ಪಟ್ನಾ:ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ಪುನಃ ನಿತೀಶ್​ಕುಮಾರ್ ಅವರನ್ನು ಆಯ್ಕೆ ಮಾಡುವ ಕುರಿತಂತೆ ಎನ್​ಡಿಎ ಸಭೆಯಲ್ಲಿ ನಿರ್ಧಾರ ಕೈಗೊಂಡ ಬೆನ್ನಲ್ಲೇ ಇದು ಅಸಾಧ್ಯ ಎಂದು ಆರ್​ಜೆಡಿ ನಾಯಕ ಮನೋಜ್​ ಝಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಹಾರದಲ್ಲಿ ಕೇವಲ 40 ಸ್ಥಾನಗಳನ್ನು ಗಳಿಸಿರುವವರು ಮುಖ್ಯಮಂತ್ರಿ ಆಗುವುದು ಹೇಗೆ ಸಾಧ್ಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಹಾರ ಅವರು ಗಳಿಸಿರುವುದು ಕೇವಲ 40 ಸ್ಥಾನ. ಹೀಗಿರುವಾಗಿ ಅವರು ಮುಖ್ಯಮಂತ್ರಿ ಆಗಲು ಸಾಧ್ಯವೇ ಇಲ್ಲ. ಇದು ಜನಾದೇಶದ ವಿರುದ್ಧವಾಗಿದೆ ಎಂದು ಝಾ ಕಿಡಿ ಕಾರಿದ್ದಾರೆ.
ಯಾರು ಮುಖ್ಯಮಂತ್ರಿ ಆಗಬೇಕು ಅನ್ನುವುದನ್ನು ಜನರು ನಿರ್ಧರಿಸಬೇಕಿದೆ. ಇದಕ್ಕೆ ಇನ್ನೂ ಸಮಯ ಬೇಕು. ಒಂದು ವಾರ, ಹತ್ತು ದಿನ ಅಥವಾ ಒಂದು ತಿಂಗಳು ಬೇಕಾಗಬಹುದು. ಅಷ್ಟರ ಒಳಗೇ ಇಂಥ ನಿರ್ಧಾರ ತೆಗೆದುಕೊಂಡಿರುವುದು ಉಚಿವಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ನಿತೀಶ್​ಕುಮಾರ್​ಗೆ ಮತ್ತೆ ಒಲಿದ ಬಿಹಾರ ಸಿಎಂ ಗಾದಿ‘2017ರಲ್ಲಿ ಮಹಾಘಟ್​ಬಂಧನದಿಂದ ಹೊರಹೋಗಿ ಎನ್‌ಡಿಎ ಜತೆ ಸೇರುವ ಮೂಲಕ ನಿತೀಶ್​ ಕುಮಾರ್​ ಅವರು ಜನಾದೇಶವನ್ನು ಧಿಕ್ಕರಿಸಿದ್ದಾರೆ. ಇದೀಗ ಬಿಹಾರದ ಜನರು ಎಚ್ಚೆತ್ತುಕೊಂಡಿದ್ದಾರೆ. ಅನ್ಯಾಯವನ್ನು ಸಹಿಸುವುದಿಲ್ಲ. ಕೇವಲ 40 ಸೀಟು ಹೊಂದಿರುವವರು ಸಿಎಂ ಆಗಲು ಸಾಧ್ಯವಿಲ್ಲ ಎಂದಿದ್ದಾರೆ.
ನಿತೀಶ್​ಕುಮಾರ್ ಇದೀಗ ಬಿಜೆಪಿಯ ನಿಯಂತ್ರಣದಲ್ಲಿದ್ದಾರೆ. ಅದಕ್ಕೆ ಸ್ಕ್ರಿಪ್ಟ್ ಸಿದ್ಧವಾಗಿದೆ. ನಿತೀಶ್‌ ಅವರಿಗೆ ಬೇರೆ ದಾರಿ ಇಲ್ಲ’ ಎಂದು ಲೇವಡಿ ಮಾಡಿದ್ದಾರೆ.
ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಜನತಾ ದಳ (43) ಹಾಗೂ ಬಿಜೆಪಿ (74) ನೇತೃತ್ವದ ಎನ್‌ಡಿಎ ಒಟ್ಟು 125 ಕ್ಷೇತ್ರದಲ್ಲಿ ಜಯ ಸಾಧಿಸಿದೆ. ಆರ್‌ಜೆಡಿ 75 ಸ್ಥಾನಗಳಲ್ಲಿ ಗೆದ್ದಿದ್ದು, ಬಿಜೆಪಿ 74 ಕಡೆ ವಿಜಯ ಸಾಧಿಸಿದೆ. ಆರ್‌ಜೆಡಿ ನೇತೃತ್ವದ ಮಹಾಘಟಬಂಧನ 110 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಆದರೆ, 75 ಸ್ಥಾನಗಳಲ್ಲಿ ಗೆಲುವು ಪಡೆಯವ ಮೂಲಕ ಆರ್‌ಜೆಡಿಯು ಏಕೈಕ ಅತಿ ದೊಡ್ಡ ಪಕ್ಷವಾಗಿದೆ.
ಪ್ಲೀಸ್​​ ಬಟ್ಟೆ ಕೊಡಿಸಿ… ಸ್ವೀಟ್​ ಆದ್ರೂ ತರ್ಸಿಯಪ್ಪ… ಹೋಗ್ಲಿ ಬಿಡಿ… ಈ ಗ್ರೀಟಿಂಗ್ಸ್​ ಆದ್ರೂ ತಗೋಳಿ!

ಕರೊನಾಕ್ಕೆ ಬಲಿಯಾದ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಟ ಸೌಮಿತ್ರ ಚಟರ್ಜಿ

ಐದು ಸಲ ಶಾಸಕನಾದ್ರೂ ಎಂಥ ಬಡತನ, ಎಷ್ಟು ಸರಳತನ ಎಂದವರಿಗೆ ಕಾದಿತ್ತು ಶಾಕ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 − 4 =
Remember me
