ಪಟ್ನಾ:ಎನ್‌ಡಿಎ ಜತೆಗಿನ ಮೈತ್ರಿಯನ್ನು ತೊರೆದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಿತೀಶ್​ಕುಮಾರ್​ ಅವರೇ ಪುನಃ ಮುಖ್ಯಮಂತ್ರಿಯಾಗಿ ಇಂದು ಸಂಜೆ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮೂಲಕ 71 ವರ್ಷದ ನಿತೀಶ್​ ಕುಮಾರ್​, ಎಂಟನೇ ಬಾರಿಗೆ ಸಿಎಂ ಹುದ್ದೆ ಏರುವ ಮೂಲಕ ದಾಖಲೆ ಬರೆಯದಿದ್ದಾರೆ.
ಉಪಮುಖ್ಯಮಂತ್ರಿಯಾಗಿ ತೇಜಸ್ವಿ ಯಾದವ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆರ್‌ಜೆಡಿ, ಕಾಂಗ್ರೆಸ್‌ ಸೇರಿ ಇತರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚನೆಯಾಗುತ್ತಿದೆ. ಇವರಿಬ್ಬರ ಜತೆಗೆ 3 – 5 ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮಧ್ಯಾಹ್ನ 2 ಗಂಟೆಗೆ ಪಟ್ನಾದ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ರಾಜ್ಯಪಾಲ ಫಾಗು ಚೌಹಾಣ್‌ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿಪಿಐಎಂಎಲ್‌ (ಎಲ್‌), ಸಿಪಿಐ ಹಾಗೂ ಸಿಪಿಐ(ಎಂ) ಮಹಾಘಟಬಂಧನ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡುವುದಾಗಿ ಹೇಳಿವೆ.
ನಿತೀಶ್​ ಕುಮಾರ್​ ರಾಜಕೀಯ ಹಿನ್ನೆಲೆ:ಇಂದು ಮುಖ್ಯಮಂತ್ರಿಯಾಗಿ ನಿತೀಶ್​ ಕುಮಾರ್​ ಪ್ರಮಾಣ ವಚನ ಸ್ವೀಕರಿಸಿದರೆ ಅವರು 8ನೇ ಬಾರಿಗೆ ಈ ಸ್ಥಾನ ಅಲಂಕರಿಸುವುದರೊಂದಿಗೆ ದಾಖಲೆ ಬರೆಯಲಿದ್ದಾರೆ. 2000ನೇ ಸಾಲಿನಲ್ಲಿ ಎನ್‌ಡಿಎ ನೇತೃತ್ವದಲ್ಲಿ ನಿತೀಶ್​ ಕುಮಾರ್​ ಪ್ರಥಮವಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ ಈ ಸರ್ಕಾರ ಇದ್ದುದು ಒಂದು ವಾರ ಮಾತ್ರ!
2005ರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸಿದ ನಂತರ ನಿತೀಶ್​ಕುಮಾರ್​ ಮತ್ತೆ ಮುಖ್ಯಮಂತ್ರಿಯಾದರು. 2010ರಲ್ಲಿಯೂ ಎನ್‌ಡಿಎ ಭರ್ಜರಿ ಜಯಸಾಧಿಸಿ ಪುನಃ ನಿತೀಶ್​ ಕುಮಾರ್​ 3ನೇ ಬಾರಿ ಸಿಎಂ ಆದರು.
2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಜೆಡಿಯು ಪರಾಭವಗೊಂಡಿತು. ಈ ಸೋಲಿನ ಹೊಣೆಯನ್ನು ಹೊತ್ತುಕೊಂಡ ನಿತೀಶ್​ಕುಮಾರ್​ ರಾಜೀನಾಮೆ ನೀಡಿದರು. ಆದರೆ 2015ರಲ್ಲಿ ಆರ್‌ಜೆಡಿ ಹಾಗೂ ಕಾಂಗ್ರೆಸ್‌ ಬೆಂಬಲದ ಮಹಾಘಟಬಂಧನದಲ್ಲಿ 4ನೇ ಬಾರಿ ಮುಖ್ಯಮಂತ್ರಿ ಹುದ್ದೆ ಏರಿದರು.
2017ರಲ್ಲಿ ಮಹಾಘಟಬಂಧನ ಸರ್ಕಾರಕ್ಕೆ ರಾಜೀನಾಮೆ ನೀಡಿ ಮರುದಿನವೇ ಬಿಜೆಪಿ ಬೆಂಬಲದೊಂದಿಗೆ ಮತ್ತೆ ಸಿಎಂ ಆದರು. 2020ರ ನವೆಂಬರ್​ನಲ್ಲಿ ನಡೆದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಪುನಃ ಈ ಹುದ್ದೆ ಏರಿದರು. ಆದರೆ ಈಗ ಮತ್ತೆ ಮುನಿಸುಕೊಂಡು ರಾಜೀನಾಮೆ ನೀಡಿದ್ದಾರೆ. 8ನೇ ಬಾರಿಗೆ ಸಿಎಂ ಆಗಲು ಸನ್ನದ್ಧರಾಗಿದ್ದಾರೆ.(ಏಜೆನ್ಸೀಸ್​)
ದೈಹಿಕ ಸಂಪರ್ಕ ಬೆಳೆಸಿ, ಧರ್ಮ ಬೇರೆ-ಮದ್ವೆ ಬೇಡ ಎಂದ ಯುವಕ ಪೀಸ್​ ಪೀಸ್​: ಮೃತದೇಹ ಸೂಟ್​ಕೇಸ್​ನಲ್ಲಿ!

ತನ್ನದೇ ಮದ್ವೆಗೆ ಮದುಮಗಳು ಹೋಗಿದ್ದೇ ತಪ್ಪಾಗೋಯ್ತು! ಕೆಲ ಮುಸ್ಲಿಂ ಮುಖಂಡರ ಕಿಡಿ- ಕ್ಷಮೆಗೆ ಆಗ್ರಹ

ಕಡಿಮೆ ದರದ ಚೀನಾ ಫೋನ್​ಗಳಿಗೂ ಬಂತು ಕುತ್ತು? ಯಾವೆಲ್ಲಾ ಕಂಪೆನಿಗಳ ಮೇಲೆ ಪ್ರಭಾವ ಬೀರಬಹುದು ನೋಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
