ಮುಂಬೈ:ಇಂದು ಬೆಳಗ್ಗೆಯಿಂದ ವಾಣಿಜ್ಯನಗರಿ ಮುಂಬೈನ ಬಹುತೇಕ ಕಡೆಗಳಲ್ಲಿ ಕರೆಂಟ್​ ಕೈಕೊಟ್ಟಿದೆ. ಇದರಿಂದಾಗಿ ಜನರು ಪರದಾಡುತ್ತಿದ್ದಾರೆ.
ಹೇಳಿಕೇಳಿ ಇರುವ ವಾಣಿಜ್ಯನಗರಿ. ಇಲ್ಲಿಯ ಬಹುತೇಕ ಕೆಲಸಗಳಿಗೆ ವಿದ್ಯುಚ್ಛಕ್ತಿಯ ಅವಶ್ಯಕತೆ ಇದ್ದೇ ಇದೆ. ಆದರೆ ವಿದ್ಯುತ್​ ಕೈಕೊಟ್ಟಿದ್ದರಿಂದ ಮನೆಗಳ ಕೆಲಸ ಕಾರ್ಯಗಳು ಮಾತ್ರವಲ್ಲದೇ ಬಹುತೇಕ ಕಾರ್ಖಾನೆಗಳೂ ಕೆಲಸವನ್ನು ಸ್ಥಗಿತಗೊಳಿಸಬೇಕಾಗಿ ಬಂತು.
ಇದರಿಂದಾಗಿ ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ (ಬಿಎಸ್‌ಇಟಿ) ಟ್ವಿಟರ್​ ಖಾತೆಗೆ ಮೆಸೇಜ್​ಗಳ ಮಹಾಪೂರವೇ ಹರಿದುಬಂದಿದೆ.
https://twitter.com/myBESTElectric/status/1315514398207733763
ಟಾಟಾದಿಂದ ಪೂರೈಕೆಯಾಗಬೇಕಿರುವ ವಿದ್ಯುತ್​ನಲ್ಲಿ ಕೆಲವೊಂದು ತಾಂತ್ರಿಕ ಕಾರಣದಿಂದಾಗಿ ಸಮಸ್ಯೆಯುಂಟಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಿದೆ, ದಯವಿಟ್ಟು ಕ್ಷಮಿಸಿ ಎಂದು ಬಿಎಸ್​ಇಟಿ ಕ್ಷಮೆ ಕೋರಿದೆ.
ಇದರ ಹೊರತಾಗಿಯೂ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ಗೆ (ಬಿಎಸ್ಇ) ಯಾವುದೇ ಸಮಸ್ಯೆ ಉಂಟಾಗಿಲ್ಲ, ಜನರು ಹೆದರುವ ಅಗತ್ಯವಿಲ್ಲ ಎಂದು ಸಂದೇಶ ರವಾನಿಸಲಾಗಿದೆ. ಬಿಎಸ್​ಇ ವಿದ್ಯುತ್ ಕಡಿತದ ಹೊರತಾಗಿಯೂ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:twenty − four =
Remember me
