆಕೆಯ ವಿರುದ್ಧ ಸೆಕ್ಷನ್​​ 318 ಸೇರಿದಂತೆ ಅನೇಕ ಕಲಂಗಳ ಅಡಿ ದೂರು ದಾಖಲು ಮಾಡಿಕೊಂಡಿದ್ದಾರೆ. ಈಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
VIDEO: ವರ ಹಾರ ಹಾಕಲು ಮುಂದಾಗುತ್ತಿದ್ದಂತೆಯೇ ಓಡಿಬಂದು ಸಿಂಧೂರವಿಟ್ಟ ಪ್ರೇಮಿ- ವೈರಲ್‌ ವಿಡಿಯೋಗೆ ದಂಗಾದ ಜನ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
