ಜೈಪುರ (ರಾಜಸ್ಥಾನ):ಮೀಸೆ ಹೊತ್ತ ಗಂಡಸಿಗೆ ಡಿಮಾಂಡಪ್ಪೋ ಡಿಮಾಂಡು ಎಂದು ಹಾಡು ಸೂಪರ್​ಹಿಟ್​ ಆಗಿತ್ತು. ಆದರೆ ಈಗ ಸ್ವಲ್ಪ ಬದಲಾವಣೆಯಾಗಿದ್ದು, ಗಡ್ಡ ಹೊತ್ತ ಗಂಡಸಿಗೆ ಡಿಮಾಂಡೋ ಎನ್ನುವಂತೆ ಆಗಿದೆ. ಇದಕ್ಕೆ ಕಾರಣ, ಚಿತ್ರನಟರು. ನಟ ಯಶ್​ ಸೇರಿದಂತೆ ಕೆಲವು ಸಿನಿ ಸ್ಟಾರ್​ಗಳು ಗಡ್ಡ ಬಿಡುತ್ತಿದ್ದಂತೆಯೇ ಅವರಂತೆಯೇ ತಾವು ಗಡ್ಡ ಬಿಟ್ಟು ಮಿಂಚುತ್ತಿರುವ ಹುಡುಗರು ಅದೆಷ್ಟೋ ಮಂದಿ. ತಮ್ಮ ನೆಚ್ಚಿನ ತಾರೆಯರನ್ನೇ ಅನುಸರಿಸುವ ಅಭಿಮಾನಿಗಳಲ್ಲಿ ಈಗ ಗಡ್ಡ ಬಹಳ ಫ್ಯಾಷನ್​ ಆಗಿಬಿಟ್ಟಿದೆ.
ಆದರೆ ಇಲ್ಲೊಂದು ಕಡೆ ಮಾತ್ರ ಮದುವೆಯಾಗಬೇಕು ಎಂದರೆ ಪುರುಷರು ಗಡ್ಡ ಬಿಡೋ ಹಾಗಿಲ್ಲ! ಏಕೆಂದರೆ ಗಡ್ಡ ಇದ್ದವರನ್ನು ಮದುವೆಯಾಗದಿರಲು ಹುಡುಗಿಯರು ನಿರ್ಧರಿಸಿದ್ದಾರೆ. ಕ್ಲೀನ್​ ಆಗಿ ಶೇವ್​ ಮಾಡಿಕೊಂಡವರು ಮಾತ್ರ ತಮ್ಮ ಗಂಡ ಆಗಬೇಕು ಎನ್ನುವುದು ಅವರ ಆಸೆ.
ಹಾಗಂತ ನೀವೇನೋ ಅಷ್ಟು ಹೆದರಬೇಕಾಗಿಲ್ಲ. ಏಕೆಂದರೆ ಹೀಗೆ ನಿರ್ಧಾರ ಮಾಡಿರುವವರು ರಾಜಸ್ಥಾನದ ಕೆಲವು ಸಮಯದಾಯದ ಹುಡುಗಿಯರು. ರಾಜಸ್ಥಾನದ ಪಾಲಿ ಜಿಲ್ಲೆಯ 19 ಗ್ರಾಮಗಳ ಕುಮಾವತ್ ಸಮುದಾಯವು ಈ ನಿರ್ಣಯ ಅಂಗೀಕರಿಸಿದೆ. ತಮ್ಮ ಹೆಣ್ಣುಮಕ್ಕಳನ್ನು ಕ್ಲೀನ್ ಶೇವ್ ಹೊಂದಿರುವ ಯುವಕರಿಗೆ ಮಾತ್ರ ನೀಡಲು ಇದರಲ್ಲಿ ನಿರ್ಧಾರ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಗಡ್ಡ ಬಿಟ್ಟವರಿಗೆ ಹುಡುಗಿಯನ್ನು ನೀಡಬಾರದು ಎಂದು ನಿರ್ಣಯ ಮಂಡಿಸಲಾಗಿದೆ.
