ನವದೆಹಲಿ:ಹಲವು ಭಕ್ತರ ಬಾಯಲ್ಲಿ ದೇವಮಾನವನೆಂದೇ ಪ್ರಖ್ಯಾತವಾಗಿರುವ ನಿತ್ಯಾನಂದ ಸ್ವಾಮಿ ತನ್ನದೇ ಒಂದು ಕೈಲಾಸ ನಿರ್ಮಾಣ ಮಾಡಿರುವ ವಿಷಯ ಬಹುತೇಕರಿಗೆ ತಿಳಿದದ್ದೇ. ಲೈಂಗಿಕ ದೌರ್ಜನ್ಯ ಸೇರಿದಂತೆ ಇವರ ವಿರುದ್ಧ ಕೆಲ ಕೇಸ್‌ಗಳು ವಿವಿಧ ಕೋರ್ಟ್‌ಗಳಲ್ಲಿ ನಡೆಯುತ್ತಿರುವ ಮಧ್ಯೆಯೇ ಯಾರ ಕಣ್ಣಿಗೂ ಕಾಣಿಸದೇ ನಿತ್ಯಾನಂದ ಕೆಲ ವರ್ಷ ತೆರೆಮರೆಗೆ ಸರಿದು ನಂತರ ತಮ್ಮದೇ ಆಗಿರುವ ಪ್ರತ್ಯೇಕ ದೇಶ ನಿರ್ಮಿಸಿ ಎಲ್ಲರ ಹುಬ್ಬೇರಿಸಿದ್ದಾರೆ.
2019ರಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದ ನಿತ್ಯಾನಂದ ಈಕ್ವೆಡಾರ್​ನಲ್ಲಿ ಕೈಲಾಸ ಎಂಬ ತನ್ನದೇ ಆದ ದೇಶ ನಿರ್ಮಿಸಿರುವುದಾಗಿ ವೆಬ್‌ಸೈಟ್‌ ಒಂದರಲ್ಲಿ ಹೇಳಿಕೊಂಡಿದ್ದರು. ಇವರ ಕೈಲಾಸದಲ್ಲಿ ಹಣದ ಹರಿವಿಗೆ ಕ್ರಿಪ್ಟೋಕರೆನ್ಸಿ ಅಥವಾ ಡಿಜಿಟಲ್ ರೂಪದ ಗೂಢ ಹಣ ಚಲಾವಣೆ ಪದ್ಧತಿಗೆ ಅವಕಾಶ ಕೊಡಲಾಗಿದೆ. ಹಿಂದೂ ಧಾರ್ಮಿಕ ಭಕ್ತರು ಕೈಲಾಸದಲ್ಲಿ ಹಣ ಹೂಡಿಕೆ ಮಾಡಬಹುದು. ಇಲ್ಲಿ ಹೂಡಿಕೆದಾರರಿಗೆ ಆಕರ್ಷಕ ಲಾಭ ಸಿಗುತ್ತದೆ ಎಂದು ಕೂಡ ಈಗಾಗಲೇ ಸುದ್ದಿಯಾಗಿತ್ತು.
ಆ ಸುದ್ದಿ ಏನೇ ಇರಲಿ, ಆದರೆ ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ನಿತ್ಯಾನಂದರ ಭಕ್ತರು ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಇದ್ದಾರೆ. ಆದರೆ ಇದೇ ವೇಳೆ ನಿತ್ಯಾನಂದ ಸ್ವಾಮಿ ಭಾರತೀಯ ಭಕ್ತರಿಗೆ ಶಾಕಿಂಗ್‌ ನ್ಯೂಸ್‌ ಒಂದನ್ನು ಕೊಟ್ಟಿದ್ದಾರೆ. ಅದೇನೆಂದರೆ ತಮ್ಮ ಕೈಲಾಸಕ್ಕೆ ಭಾರತೀಯರ ಪ್ರವೇಶವನ್ನು ನಿರ್ಬಂಧಿಸಿ ಅವರು ಆದೇಶ ಹೊರಡಿಸಿದ್ದಾರೆ!
ಕರೊನಾ ಎರಡನೆಯ ಅಲೆಗೆ ಭಾರತ ತತ್ತರಿಸಿಹೋಗುತ್ತಿರುವ ಕಾರಣ ಸೋಂಕಿತರಿಂದ ತಮ್ಮ ಕೈಲಾಸ ಪರ್ವತ ಸೋಂಕಿಗೆ ಒಳಗಾಗಬಾರದು ಎನ್ನುವ ಕಾರಣಕ್ಕೆ ಇಂಥದ್ದೊಂದು ಆದೇಶವನ್ನು ನಿತ್ಯಾನಂದ ಹೊರಡಿಸಿದ್ದಾರೆ.
ಬ್ರಿಟನ್​, ಅಮೆರಿಕ, ಹಾಂಕ್​ಕಾಂಗ್​ ಮತ್ತು ಸಿಂಗಪೂರ ದೇಶಗಳು ತಮ್ಮ ದೇಶದ ಜನರಿಗೆ ಭಾರತ ಪ್ರವಾಸವನ್ನು ಮುಂದೂಡುವಂತೆ ತಿಳಿಸಿದ ಬೆನ್ನಲ್ಲೇ ನಿತ್ಯಾನಂದ ಅವರಿಂದಲೂ ಈಗ ಇಂಥದ್ದೊಂದು ಎಕ್ಸಿಕ್ಯೂಟಿವ್‌ ಆರ್ಡರ್‌ ಬಂದಿದೆ.
ಪಾಕಿಸ್ತಾನದಿಂದ ಹಾರಿ ಬಂದು ಯೋಧನ ಮೇಲೆ ಕುಳಿತ ಪಾರಿವಾಳ! ಕಾಲಿನಲ್ಲಿ ನಿಗೂಢ ಸಂಖ್ಯೆಗಳು…

ವೀಕೆಂಡ್‌ ಕರ್ಫ್ಯೂನಲ್ಲೇ ಮದುವೆ ಫಿಕ್ಸ್‌ ಆಗಿಬಿಟ್ಟಿದ್ಯಾ? ಹಾಗಿದ್ರೆ ಇವೆಲ್ಲಾ ನಿಯಮಗಳ ಪಾಲನೆ ಕಡ್ಡಾಯ…

ಅಮ್ಮನಿಗೆ ತವರಿನಿಂದ ಬಂದ ಆಸ್ತಿಯಲ್ಲಿ ಮಕ್ಕಳಿಗೆ ಯಾವಾಗ, ಎಷ್ಟು ಭಾಗ ಪಾಲು ಸಿಗುತ್ತದೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
