ಒಡಿಶಾ:ಸ್ವದೇಶಿ ನಿರ್ಮಿತ ದೂರಗಾಮಿ ‘ನಿರ್ಭಯ್‌’ ಸಬ್‌ಸಾನಿಕ್‌ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಒಡಿಶಾ ಕಡಲ ತೀರದಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ನಡೆಸಿತ್ತು. ಏಳನೇ ಬಾರಿ ಯಶಸ್ವಿ ಪ್ರಯೋಗದ ನಂತರ ಮುಂದಿನ ತಿಂಗಳು ಇದರ ಮುಹೂರ್ತ ಫಿಕ್ಸ್​ ಮಾಡಲಾಗಿದ್ದು, ಚೀನಿ ಸೈನಿಕರಿಗೆ ಎದೆಯನ್ನು ನಡುಗಿಸಲು ಸನ್ನದ್ಧವಾಗಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಡಿಫೆನ್ಸ್​ ಅಕ್ವಿಸಿಷನ್​ ಕೌನ್ಸೆಲ್​ ಇದಕ್ಕೆ ಅನುಮೋದನೆ ನೀಡಿದ್ದು, ಎಲ್ಲಾ ಪ್ರಕ್ರಿಯೆಗಳೂ ಸಂಪೂರ್ಣಗೊಂಡಿವೆ.ಆದರೆ ಈ ನಡುವೆಯೇ, ಕೆಲವು ಕ್ಷಿಪಣಿಗಳನ್ನು ಭಾರತ ಗಡಿನಿಯಂತ್ರಣ ರೇಖೆಯ ಬಳಿ ಕಳುಹಿಸಿದೆ. ಟಿಬೆಟ್ ಹಾಗೂ ಕ್ಸಿನ್ ಝಿಯಾಂಗ್ ಪ್ರದೇಶದಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿಯ ವೆಸ್ಟರ್ನ್ ಥಿಯೇಟರ್ ಕಮಾಂಡರ್ ಸುಮಾರು 2 ಸಾವಿರ ಕಿಲೋಮೀಟರ್ ದೂರ ಸಾಗಿ ಶತ್ರು ಪಾಳಯದ ಗುರಿಯನ್ನು ಭೇದಿಸಬಲ್ಲ ಕ್ಷಿಪಣಿಗಳನ್ನು ನಿಯೋಜಿಸಿದ್ದು ಇದಕ್ಕೆ ಪ್ರತಿಯಾಗಿ ಭಾರತ ಸಹ ಕ್ಷಿಪಣಿಗಳನ್ನು ನಿಯೋಜಿಸಿದೆ.
500 ಕಿ.ಮೀ. ವ್ಯಾಪ್ತಿಯ ಬ್ರಹ್ಮೋಸ್ ಕ್ರೂಯಿಸ್ ಕ್ಷಿಪಣಿ, 800 ಕಿ.ಮೀ. ಸಾಮರ್ಥ್ಯದ ನಿರ್ಭಯ್ ಕ್ರೂಯಿಸ್ ಕ್ಷಿಪಣಿ, ಭೂಮಿಯಿಂದ ಆಗಸಕ್ಕೆ ನೆಗೆಯುವ ಎಸ್​ಎಎಂ-ಸ್ಯಾಮ್ ಆಕಾಶ್ ಕ್ಷಿಪಣಿಗಳು ಚೀನಾದ ಕ್ಷಿಪಣಿಗಳನ್ನು ಎದುರಿಸುವ ಶಕ್ತಿ ಹೊಂದಿರುವ ಭಾರತದ ಪ್ರಮುಖ ಕ್ಷಿಪಣಿಗಳಾಗಿವೆ. ಆಕಾಶ್ ಕ್ಷಿಪಣಿ 40 ಕಿಮೀ ದೂರದಿಂದಲೇ ಆಗಸದಲ್ಲಿ ಶತ್ರುಗಳ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ:ದುರ್ಗಾವತಾರಕ್ಕೆ ಮುಸ್ಲಿಮರಿಂದ ಬೆದರಿಕೆ: ಲಂಡನ್​ನಲ್ಲಿ ಭದ್ರತೆ ಕೇಳಿದ ಸಂಸದೆ ನುಸ್ರತ್
ಇದೀಗ 1,000 ಕಿ.ಮೀ ಸ್ಟ್ರೈಕ್ ರೇಂಜ್ ಹೊಂದಿರುವ ಸಬ್ ಸಾನಿಕ್ ಕ್ಷಿಪಣಿ ನಿರ್ಭಯ್ ಗಡಿ ಭಾಗದಲ್ಲಿ ಹೋಗಲು ತಯಾರಿ ನಡೆಸಿದೆ. ಕಳೆದ ಏಪ್ರಿಲ್​ನಲ್ಲಿ ಇದರ ಯಶಸ್ವಿಯಾಗಿ ಪ್ರಯೋಗ ಮಾಡಲಾಗಿತ್ತು. ಇದೀಗ ಅಂತಿಮ ಘಟಕ್ಕೆ ಬಂದಿದ್ದು, ಮುಂದಿನ ತಿಂಗಳು ಇದನ್ನು ನಿಯೋಜನೆಗೊಳಿಸಲು ತಯಾರಿ ನಡೆದಿದೆ.ಬೆಂಗಳೂರು ಮೂಲದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಲ್ಯಾಬ್​ನಲ್ಲಿ ಇದನ್ನು ತಯಾರಿಸಲಾಗಿದ್ದು ಎಲ್ಲಾ ರೀತಿಯ ವಾತಾವರಣಗಳಲ್ಲಿ ಇದನ್ನು ಪ್ರಯೋಗಿಸಬಹುದಾಗಿದೆ.
