ಥಾಣೆ:ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ 5 ಮತ್ತು 6ನೇ ರೈಲು ಮಾರ್ಗಗಳ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಹಾಜರಾಗಿದ್ದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಇತರ ಗಣ್ಯರು ಭಾರಿ ಟ್ರೋಲ್‌ ಆಗಿದ್ದಾರೆ. ರೈಲು ಮಾರ್ಗಗಳ ಉದ್ಘಾಟನಾ ಸಮಾರಂಭದ ನಂತರ ಅಶ್ವಿನಿ ವೈಷ್ಣವ್ ಅವರು ಇನ್ನಿತರ ಜತೆ ಹೋಟೆಲ್‌ ಒಂದರಲ್ಲಿ ವಡಾಪಾವ್‌ ತಿಂದು ಬಿಲ್‌ ಪಾವತಿ ಮಾಡದೇ ಹೋದದ್ದೇ ಮುಜುಗರಕ್ಕೆ ಕಾರಣವಾಗಿದೆ.
ಆಗಿದ್ದೇನೆಂದರೆ, ಪ್ರಧಾನಿ ಜತೆ ಕಾರ್ಯಕ್ರಮದಲ್ಲಿ ಬಂದಿದ್ದ ಅವರು, ಕಾರ್ಯಕ್ರಮದ ನಂತರ ರೈಲು ನಿಲ್ದಾಣದ ಹೊರಗಿರುವ ಹೋಟೆಲ್​ನಲ್ಲಿ ವಡಾ ಪಾವ್ ತಿಂದಿದ್ದರು. ಹೋಟೆಲ್‌ ಗಜಾನನ್‌ನಲ್ಲಿ ಈ ಘಟನೆ ನಡೆದಿದೆ. ಸಚಿವ ಅಶ್ವಿನಿ ವೈಷ್ಣವ್ ಜತೆಗೆ ರೈಲ್ವೆ ಖಾತೆ ರಾಜ್ಯ ಸಚಿವ ರಾವ್ಸಾಹೇಬ್ ದಾನ್ವೆ, ಸಂಸದ ವಿನಯ್ ಸಹಸ್ರಬುದ್ಧೆ, ಬಿಜೆಪಿ ಶಾಸಕ ಸಂಜಯ್ ಕೇಲ್ಕರ್, ಶಾಸಕ ನಿರಂಜನ್ ದಾವ್ಖರೆ. ಶಾಸಕ ನಿರಂಜನ್ ದಾವ್ಖರೆ ಮತ್ತಿತರರರು ವಡಾಪಾವ್ ಸೇವಿಸಿದ್ದರು. ಆದರೆ ಹಣ ಕೊಟ್ಟಿರಲಿಲ್ಲ. ಇದರಿಂದ ಅಸಮಾಧಾನಗೊಂಡಿದ್ದ ಮಾಲೀಕ ಸಾಮಾಜಿಕ ಜಾಲತಾಣಗಳಲ್ಲಿ ವಿಚಾರ ಶೇರ್‌ ಮಾಡಿದ್ದರು. ಮಾತ್ರವಲ್ಲದೇ ವಿಡಿಯೋ ಕೂಡ ಪೋಸ್ಟ್ ಮಾಡಿದ್ದರು.
ಇದರಿಂದ ಮುಜುಗರಕ್ಕೆ ಒಳಗಾದ ನಂತರ ಬಿಜೆಪಿ ಕಾರ್ಯಕರ್ತರೊಬ್ಬರು ಹೋಟೆಲ್​ಗೆ ಬಂದು ಎರಡು ಸಾವಿರ ರೂಪಾಯಿ ಬಿಲ್ ಪಾವತಿಸಿದ್ದಾರೆ.
‘ಆಗ ನಾನು ಸಿಎಂ ಅಲ್ಲ, ಕ್ಲರ್ಕ್‌ ಆಗಿದ್ದೆ: ಈಗ 10 ವರ್ಷಗಳ ಹಗರಣ ಲಿಸ್ಟ್‌ ಮಾಡ್ಕೊಂಡು ಬಂದ್ರೂ ಪ್ರಯೋಜನವಾಗ್ಲಿಲ್ಲ’

ಸಿಖ್‌ ಮುಖಂಡರ ಜತೆ ಕೈ ಹಿಡಿದು ಹೆಜ್ಜೆ ಹಾಕಿದ ಪ್ರಧಾನಿ: ಊಟದ ಸಮಯದಲ್ಲಿ ತಟ್ಟೆ ಕೊಟ್ಟು ಸತ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
