ಬೆಂಗಳೂರು:ನಾಳೆಯಿಂದ ಆಗಸ್ಟ್ 22ರವರೆಗೆ ಹಿಂದೆಂದಿಗಿಂತಲೂ ಭೀಕರ ಚಳಿ ಇರುತ್ತದೆ. ಇದನ್ನು ಅಲ್ಬೆಲಿಯನ್ ವಿದ್ಯಮಾನ ಎಂದು ಕರೆಯಲಾಗುತ್ತದೆ. ಇದು ನಾಳೆ ಬೆಳಗ್ಗೆ 5-27 ಕ್ಕೆ ಪ್ರಾರಂಭವಾಗಿ 2022ರ ಆಗಸ್ಟ್​ನಲ್ಲಿ ಕೊನೆಗೊಳ್ಳುತ್ತದೆ….
ಈ ರೀತಿಯ ಮೆಸೇಜ್​ ನಿಮಗೂ ಬಂದಿರಬೇಕಲ್ಲವೆ? ವಾಟ್ಸ್​ಆ್ಯಪ್​, ಫೇಸ್​ಬುಕ್​ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಭಾರಿ ವೈರಲ್​ ಆಗುತ್ತಿದೆ ಈ ಮೆಸೇಜ್​.
ಇವತ್ತಿನಿಂದ (ಜೂನ್​ 23) ಆಗಸ್ಟ್ 22ರವರೆಗೆ… ಎಂದು ಕಳೆದ ಒಂದು ವಾರದಿಂದ ಈ ಸಂದೇಶ ಹರಿದಾಡುತ್ತಿದೆ. ದಿನಗಳೆದಂತೆ ಜೂನ್​ 23 ಹೋಗಿ “ನಾಳೆಯಿಂದ” ಎಂದು ಸಂದೇಶವನ್ನು ಫಾರ್ವರ್ಡ್​ ಮಾಡಲಾಗುತ್ತಿದೆ. ಈ ವಾತಾವರಣದಿಂದ ಜ್ವರ, ಕೆಮ್ಮು ಹೆಚ್ಚಿನ ರೀತಿಯಲ್ಲಿ ಕಾಣಿಸಿಕೊಳ್ಳಲಿದೆ. ಉಸಿರಾಟದ ತೊಂದರೆ ಉಂಟಾಗುತ್ತದೆ. ಸೂರ್ಯ ಮತ್ತು ಭೂಮಿಯ ನಡುವಿನ ಅಂತರವು 90,000,000 ಕಿ.ಮೀ. ಆದರೆ ಈ ಅಲ್ಬೆಲಿಯನ್ ವಿದ್ಯಮಾನದ ಸಮಯದಲ್ಲಿ, ಎರಡರ ನಡುವಿನ ಅಂತರವು 152,000,000 ಕಿಮೀಗೆ ಹೆಚ್ಚಾಗುತ್ತದೆ. ಅಂದರೆ ಶೇ.66ರಷ್ಟು ಏರಿಕೆಯಾಗಿದೆ.
ದಯವಿಟ್ಟು ಇದನ್ನು ಕುಟುಂಬ, ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಿ… ಹೀಗೆಂದು ಸಂದೇಶದಲ್ಲಿ ಹೇಳಲಾಗಿದೆ.
ಇದನ್ನು ಓದಿ ಅನೇಕ ವಯಸ್ಸಾದವರು ಹಾಗೂ ಅನಾರೋಗ್ಯಪೀಡಿತರು ಗಾಬರಿಯಾಗಿದ್ದಾರೆ. ಚಿಕ್ಕ ಮಕ್ಕಳನ್ನು ಹೊರಗೆ ಕಳುಹಿಸುವುದು ಹೇಗೆ ಎಂದು ಪಾಲಕರು ಚಿಂತೆಗೀಡಾಗಿದ್ದು, ಈ ಬಗ್ಗೆ ಜಾಲತಾಣದಲ್ಲಿ ಹಲವಾರು ಮಂದಿ ಅಳಲು ತೋಡಿಕೊಳ್ಳುತ್ತಿದ್ದಾರೆ.
ಆದರೆ ಈ ಸಂದೇಶ ಸುಳ್ಳು. ಮಾಮೂಲಿಯಂತೆ ಚಳಿ, ಮಳೆ ಎಲ್ಲವೂ ಇರಲಿದೆ. ಆದರೆ ಹಿಂದಿಗಿಂತಲೂ ಭೀಕರ ಎನ್ನುವುದೆಲ್ಲಾ ಸುಳ್ಳು ಎಂದು ಫ್ಯಾಕ್ಟ್​ಚೆಕ್​ ಮಾಡಿದಾಗ ತಿಳಿದುಬಂದಿದೆ. ಸೂರ್ಯ ಮತ್ತು ಭೂಮಿಯ ನಡುವಿನ ಅಂತರವು ಕೆಲವೊಂದು ದಿನಗಳಲ್ಲಿ ಕಡಿಮೆಯಾಗುವುದು ಮಾಮೂಲು. ಇದು ಪ್ರಕೃತಿಯ ನಿಯಮ. ಆದರೆ ಜನರಿಗೆ ಸುಖಾಸುಮ್ಮನೆ ಭೀತಿ ಹುಟ್ಟಿಸುವ ನಿಟ್ಟಿನಲ್ಲಿ ಈ ಸುದ್ದಿಯನ್ನು ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂದು ತಿಳಿದುಬಂದಿದೆ.(ಏಜೆನ್ಸೀಸ್​)
ಕಾಶ್ಮೀರಿ ಪಂಡಿತರ ನರಮೇಧವನ್ನು ಗೋಕಳ್ಳರ ಮೇಲಿನ ದಾಳಿಗೆ ಹೋಲಿಸಿದ ನಟಿಗೆ ಕೋರ್ಟ್​ನಿಂದ ಮುಖಭಂಗ

ಜಮೀರ್​ ವಿರುದ್ಧ ಎಫ್​ಐಆರ್​: ಶಾಸಕ ಸ್ಥಾನಕ್ಕೆ ಕುತ್ತು? ಇ.ಡಿ ಕೊಟ್ಟಿರೋ ಶಾಕಿಂಗ್​ ಆಸ್ತಿ ಡಿಟೇಲ್ಸ್​ ನೋಡಿ!

ಇನ್​ಸ್ಟಾಗ್ರಾಂನಲ್ಲಿ 3 ತಿಂಗಳ ಲವ್​: ಪ್ರೀತಿಗೆ ಬಿದ್ದು ಜೀವ ಕಳೆದುಕೊಂಡ ಚಿಂತಾಮಣಿ ವಿದ್ಯಾರ್ಥಿನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − seven =
Remember me