1000ಕಿ.ಮೀ. ಗರಿಷ್ಠ ಗುರಿ ತಲುಪುವ ಸಾಮರ್ಥ್ಯ‌ ಹೊಂದಿರುವ 300 ಕೆ.ಜಿ.ಯಷ್ಟು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ‌ವಿರುವ ಕ್ಷಿಪಣಿಯನ್ನು ಕಳೆದ ಬಾರಿ ಉಡಾವಣೆ ಮಾಡಿದ್ದ ಸಂದರ್ಭದಲ್ಲಿ 42 ನಿಮಿಷ 23 ಸೆಕೆಂಡುಗಳಲ್ಲಿ ನಿಗದಿತ ಗುರಿ ತಲುಪಿ ನಂತರ ಸಮುದ್ರದಲ್ಲಿ ಉರಿದುಬಿತ್ತು.ಕಾರ್ಯಾಚರಣೆ ವೇಳೆ ನಿಯಂತ್ರಣ ಕೇಂದ್ರದಲ್ಲಿ ಅಳವಡಿಸಿದ್ದ ರೇಡಾರ್‌ಗಳ ಮೂಲಕ ಅದರ ಚಲನೆಯ ಗತಿ ಮತ್ತಿತರ ಪರಿಭ್ರಮಣ ವ್ಯವಸ್ಥೆ ಮೇಲೆ ನಿಗಾ ಇರಿಸಲಾಗಿತ್ತು.
ಚೀನಾದ ಅಸ್ತ್ರಗಳು:ಬಿಕ್ಕಟ್ಟು ಆರಂಭ ವಾದ ನಂತರ, ಚೀನಾದ ಪಿಎಲ್​ಎಯ ದಕ್ಷಿಣ ಕಮಾಂಡ್, ಟಿಬೆಟ್ ಮತ್ತು ಕ್ಸಿನ್ಸಿಯಾಂಗ್​ನಲ್ಲಿ 2000 ಕಿಲೋ ಮೀಟರ್ ದೂರದವರೆಗೆ ದಾಳಿ ಮಾಡಬಲ್ಲ ಶಸ್ತ್ರಗಳು ಮತ್ತು ದೂರ ವ್ಯಾಪ್ತಿಯ ಸ್ಯಾಮ್ಳನ್ನು ನಿಯೋಜಿ ಸಿದೆ. ಚೀನಾ ಆಕ್ರಮಿತ ಅಕ್ಸಾಯ್ಚಿನ್ ಪ್ರದೇಶ ಮಾತ್ರವಲ್ಲದೆ 3,488 ಕಿ.ಮೀ. ಉದ್ದದ ವಾಸ್ತವ ಗಡಿ ರೇಖೆಗುಂಟ (ಎಲ್​ಎಸಿ) ಇರುವ ಕಶ್​ಗರ್, ಹೋಟಾನ್, ಲ್ಹಾಸಾ ಮತ್ತು ನ್ಯಿಂಗ್ಚಿ ಪ್ರದೇಶಗಳಲ್ಲಿ ಕೂಡ ಪಿಎಲ್​ಎ ಕ್ಷಿಪಣಿಗಳನ್ನು ನೆಲೆಗೊಳಿಸಿದೆ.
ಹತ್ರಾಸ್​ ಗ್ಯಾಂಗ್​ರೇಪ್​ ಪ್ರಕರಣ: ಯೋಗಿ ಸರ್ಕಾರಕ್ಕೆ ಮಾನವ ಹಕ್ಕುಗಳ ಆಯೋಗದಿಂದ ನೋಟಿಸ್​

ರಾಮಮಂದಿರಕ್ಕೆ ಶುಭಕೋರಿದ್ದಕ್ಕೆ ಅತ್ಯಾಚಾರದ ಬೆದರಿಕೆ! ಕ್ರಿಕೆಟಿಗನ ಪತ್ನಿಗೆ ಭದ್ರತೆ ನೀಡಿ ಎಂದ ಹೈಕೋರ್ಟ್​

ಕೆಂಬ್ರಿಡ್ಜ್ ವಿಶ್ವವಿದ್ಯಾನಿಲಯಕ್ಕೆ ಮೊದಲ ಭಾರತೀಯ ಮಹಿಳೆ ನೇಮಕ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 + one =
Remember me
