ಮುಂಬೈ:ಮನುಷ್ಯನ ಕ್ರೌರ್ಯ, ಕಾಮುಕತನಕ್ಕೆ ಕೊನೆಯೇ ಇಲ್ಲವೇನೋ, ಸಂಬಂಧಗಳಿಗೆ ಬೆಲೆಯೇ ಇಲ್ಲವೇನೋ ಎನ್ನುವಂಥ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ.
ಅಂಥದ್ದೇ ಒಂದು ಘಟನೆ ಮುಂಬೈನಲ್ಲಿ ನಡೆದಿದೆ. ತಂದೆಯೇ ತನ್ನ 9 ವರ್ಷದ ಮಗಳ ಮೇಲೆ ನಿರಂತರ ಅತ್ಯಾಚಾರ ಎಸಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಬಾಲಕಿಯ ಚೀರಾಟ ಕೇಳುತ್ತಿದ್ದ ನೆರೆಯವರು ಈ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ. ಪೊಲೀಸರು ಮನೆಗೆ ಬಂದಾಗ ಕೂಡ ಕುಡಿದ ಅಮಲಿನಲ್ಲಿದ್ದ ತಂದೆ ವಿವಸ್ತ್ರನಾಗಿದ್ದು ಬಾಲಕಿಯ ಮೇಲೆ ಹಲ್ಲೆ ನಡೆಸುತ್ತಿದ್ದ.
ಇದನ್ನೂ ಓದಿ:ಮದ್ವೆಗೆ ಹುಡುಗಿ ಸಿಕ್ಕಿಲ್ಲ, ಸಿಕ್ಕೋಳೂ ಒಪ್ಲಿಲ್ಲವೆಂದು ರಾಯಭಾರಿ ಕಚೇರಿಗೆ ಬಾಂಬ್​ ಹಾಕೋ ಪ್ಲ್ಯಾನ್​ ಮಾಡೋದಾ?
ಬಾಲಕಿಯನ್ನು ಪೊಲೀಸರು ರಕ್ಷಿಸಿದ್ದಾರೆ. ಆಕೆಯನ್ನು ಪ್ರಶ್ನಿಸಿದಾಗ ತನ್ನ ಅಪ್ಪ ಕುಡಿದುಬಂದು ಹೊಡೆಯುತ್ತಾನೆ, ಅತ್ಯಾಚಾರ ಮಾಡುತ್ತಾನೆ ಎಂದು ಬಾಲಕಿ ತನಗಾಗುತ್ತಿರುವ ಅನ್ಯಾಯಗಳನ್ನು ಪೊಲೀಸರ ಎದುರು ಬಿಚ್ಚಿಟ್ಟಿದ್ದಾಳೆ.
ವಿಕೃತ ತಂದೆಯನ್ನು ಪೊಲೀಸರು ಬಂಧಿಸಿ ಕೇಸು ದಾಖಲು ಮಾಡಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈತ ತನ್ನ ಮಗಳ ಮೇಲೆ ಮಾತ್ರವೇ ಅಥವಾ ಇತರ ಹೆಣ್ಣು ಮಕ್ಕಳ ಮೇಲೆಯೂ ಇದೇ ರೀತಿ ಕೃತ್ಯ ಎಸಗಿದ್ದಾನೆಯೇ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.
ಕಾಂಗ್ರೆಸ್‌ ಮುಖಂಡನ ಪತ್ನಿ ಜತೆ ಇನ್ನೋರ್ವ ಕಾಂಗ್ರೆಸ್‌ ಮುಖಂಡ ಪರಾರಿ! ಬಯಲಾಯ್ತು ಸತ್ಯ…

42 ಲೀಟರ್​ ಎದೆಹಾಲು ನೀಡಿ ‘ಮಹಾತಾಯಿ’ ಎನಿಸಿಕೊಂಡ ನಿರ್ಮಾಪಕಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 5 =
Remember me