ಅಷ್ಟಕ್ಕೂ ಈ ಕಠಿಣ ನಿರ್ಧಾರಕ್ಕೆ ಕಾರಣವೇನು ಗೊತ್ತಾ? ಮದುವೆ ಸಂಸ್ಕಾರ ಮತ್ತು ಕೆಲವು ಧಾರ್ಮಿಕ ಆಚರಣೆಗಳಲ್ಲಿ ವರ ಎಂದರೆ ರಾಜ. ಗಡ್ಡ ಬಿಟ್ಟರೆ ಅದೊಂದು ರೀತಿಯಲ್ಲಿ ಕೊಳಕು ಎನ್ನುವ ಭಾವನೆ ಈ ಸಮಯದಾಯದ್ದು. ಆದ್ದರಿಂದ ರಾಜನಂತೆಯೇ ವರ ಇರಬೇಕು. ಹೀಗಾಗಿ ಕ್ಲೀನ್ ಶೇವ್ ಮಾಡಿಕೊಳ್ಳಬೇಕು ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ. ಯುವಕರು ಫ್ಯಾಷನ್ ಅಂತ ಗಡ್ಡ ಬಿಡಬಹುದು. ಆದರೆ ಮದುವೆಗೆ ಅಂತ ಹೆಣ್ಣು ನೋಡುವಾಗ, ಮದುವೆ ಆಗುವಾಗ ಯಾವುದೇ ಕಾರಣಕ್ಕೂ ಗಡ್ಡ ಬಿಡುವಂತಿಲ್ಲ ಅಂತ ಕಟ್ಟು ನಿಟ್ಟಿನ ನಿಯಮ ಮಾಡಿದೆ.
ಇಷ್ಟೇ ಅಲ್ಲದೇ, 19 ಗ್ರಾಮಗಳ ಪಂಚಾಯಿತಿಯು ಮದುವೆಯ ವೆಚ್ಚವನ್ನು ಕಡಿತಗೊಳಿಸಲು ಮತ್ತು ಅವುಗಳನ್ನು ಸರಳಗೊಳಿಸಲು ಹಲವು ನಿಯಮಗಳನ್ನು ಮಾಡಿವೆ. ಈ ಸಮುದಾಯದನರು ಬೇರೆ ಊರಿನಲ್ಲಿದ್ದರೂ ಈ ನಿಯಮ ಕಡ್ಡಾಯವಾಗಿದೆ.
ಕುಮಾವತ್ ಸಮುದಾಯದ 19 ಹಳ್ಳಿಗಳಿಂದ ಸುಮಾರು 20 ಸಾವಿರ ಜನರು ಗುಜರಾತ್, ಮಹಾರಾಷ್ಟ್ರ ಮತ್ತು ದಕ್ಷಿಣ ರಾಜ್ಯಗಳ ವಿವಿಧ ನಗರಗಳಿಗೆ ವಲಸೆ ಹೋಗಿದ್ದಾರೆ. ಅವರು ವಾಸಿಸುವ ನಗರಗಳಲ್ಲಿ ಆಚರಣೆಗಳನ್ನು ಮಾಡಿದರೂ ಅವರು ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ. ಒಂದು ವೇಳೆ ಇದನ್ನು ಮೀರಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ. ಗಡ್ಡ ಬಿಡುವುದು ಮಾತ್ರವಲ್ಲದೇ ಜನರು ಬಟ್ಟೆ ಮತ್ತು ಅಲಂಕಾರಕ್ಕಾಗಿ ದುಡ್ಡು ಖರ್ಚು ಮಾಡಿದರೆ, ಅವರಿಗೆ ದಂಡ ವಿಧಿಸಲಾಗುತ್ತದೆ ಎಂದು ನಿಯಮದಲ್ಲಿ ತಿಳಿಸಲಾಗಿದೆ.
‘ತಂಗೀ… ಗಂಡನ ಜತೆ ಮನೆಗೆ ಊಟಕ್ಕೆ ಬಾ’ ಎಂದು ನವವಿವಾಹಿತರನ್ನು ಕರೆದು ಇಬ್ಬರ ಕೊಲೆ ಮಾಡಿದ ಅಣ್ಣ!

ನಮಾಜ್​ ನಂತರ ದ್ವೇಷ ಭಾಷಣ ಮಾಡಬೇಡಿ ಎಂದಿದ್ದಕ್ಕೆ ಇನ್ಸ್​ಪೆಕ್ಟರ್​ ರಾತ್ರೋರಾತ್ರಿ ಎತ್ತಂಗಡಿ!

ಹೊಸ ಗ್ಯಾಸ್​ ಕನೆಕ್ಷನ್​ ಬೇಕಾ? 2 ಸಿಲಿಂಡರ್​ ಅಗತ್ಯವಿದೆಯಾ? ರೇಟಾಯ್ತು ದುಪ್ಪಟ್ಟು- ಇಲ್ಲಿದೆ ನೋಡಿ ಡಿಟೇಲ್ಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 10 =
Remember me
