ನವದೆಹಲಿ:ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಬಿಲ್‌ ಮೇಲೆ ‘ಸೇವಾ ಶುಲ್ಕ’ (service charge ) ವಿಧಿಸುವುದು ಕಾನೂನು ಬಾಹಿರ ಎಂದಿರುವ ಗ್ರಾಹಕ ವ್ಯವಹಾರಗಳ ಸಚಿವಾಲಯ, ಈ ಶುಲ್ಕವನ್ನು ವಿಧಿಸದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಗ್ರಾಹಕ ವ್ಯವಹಾರಗಳ ಸಚಿವಾಲಯವು ರೆಸ್ಟೋರೆಂಟ್ ಬಿಲ್‌ಗಳ ಮೇಲಿನ ಸೇವಾ ಶುಲ್ಕ ವಿಧಿಸುವ ವಿಚಾರವಾಗಿ ಚರ್ಚೆ ನಡೆಸಲು ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (FHRAI) ಜತೆ ಗುರುವಾರ ಸಭೆ ನಡೆಸಿದ್ದು ಈ ಕುರಿತು ಮಾಹಿತಿ ನೀಡಿದೆ.
ಈ ಸಭೆಯಲ್ಲಿ ಹೋಟೆಲ್ ಸಂಘಟನೆಗಳ ಪ್ರತಿನಿಧಿಗಳು ಮೆನುವಿನಲ್ಲಿ ಉಲ್ಲೇಖಿಸಿರುವ ಸೇವಾ ಶುಲ್ಕಕ್ಕೆ ಗ್ರಾಹಕರ ಅನುಮತಿಯೂ ಇದೆ ಎಂದರ್ಥದಲ್ಲಿ ಸಮರ್ಥಿಸಿಕೊಂಡರು. ಆದರೆ, ಇದನ್ನು ಸಚಿವಾಲಯ ತಳ್ಳಿ ಹಾಕಿತು. ಗ್ರಾಹಕರು ಸೇವಾ ಶುಲ್ಕವನ್ನು (Service Charge) ಸೇವಾ ತೆರಿಗೆ (Service tax) ಎಂದೇ ಭಾವಿಸಿ ಗ್ರಾಹಕರು ಅದನ್ನು ಪಾವತಿಸುತ್ತಿದ್ದಾರೆ. ಇದು ತಪ್ಪು. ಸೇವಾ ಶುಲ್ಕದಲ್ಲಿ ಏಕರೂಪತೆ ಇಲ್ಲ, ಒಂದೊಂದು ಹೋಟೆಲ್ ಒಂದೊಂದು ಸೇವಾ ಶುಲ್ಕ ವಿಧಿಸುತ್ತಿವೆ. ಆದ್ದರಿಂದ ಇನ್ನು ಮುಂದೆ ಈ ಸೇವಾ ಶುಲ್ಕವನ್ನು ವಿಧಿಸುವಂತಿಲ್ಲ ಎಂದಿದೆ.
ಶೀಘ್ರದಲ್ಲೀ ಈ ಕುರಿತು ಸಂವಿಧಾನಾತ್ಮಕವಾಗಿ ಕಾನೂನು ರೂಪಿಸಲಾಗುವುದು ಎಂದು ಸಚಿವಾಲಯ ಹೇಳಿದೆ. ರೆಸ್ಟೋರೆಂಟ್‌ಗಳಲ್ಲಿ ಶುಲ್ಕ ವಿಧಿಸುವುದನ್ನು ತಪ್ಪಿಸುವದರ ಜೊತೆಗೆ ಗ್ರಾಹಕರ ಹಿತಾಸಕ್ತಿ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಆದರೆ ಇದಕ್ಕೆ ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ ಉಪಾಧ್ಯಕ್ಷ ಗುರುಭಕ್ಷೀಸ್ ಸಿಂಗ್ ಕೊಹ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೇವಾ ಶುಲ್ಕವನ್ನು ವಿಧಿಸುವುದು ಕಾನೂನಿನ ಉಲ್ಲಂಘನೆಯಲ್ಲ, ಸೇವಾ ಶುಲ್ಕ ಹೋಟೆಲ್ ಅಥವಾ ರೆಸ್ಟೋರೆಂಟ್ ಸಿಬ್ಬಂದಿಗೆ ಪ್ರಯೋಜನಕಾರಿ ಮೊತ್ತವಾಗಿದೆ. ಕೆಲವು ಸಂಸ್ಥೆಗಳು ತನ್ನ ಸಿಬ್ಬಂದಿಗೆ ಸೇವಾ ಶುಲ್ಕದಲ್ಲಿ ಪಾಲು ನೀಡುವ ಆಯ್ಕೆಯನ್ನು ನೀಡಿರುತ್ತವೆ. ಇದು ಅಕ್ರಮ ಅಲ್ಲ, ಸೇವಾ ಶುಲ್ಕ ವಿಧಿಸುವುದು ಕಾನೂನು ಉಲ್ಲಂಘನೆಯಾಗದು” ಎಂದಿದ್ದಾರೆ. ಆದರೆ ಎಲ್ಲರೂ ಇನ್ನುಮುಂದೆ ಸಚಿವಾಲಯದ ಆದೇಶವನ್ನು ಪಾಲನೆ ಮಾಡಬೇಕಿದೆ.
ಮರು ಮದುವೆಯಾದಾಕೆ, ತನ್ನ ಮಗುವಿನ ಅಪ್ಪನ ಹೆಸರು ಬದಲಿಸಬಹುದೆ? ಕಾನೂನು ಏನು ಹೇಳಿದೆ ನೋಡಿ…

ಪ್ರತಿ ಮಸೀದಿಯಲ್ಲಿ ಶಿವಲಿಂಗ ಹುಡುಕೋದ್ಯಾಕೆ? ಅವರೇನೂ ಹೊರಗಿನವರಲ್ಲ: ಸಂಚಲನ ಮೂಡಿಸಿದ ಭಾಗವತ್​ ಹೇಳಿಕೆ

ಸ್ಯಾಂಡಲ್​ವುಡ್​ ಹಿರಿಯ ನಟ ಉದಯ್​ ಇನ್ನಿಲ್ಲ: ‘ದೇವತಾ ಮನುಷ್ಯ’ದಲ್ಲಿ ಮಿಂಚಿದ್ದ ನಟನಿಗೆ ಗಣ್ಯರ ಕಂಬನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − two =
Remember me
